ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾಯಿಬಾಬಾ ಹೆಸರಿನಲ್ಲಿ ನಯಾಪೈಸೆ ಆಸ್ತಿಯಿಲ್ಲ: ಟ್ರಸ್ಟ್ (Satya saibaba | Sai central trust | Puttaparthi)
PTI
ಸತ್ಯ ಸಾಯಿಬಾಬಾ ತಮ್ಮ ಹೆಸರಿನಲ್ಲಿ ಯಾವುದೇ ಆಸ್ತಿಯನ್ನು ಹೊಂದಿಲ್ಲ. ತಮ್ಮ ಉತ್ತರಾಧಿಕಾರಿಯನ್ನು ನೇಮಿಸಿಲ್ಲ ಮತ್ತು ಯಾವುದೇ ಉಯಿಲನ್ನು ಬರೆದಿಟ್ಟಿಲ್ಲ ಎಂದು ಶ್ರೀ ಸತ್ಯ ಸಾಯಿ ಟ್ರಸ್ಟ್ ತಿಳಿಸಿದೆ.

ಟ್ರಸ್ಟ್ ಆರಂಭಿಸಿದ ನಂತರ ಅದರ ಅಧ್ಯಕ್ಷರಾಗಿದ್ದ ಬಾಬಾ, ತಮ್ಮ ಸ್ವಂತ ಹೆಸರಿನಲ್ಲಿ ಯಾವುದೇ ಆಸ್ತಿ ಹೊಂದಿರಲಿಲ್ಲ. ಟ್ರಸ್ಟ್ ಹೆಸರಿನಲ್ಲಿ ದೇಣಿಗೆ ಹಣವನ್ನು ಬ್ಯಾಂಕ್ ಖಾತೆಗೆ ಹಾಕಲಾಗುತ್ತಿತ್ತು. ಭಕ್ತರೇ ತಮ್ಮ ಆಸ್ತಿ ಎಂದು ಹೇಳುತ್ತಿದ್ದರು. ಎಲ್ಲಾ ಆಸ್ತಿಯು ಟ್ರಸ್ಟ್ ಹೆಸರಿನಲ್ಲಿದೆ ಎಂದು ಟ್ರಸ್ಟ್ ಪರ ವಕೀಲ ನಾಗಾನಂದ್ ತಿಳಿಸಿದ್ದಾರೆ.

ಟ್ರಸ್ಟ್ ಸದಸ್ಯರಲ್ಲಿ ಭಿನ್ನಮತವಿದೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ಟ್ರಸ್ಟ್ ಸದಸ್ಯರು,ನಮಗೆ ಯಾವುದೇ ವೈಯಕ್ತಿಕ ಹಿತಾಸಕ್ತಿಗಳಿಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಟ್ರಸ್ಟ್ ಮತ್ತು ಸದಸ್ಯರ ಮಧ್ಯೆ ಬಿರುಕು ಸೃಷ್ಟಿಸುವ ಸಂಚು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹೊರಗಿನವರನ್ನು ಟ್ರಸ್ಟ್ ಅಧ್ಯಕ್ಷರಾಗಿ ನೇಮಕ ಮಾಡಲಾಗುತ್ತದೆ ಎನ್ನುವ ವರದಿಗಳನ್ನು ತಳ್ಳಿ ಹಾಕಿದ ಟ್ರಸ್ಟ್ ಸಮಿತಿ,ಟ್ರಸ್ಟ್ ಸದಸ್ಯರಲ್ಲಿ ಒಬ್ಬರು ಅಧ್ಯಕ್ಷರಾಗುತ್ತಾರೆ ಎಂದು ಸ್ಪಷ್ಟಪಡಿಸಿದೆ.

ಬಾಬಾ ಅವರ ಆಪ್ತರಾದ ಸತ್ಯಜಿತ್ ಅವರನ್ನು ಟ್ರಸ್ಟ್‌ಗೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಹೇಳಿಕೆಯನ್ನೂ ತಳ್ಳಿಹಾಕಿದ ಶ್ರೀನಿವಾಸನ್, ಟ್ರಸ್ಟ್‌ನ ನೌಕರರಾದ ಅವರನ್ನು ಬಾಬಾ ಕೆಲ ವೈಯಕ್ತಿಕ ಕೆಲಸಗಳಿಗೆ ನೇಮಿಸಿಕೊಂಡಿದ್ದರು. ಅದಕ್ಕಿಂತಲೂ ಹೆಚ್ಚಿನದಾಗಿ ಅವರೇನೂ ಆಗಿರಲಿಲ್ಲ. ಚೆಕ್‌ಗಳಿಗೆ ಸಹಿ ಹಾಕುವ ಅಧಿಕಾರ ಬಾಬಾ ಅವರಿಗೆ ಮಾತ್ರ ಇತ್ತು ಎಂದು ತಿಳಿಸಿದರು.
ಇವನ್ನೂ ಓದಿ