ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಿಗ್ವಿಜಯ್‌ರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸ್ಬೇಕು: ಅಣ್ಣಾ (Digvijay Singh | Mental Hospital | Anna Hazare | Corruption | RSS)
ಭ್ರಷ್ಟಾಚಾರದ ವಿರುದ್ಧ ತಮ್ಮ ಹೋರಾಟದ ಹಿಂದೆ ಆರೆಸ್ಸೆಸ್ ಕುಮ್ಮಕ್ಕು ಇದೆ ಎಂಬ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರ, ದಿಗ್ವಿಜಯ್ ಸಿಂಗ್ ಅವರನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಎಂದಿಗೂ ಬಾಯಿ ತಪ್ಪಿ ಮಾತನಾಡದ ಅಣ್ಣಾ ಹಜಾರೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ, ಆರೆಸ್ಸೆಸ್ ಮತ್ತು ನಿಮ್ಮ ನಡುವೆ ಒಪ್ಪಂದ ನಡೆದಿದೆ ಎಂದು ಕಾಂಗ್ರೆಸ್ ವಕ್ತಾರ ದಿಗ್ವಿಜಯ್ ಸಿಂಗ್ ಆರೋಪಿಸಿರುವ ಕುರಿತು ಪ್ರಶ್ನೆ ಕೇಳಿದಾಗ, ನಗುತ್ತಲೇ, "ಯೇ ಪೂನಾಮೇ, ಯರವಾಡಾ ಮೇ ಪಾಗಲ್ ಕಾ ಏಕ್ ದವಾಖಾನಾ ಹೈ, ವಹಾಂ ಉನ್‌ಕೋ ಲೇಕರ್ ಜಾನಾ ಪಡೇಗಾ (ಪೂನಾ, ಯೆರವಾಡದಲ್ಲಿ ಒಂದು ಮಾನಸಿಕ ಆಸ್ಪತ್ರೆಯಿದೆ. ಅಲ್ಲಿಗೆ ಅವರನ್ನು ಸೇರಿಸಬೇಕಾಗಿದೆ)" ಎಂದರು.

ಪ್ರಧಾನಿಯವರು ತಮ್ಮ ಸಚಿವ ಸಂಪುಟದ ಎಲ್ಲರೂ ಆಸ್ತಿ ಘೋಷಣೆ ಮಾಡಬೇಕು ಎಂದು ಸೂಚಿಸಿರುವುದರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಒಳ್ಳೆಯ ಕಾರ್ಯ ಎಂದ ಅವರು, ಪ್ರತಿ ವರ್ಷವೂ ಮಂತ್ರಿಗಳು ತಮ್ಮ ಆಸ್ತಿ ಪಾಸ್ತಿ ಘೋಷಣೆ ಮಾಡಬೇಕು ಎಂದೂ ಸೇರಿಸಿದರು.
ಇವನ್ನೂ ಓದಿ