ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಪೋಲಿ'ಸ್ ತರಬೇತಿ: ಗರ್ಭ ಧರಿಸಿದ 11 ಮಹಿಳಾ ಪೇದೆಗಳು! (Police Training | Constable training | Sexual Harrasment | 11 Women Pregnant)
PTI
ಇದೆಂಥಾ ತರಬೇತಿ ಅಂತ ಕೇಳಬೇಡಿ. ಪೊಲೀಸ್ ತರಬೇತಿಯೇ ಆದರೂ, ಪೋಲಿ ತರಬೇತಿಯಾಗಿತ್ತಾ ಅಂತಲೂ ಕೇಳದಿರಿ. ಹೌದು, ಕೊಲ್ಲಾಪುರ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ 11 ಮಂದಿ ಮಹಿಳಾ ಕಾನ್‌ಸ್ಟೇಬಲ್‌ಗಳು ಗರ್ಭವತಿಯರಾಗಿದ್ದಾರೆ!

ಇಂಥಾ ಆಘಾತಕಾರಿ ಘಟನೆ ನಡೆದದ್ದು ಪೊಲೀಸ್ ಇನ್‌ಸ್ಪೆಕ್ಟರ್ ಯುವರಾಜ್ ಕಾಂಬ್ಳೆ ಎಂಬಾತನ 'ತರಬೇತಿ'ಯಿಂದ ಎಂಬುದು ಇದೀಗ ಬಯಲಾಗಿದೆ. 11 ಮಂದಿಯೂ ಈಗ ಗರ್ಭಿಣಿಯರಾಗಿದ್ದಾರೆ. ಕಾಂಬ್ಳೆಯನ್ನು ಈಗಾಗಲೇ ಬಂಧಿಸಲಾಗಿದೆಯಾದರೂ, ಆತ ಒಬ್ಬನೇ ಅಲ್ಲ, ಇದರ ಹಿಂದೆ ಇನ್ನೆಷ್ಟು ಮಂದಿ ಇದ್ದಾರೆ ಎಂಬುದು ವಿಚಾರಣೆಯಿಂದ ಬೆಳಕಿಗೆ ಬರಬೇಕಿದೆ.

11 ಮಂದಿ ಮಹಿಳಾ ಕಾನ್‌ಸ್ಟೇಬಲ್‌ಗಳಿಗೂ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ಅವರೆಲ್ಲರೂ ಗರ್ಭಿಣಿಯರೆಂಬುದು ಮಂಗಳವಾರ ದೃಢಪಟ್ಟಿದೆ. ಅವರಲ್ಲಿ ಹೆಚ್ಚಿನವರು ಅವಿವಾಹಿತರು.

ಯುವರಾಜನಿಗೆ ಹೊಸದಾಗಿ ಸೇರಿದ ಕಾನ್‌ಸ್ಟೇಬಲ್‌ಗಳಿಗೆ ತರಬೇತಿ ನೀಡುವ ಹೊಣೆ ವಹಿಸಲಾಗಿತ್ತು. ಆದರೆ ಆತ ಮಾತ್ರ ಲೈಂಗಿಕವಾಗಿಯೇ ತರಬೇತಿ ಕೊಟ್ಟಂತೆ ಕಾಣಿಸುತ್ತದೆ. ಈತ ತರಬೇತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕೊಡಿಸುವುದಾಗಿ ಮನೆಗೆ ಕರೆದು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ಒಬ್ಬ ಮಹಿಳೆ ಹೇಳಿದ್ದಾಳೆ. ಅತ್ಯಾಚಾರ ಕೇಸು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಈ ಘಟನೆಯ ಕುರಿತು ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್.ಪಾಟೀಲ್ ಅವರು ತನಿಖೆಗೆ ಆದೇಶಿಸಿದ್ದಾರೆ.
ಇವನ್ನೂ ಓದಿ