ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಂತ್ರಿ ವಜಾ: ಲೋಕಾಯುಕ್ತ ಶಿಫಾರಸು ತಿರಸ್ಕರಿಸಿದ ರಾಷ್ಟ್ರಪತಿ (Lokayukta | President | Delhi PWD minister | Justice Manmohan Sarin)
PTI
ತೆರಿಗೆ ವಂಚನೆಯ ಪ್ರಕರಣದಲ್ಲಿ ಪ್ರಮುಖ ರೆಸಾರ್ಟ್ ಒಂದನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದ ದೆಹಲಿಯ ಕಾಂಗ್ರೆಸ್ ಸರಕಾರದ ಲೋಕೋಪಯೋಗಿ ಇಲಾಖಾ ಸಚಿವರನ್ನು ವಜಾಗೊಳಿಸಬೇಕೆಂಬ ದೆಹಲಿ ಲೋಕಾಯುಕ್ತರ ವರದಿಯನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಿರಸ್ಕರಿಸಿದ್ದಾರೆ.

ರಾಷ್ಟ್ರಪತಿಯವರ ಈ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯವು ಪತ್ರಮುಖೇನ ಲೋಕಾಯುಕ್ತರಿಗೆ ತಿಳಿಸಿದೆ.

ಪಿಡಬ್ಲ್ಯುಡಿ ಸಚಿವ ರಾಜ್ ಕುಮಾರ್ ಚೌಹಾಣ್ ಅವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಿ ಮಾಡಿರುವ ಶಿಫಾರಸುಗಳನ್ನು ರಾಷ್ಟ್ರಪತಿಯವರು ಅಂಗೀಕರಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಗಂಭೀರತರವಾದ ಅಕ್ರಮದಲ್ಲಿ ಭಾಗಿಯಾಗಿರುವ ಸಚಿವರನ್ನು ಕಿತ್ತು ಹಾಕುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಮನಮೋಹನ್ ಸರಿನ್ ಅವರು ಫೆಬ್ರವರಿ ತಿಂಗಳಲ್ಲಿ ರಾಷ್ಟ್ರಪತಿಗೆ ಶಿಫಾರಸು ಮಾಡಿದ್ದರು.

ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ದೆಹಲಿಯ ತಿಲೋವಿ ಗಾರ್ಡನ್ ರೆಸಾರ್ಟ್ ಒಂದರ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಆ ಸಂದರ್ಭ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದರು ಎಂಬ ಆರೋಪವನ್ನು ಚೌಹಾಣ್ ಎದುರಿಸುತ್ತಿದ್ದರು. "ಭಾರೀ ಪ್ರಮಾಣದ ತೆರಿಗೆ ವಂಚನೆ ಮಾಡಿದ್ದ ರೆಸಾರ್ಟ್‌ನಲ್ಲಿ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ಸಚಿವರು ತೆರಿಗೆ ವ್ಯವಹಾರಗಳ ಆಯುಕ್ತರಿಗೆ ದೂರವಾಣಿ ಮಾಡಿ ಪ್ರಭಾವ ಬೀರಿದ್ದರು" ಎಂದು ಲೋಕಾಯುಕ್ತರ ವರದಿಯಲ್ಲಿ ತಿಳಿಸಲಾಗಿತ್ತು.

ಮೇ ತಿಂಗಳಾರಂಭದಲ್ಲಿ ದೆಹಲಿಯ ಕಾಂಗ್ರೆಸ್ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನೇತೃತ್ವದ ಸರಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು, ಲೋಕಾಯುಕ್ತರ ಶಿಫಾರಸನ್ನು ತಿರಸ್ಕರಿಸುವಂತೆ ವಿವರವಾದ ವರದಿಯಲ್ಲಿ ತಿಳಿಸಿತ್ತು.
ಇವನ್ನೂ ಓದಿ