ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೈವಸ್ವರೂಪಿ ಶ್ರೀ ಸತ್ಯಸಾಯಿಬಾಬಾ ಅಂತ್ಯ ಸಂಸ್ಕಾರ (Sathya Sai Baba | Sai Central Trust | Prashanthi Nilayam)
PR
ಶ್ರೀ ಸತ್ಯ ಸಾಯಿಬಾಬಾ ಅವರ ಅಂತ್ಯಸಂಸ್ಕಾರಕ್ಕೆ ಎಲ್ಲಾ ದಿಕ್ಕುಗಳಿಂದ ಆಗಮಿಸಿದ ಭಕ್ತ ಸಮೂಹದಿಂದಾಗಿ ಪ್ರಶಾಂತಿ ನಿಲಯಂ ಮಾನವತ್ವದ ಸಾಗರದಂತೆ ಕಂಡುಬರುತ್ತಿದೆ. ಪ್ರಶಾಂತಿ ನಿಲಯಂ ಆವರಣದಲ್ಲಿರುವ ಸಾಯಿ ಕುಲವಂತ್ ಹಾಲ್‌ನಲ್ಲಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಮುಕ್ತಾಯಗೊಂಡಿವೆ.

ಬಾಬಾ ಅನರಿಗೆ 9 ಸಂಖ್ಯೆಯನ್ನು ಅದೃಷ್ಟ ಸಂಖ್ಯೆಯೆಂದು ಭಾವಿಸುತ್ತಿದ್ದ ಹಿನ್ನೆಲೆಯಲ್ಲಿ, ಇಂದು ಬೆಳಿಗ್ಗೆ 9 ಗಂಟೆಗೆ ನಿಖರವಾಗಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಆರಂಭವಾಗಿ 10.30ಕ್ಕೆ ಮುಕ್ತಾಯಗೊಂಡವು.

ಸಾಯಿಬಾಬಾ, ಸಾಯಿ ಕುಲವಂತ್ ಹಾಲ್‌‌ನಲ್ಲಿ ಕುಳಿತು ಭಕ್ತರನ್ನು ಆಶೀರ್ವದಿಸಿ, ಜಗತ್ತಿಗೆ ಸಂದೇಶವನ್ನು ನೀಡುತ್ತಿದ್ದರು. ಆಶ್ರಮವಾಸಿಗಳ ಪ್ರಕಾರ, ಹಲವು ವರ್ಷಗಳ ಹಿಂದೆ ಬಾಬಾ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವಾಗ ತಾವು ನಿಧನರಾದಲ್ಲಿ ಕುಲವಂತ್ ಹಾಲ್‌ನಲ್ಲಿ ಸಮಾಧಿ ಮಾಡಬೇಕು ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.

ಬಾಬಾ ಅವರ ಸಮಾಧಿ ಸ್ಥಳದಲ್ಲಿ 7 ಅಡಿ ಆಳ ಮತ್ತು 12 ಅಡಿ ಉದ್ದ ಅಗೆಯಲಾಗಿದ್ದು, ರವಿವಾರದಿಂದ ಭಕ್ತರ ದರ್ಶನಕ್ಕಾಗಿ ಕಾಜಿನ ಪೆಟ್ಟಿಗೆಯಲ್ಲಿ ಇಡಲಾದ ಬಾಬಾ ಅವರ ಪಾರ್ಥಿವ ಶರೀರವನ್ನು ಸಮಾಧಿ ಸ್ಥಳದಲ್ಲಿ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಬಾಬಾ ಅವರ ಸಮಾಧಿ ಸ್ಥಳದಲ್ಲಿ ಕುರುಕ್ಷೇತ್ರದಿಂದ ತರಿಸಲಾದ ಮಣ್ಣನ್ನು ಹಾಕಲಾಗುತ್ತದೆ. ಉಪ್ಪು, ಬೆಳ್ಳಿ, ಚಿನ್ನ ಮತ್ತು ನವರತ್ನಗಳನ್ನು ಇಡಲಾಗುವುದು. ಮಲಗುವ ಸ್ಥಿತಿಯಲ್ಲಿ ಬಾಬಾ ಅವರನ್ನು ಸಮಾಧಿ ಮಾಡಲಾಗುತ್ತದೆ ಎಂದು ಪ್ರಶಾಂತಿ ನಿಲಯಂ ಅಧಿಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಸಾಯಿಬಾಬಾ ಅವರ ಸಮಾಧಿ ಸ್ಥಳದಲ್ಲಿ ಇಡುವ ಸಂದರ್ಭದಲ್ಲಿ, ಬಾಬಾ ಕುಟುಂಬದ ಸದಸ್ಯರು ಮತ್ತು ಸಾಯಿ ಸೆಂಟ್ರಲ್ ಟ್ರಸ್ಟ್ ಸದಸ್ಯರು ಮಾತ್ರ ಹಾಜರಿರಲಿದ್ದಾರೆ. ಕೆಲ ದಿನಗಳ ನಂತರ ಚಿನ್ನದಿಂದ ರೂಪಿಸಲಾದ ಬಾಬಾ ಅವರ ಮೂರ್ತಿಯನ್ನು ಸ್ಥಾಪಿಸಲಾಗುವುದು ಎಂದು ಪ್ರಶಾಂತಿ ನಿಲಯಂ ಅಧಿಕಾರಿಗಳು ತಿಳಿಸಿದ್ದಾರೆ.
ಇವನ್ನೂ ಓದಿ