ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ವಕ್ತಾರನಿಗೆ 'ಶೂ': ಇದು ಆರೆಸ್ಸೆಸ್ ಎಂದ ದಿಗ್ವಿಜಯ್ (Shoe Attack | Janardan Dwivedi | Congress | P Chidambaram)
WD
ಜನರ ತಾಳ್ಮೆ ಯಾವ ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಈ ಹಿಂದೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರ ಮೇಲೆ ಶೂ ಎಸೆದ ಉದಾಹರಣೆ ಹಚ್ಚ ಹಸಿರಾಗಿರುವಂತೆಯೇ, ಇದೀಗ ಯೋಗ ಗುರು ಬಾಬಾ ರಾಮದೇವ್ ಮೇಲೆ ಕ್ರಮ ಕೈಗೊಂಡಿದ್ದನ್ನು ಸಮರ್ಥಿಸುತ್ತಾ, ಬಿಜೆಪಿ ಮೇಲೆ, ರಾಮದೇವ್ ಮೇಲೆ ವಾಗ್ದಾಳಿ ನಡೆಸುತ್ತಾ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ದ್ವಿವೇದಿಗೆ ವ್ಯಕ್ತಿಯೊಬ್ಬ ಶೂನಲ್ಲಿ ಹೊಡೆಯಲು ಪ್ರಯತ್ನಿಸಿದ ಘಟನೆ ಸೋಮವಾರ ಸಂಜೆ ನಡೆಯಿತು.

ಬಾಬಾ ರಾಮದೇವ್ ಅವರಿಗೆ ಕೇಂದ್ರ ಸರಕಾರವು ಮಾಡಿದ ಅನ್ಯಾಯದಿಂದ ರೋಸಿ ಹೋದ ಸುನಿಲ್ ಕುಮಾರ್ ಎಂಬಾತನೇ ಈ ಕೃತ್ಯಕ್ಕೆ ಪ್ರಯತ್ನಿಸಿದವನು. ಈತ ರಾಜಸ್ಥಾನದ ನವ-ಸಂಚಾರ್ ಪತ್ರಿಕೆಯ ಮಾಜಿ ಉದ್ಯೋಗಿ ಎಂದು ತಿಳಿದುಬಂದಿದ್ದು, ಈ ಬಗ್ಗೆ ಎಂದಿನಂತೆಯೇ ತಕ್ಷಣದ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ದಿಗ್ವಿಜಯ್ ಸಿಂಗ್, ಆರೋಪಿಯು ಆರೆಸ್ಸೆಸ್ ಕಾರ್ಯಕರ್ತನಾಗಿರಬೇಕು ಎಂದು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ 'ನಿಮ್ಮನ್ನು ಪ್ರಶ್ನಿಸದಂತೆ ನೀವು ನಮ್ಮನ್ನು ತಡೆಯುವುದು ಅಸಾಧ್ಯ' ಎನ್ನುತ್ತಾ ಸುನಿಲ್ ಕುಮಾರ್, ಕಾಲಲ್ಲಿದ್ದ ಶೂ ಎತ್ತಿ ಹೊಡೆಯಲು ಮುಂದಾದಾಗ, ಭದ್ರತಾ ಸಿಬ್ಬಂದಿ ಆತನನ್ನು ಎಳೆದುಕೊಂಡು ಹೋದರು. ಬಳಿಕ ಆತನಿಗೆ ಕಾಂಗ್ರೆಸ್ ಕಾರ್ಯಕರ್ತರು ಯದ್ವಾತದ್ವಾ ಹೊಡೆದು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟರು. ಬಳಿಕ ಆತನನ್ನು ಪೊಲೀಸರು ಹಿಡಿದುಕೊಂಡು ಹೋದರು.

ಇದೊಂದು ಪೂರ್ವ ಯೋಜಿತ ಕೃತ್ಯ ಎಂದು ಜನಾರ್ದನ ದ್ವಿವೇದಿ ಬಣ್ಣಿಸಿದ್ದು, ಇದೆಲ್ಲದರ ಹಿಂದೆ ಸಂಘ ಪರಿವಾರ ಇದೆ ಎಂದು ಎಂದಿನಂತೆ ಆರೋಪಿಸಿದ್ದಾರೆ.

ಹಿಂದೆ, ಇರಾಕ್‌ನಲ್ಲಿ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಮೇಲೆ ಶೂ ಎಸೆಯಲಾಗಿತ್ತು. ಅದೇ ವಿಷಯವು ಭಾರತದಲ್ಲಿಯೂ ಪ್ರತಿಧ್ವನಿಸಿ, 1984ರ ಸಿಖ್ ಹತ್ಯಾಕಾಂಡದಲ್ಲಿ ಆರೋಪಿಗಳ ಮೇಲೆ ಕ್ರಮ ಕೈಗೊಂಡಿಲ್ಲ ಎಂಬ ಆಕ್ರೋಶದಿಂದ ಸಿಖ್ ವ್ಯಕ್ತಿಯೊಬ್ಬ ಗೃಹ ಸಚಿವ ಚಿದಂಬರಂ ಮೇಲೂ ಶೂ ಎಸೆದಿದ್ದ. ಅಲ್ಲದೆ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಕಾಂಗ್ರೆಸ್ ಸಂಸದ, ಕಾಮನ್ವೆಲ್ತ್ ಹಗರಣ ಆರೋಪಿ ಸುರೇಶ್ ಕಲ್ಮಾಡಿ ಮೇಲೆ ಚಪ್ಪಲಿ ಎಸೆತ, ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಎರಡು ಬಾರಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕುರುಕ್ಷೇತ್ರದಲ್ಲಿ ಸಂಸದ ಜಿಂದಾಲ್, ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ ಮುಂತಾದವರು 'ಶೂ' ಬಾಣಕ್ಕೆ ಗುರಿಯಾಗಿದ್ದರು.
ಇವನ್ನೂ ಓದಿ