ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಂಗಾಳದ ಕೆಂಪು ಕೋಟೆ ಭಗ್ನ: ಅಧಿಕಾರಕ್ಕೇರಲಿರುವ ಮಮತಾ (West Bengal Election Results 2011 | Trinamool Congress | Congress | Mamata Banerjee)
ಕೆಂಪು ನಾಡು, 34 ವರ್ಷಗಳಿಂದ ಎಡರಂಗದ ಆಡಳಿತಕ್ಕೆ ಒಳಪಟ್ಟಿರುವ ಪಶ್ಚಿಮ ಬಂಗಾಳದ ಜನತೆ ಈ ಬಾರಿ ಭರ್ಜರಿ ಬದಲಾವಣೆ ಬಯಸಿದ್ದು, ಕೇಂದ್ರ ರೈಲ್ವೇ ಸಚಿವೆ, ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ನೇತೃತ್ವದ ಮತ್ತು ಕಾಂಗ್ರೆಸ್ ಕೂಡ ಇರುವ ಮೈತ್ರಿಕೂಟಕ್ಕೆ ಭರ್ಜರಿ ಮುನ್ನಡೆ ದೊರೆತಿದೆ. ತಮ್ಮ ಸರಕಾರ ಮೇ 18ರಂದು ಅಧಿಕಾರದ ಪ್ರಮಾಣ ವಚನ ಸ್ವೀಕರಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಈಗಾಗಲೇ ಘೋಷಿಸಿದ್ದಾರೆ.

ಕ್ಲಿಕ್ ಮಾಡಿ: ಎಲ್ಲ ರಾಜ್ಯಗಳ ಇತ್ತೀಚಿನ ಬಲಾಬಲವೇನು, ಟ್ರೆಂಡ್ ಏನು?

ಸಿಪಿಎಂ ನೇತೃತ್ವದ ಎಡಪಂಥೀಯ ರಂಗವು ನೆಲಕಚ್ಚಿದಂತೆ ಕಾಣಿಸುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಹೊಸ ಶಕೆಯ ಉದಯವಾಗುತ್ತಿದೆ. ಮೈತ್ರಿಕೂಟಕ್ಕೆ ಬಹುಮತ ದೊರೆತರೆ ತಾವು ಮುಖ್ಯಮಂತ್ರಿಯಾಗುವುದಾಗಿ ಈಗಾಗಲೇ ಮಮತಾ ಬ್ಯಾನರ್ಜಿ ಘೋಷಿಸಿರುವುದರಿಂದ ಅವರೇ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.

2006 ಚುನಾವಣೆಗಳಲ್ಲಿ 294ರಲ್ಲಿ 235 ಸ್ಥಾನಗಳನ್ನೂ ಕಬಳಿಸಿಕೊಂಡಿತ್ತು 34 ವರ್ಷಗಳಿಂದ ಆ ರಾಜ್ಯವನ್ನು ಆಳುತ್ತಿರುವ ಸಿಪಿಎಂ ನೇತೃತ್ವದ ಎಡರಂಗ. ತೃಣಮೂಲ ಕಾಂಗ್ರೆಸ್ 30 ಹಾಗೂ ಕಾಂಗ್ರೆಸ್ ಪಕ್ಷವು 24 ಸ್ಥಾನಗಳಲ್ಲಿ ಗೆದ್ದಿತ್ತು. ಇತರರು 4 ಸ್ಥಾನಗಳಲ್ಲಿ ಗೆದ್ದಿದ್ದರು.

ಪೂರ್ಣ ಮಾಹಿತಿಗಾಗಿ ವೆಬ್‌ದುನಿಯಾ ನೋಡುತ್ತಿರಿ.
ಇವನ್ನೂ ಓದಿ