ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿಯೂ ಲೋಕಪಾಲ ವ್ಯಾಪ್ತಿಗೆ ಬರಲಿ: ದಿಗ್ವಿಜಯ್ ಸಿಂಗ್ (Digvijay Singh | Prime Minister | Lokpal Bill | Anna Hazare | Baba Ramdev)
ಅಚ್ಚರಿಯ ಬೆಳವಣಿಗೆಯೆಂಬಂತೆ ಪ್ರಧಾನ ಮಂತ್ರಿ ಹಾಗೂ ನ್ಯಾಯಾಧೀಶರು ಕೂಡ ಭ್ರಷ್ಟಾಚಾರಾದ ವಿರುದ್ಧದ ಕಠಿಣವಾದ ಲೋಕಪಾಲ ಕಾಯ್ದೆ ವ್ಯಾಪ್ತಿಗೆ ಬರಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ನನ್ನ ಪ್ರಕಾರ, ಪ್ರಧಾನಮಂತ್ರಿ, ನ್ಯಾಯಾಂಗ, ಸರಕಾರೇತರ ಸಂಸ್ಥೆಗಳು ಹಾಗೂ ಕೈಗಾರಿಕೆಗಳು ಕೂಡ ಲೋಕಪಾಲ ಕಾಯ್ದೆ ವ್ಯಾಪ್ತಿಯಲ್ಲಿ ಬರಬೇಕು. ಆದರೆ, ಲೋಕಪಾಲರು ತಮ್ಮ ಅಧಿಕಾರದ ದುರ್ಬಳಕೆ ಮಾಡಿಕೊಳ್ಳದಂತೆ ಸೂಕ್ತ ವ್ಯವಸ್ಥೆಯಿರಬೇಕು ಎಂದು ತಮ್ಮ ತವರೂರಾದ ರಾಘೋಘರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

"ನಾನು ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ, ಮುಖ್ಯಮಂತ್ರಿ ಕಚೇರಿಯನ್ನು ಕೂಡ ಲೋಕಾಯುಕ್ತದ ವ್ಯಾಪ್ತಿಗೆ ತಂದಿದ್ದೆ" ಎಂದವರು ಹೇಳಿದರು.

ಆದರೂ, ತಮ್ಮ ಎಂದಿನ ವಾಕ್ಪ್ರಹಾರ ಮುಂದುವರಿಸಿದ ಅವರು, ಸರಕಾರದ ಮೇಲೆ "ಕೆಲವು ವ್ಯಕ್ತಿಗಳು" ಒತ್ತಡ ಹೇರುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ ಎಂದು ನಾಗರಿಕ ಹಕ್ಕುಗಳ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ದಿಗ್ವಿಜಯ್ ಹೇಳಿದರು.

ಬಾಬಾ ರಾಮದೇವ್ ವಿರುದ್ಧವು ವಾಗ್ದಾಳಿ ಮುಂದುವರಿಸುತ್ತಾ ಅವರು, ರಾಮದೇವ್ ಅವರು ರಹಸ್ಯವಾಗಿ ಭಾರೀ ಪ್ರಮಾಣದಲ್ಲಿ ಕಪ್ಪು ಹಣವನ್ನೇ ಡೊನೇಶನ್ ರೂಪದಲ್ಲಿ ಪಡೆಯುತ್ತಿದ್ದು, ಈ ಅಕ್ರಮ ಧನವನ್ನು ಸಕ್ರಮವಾಗಿಸಲು ನೆರವಾಗುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ರಾಮದೇವ್ ಪ್ರಯಾಣಕ್ಕೆ ಹೆಲಿಕಾಪ್ಟರ್ ದಾನ ಮಾಡಿದವರ ಹೆಸರು ಬಹಿರಂಗಪಡಿಸುವಂತೆ ಸವಾಲು ಹಾಕಿದರು..
ಇವನ್ನೂ ಓದಿ