ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆ.16ರಿಂದ ಉಪವಾಸ; ಲಾಠಿ, ಬುಲೆಟ್‌ಗೆ ಹೆದ್ರಲ್ಲ: ಅಣ್ಣಾ (Lokpal Bill | Joint Draft Committe | Anna Hazare | Fast | Congress)
ಕೇಂದ್ರ ಸರಕಾರವು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲೋಕಪಾಲ ಮಸೂದೆಯನ್ನು ಕಟ್ಟುನಿಟ್ಟುಗೊಳಿಸುವ ಬಗ್ಗೆ ಸಂದೇಹಗಳು ಹೆಚ್ಚು ಸ್ಪಷ್ಟವಾಗುತ್ತಿರುವಂತೆಯೇ, ಸರಕಾರವೇನಾದರೂ ಯಾವುದೇ ಹಲ್ಲಿಲ್ಲದ ಲೋಕಪಾಲ ಮಸೂದೆಯನ್ನು ಜಾರಿಗೊಳಿಸಿದರೆ, ಆಗಸ್ಟ್ 16ರಿಂದ ಮತ್ತೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಘೋಷಿಸಿದ್ದಾರೆ.

ಆ.16ರಿಂದ ಉಪವಾಸ
ನಾಗರಿಕ ಸಮಿತಿ ಸದಸ್ಯರ ಎಲ್ಲ ಸಲಹೆಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿದ್ದ ಸರಕಾರವು ತನ್ನ ಮಾತಿನಿಂದ ಹಿಂದೆ ಸರಿದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದ ಅಣ್ಣಾ ಹಜಾರೆ, ಸರಕಾರದ ಧೋರಣೆ ಇದೇ ರೀತಿ ಮುಂದುವರಿದರೆ ಜಂತರ್ ಮಂತರ್‌ನಲ್ಲಿ ಉಪವಾಸ ಮಾಡಬೇಕಾಗಿರುವುದು ಅನಿವಾರ್ಯ ಎಂದರಲ್ಲದೆ, ಭಾರತವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸುವುದು ಸರಕಾರಕ್ಕೆ ಬೇಕಿಲ್ಲ. ಆದರೆ, ಬಾಬಾ ರಾಮದೇವ್ ಅವರ ಉಪವಾಸ ಹತ್ತಿಕ್ಕಿದಂತೆ ನಮ್ಮ ಮೇಲೂ ಲಾಠಿ ಬೀಸಲು ನೋಡಿದರೆ, ಗುಂಡಿಗೆ ಎದೆಯೊಡ್ಡಲು ಕೂಡ ಸಿದ್ಧ, ಹೆದರುವುದಿಲ್ಲ ಎಂದೂ ಘೋಷಿಸಿದ್ದಾರೆ.

ಲಾಠಿಗಳಿಗೆ, ಬುಲೆಟ್‌ಗಳಿಗೆ ಎದೆಯೊಡ್ಡಲು ನಾವು ಸಿದ್ಧ. ದೇಶದ ಹಿತಕ್ಕಾಗಿ ಪ್ರಾಣ ಅರ್ಪಿಸಲು ನಾನಂತೂ ಸಿದ್ಧವಾಗಿದ್ದೇನೆ ಎಂದು ಘೋಷಿಸಿದ ಹಜಾರೆ, ಆದರೆ ಜೂನ್ 20, 21ರಂದು ನಡೆಯುವ ಕರಡು ಸಮಿತಿಯ ಸಭೆಗೆ ಹಾಜರಾಗುವುದಾಗಿಯೂ, ಸರಕಾರ ಏನು ಹೇಳುತ್ತದೆ ಎಂದು ಕೇಳುವುದಾಗಿಯೂ ಸ್ಪಷ್ಟಪಡಿಸಿದರು.

ಸರಕಾರದ್ದು "ಜೋಕ್‌ಪಾಲ್"
ಇದರ ನಡುವೆಯೇ, ಸರಕಾರವೇ ಸಿದ್ಧಪಡಿಸಲು ಉದ್ದೇಶಿಸಿರುವ ಲೋಕಪಾಲ ಕರಡು ಮಸೂದೆಯನ್ನು "ಜೋಕ್‌ಪಾಲ" ಮಸೂದೆ ಎಂದು ನಾಗರಿಕ ಸಮಿತಿ ಸದಸ್ಯ ಅರವಿಂದ ಕೇಜ್ರಿವಾಲ್ ಬಣ್ಣಿಸಿದ್ದಾರೆ.

ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರಕಾರವು ನಾಗರಿಕ ಸಮಿತಿ ಸದಸ್ಯರ ವಿರುದ್ಧವೇ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ, ತನ್ನದೇ ಆದ ರೀತಿಯಲ್ಲಿ ಮಸೂದೆ ಸಿದ್ಧಪಡಿಸಲು ಪ್ರಯತ್ನಿಸುತ್ತಿದೆ. ಅದು ಲೋಕಪಾಲ ಮಸೂದೆಯನ್ನು "ಜೋಕ್‌ಪಾಲ್" ಮಸೂದೆಯನ್ನಾಗಿಸಲು ಹೊರಟಿದೆ ಎಂದು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ನಾಗರಿಕ ಸಮಿತಿ ಸದಸ್ಯ ಅರವಿಂದ ಕೇಜ್ರಿವಾಲ್ ಟೀಕಿಸಿದರು.
ಇವನ್ನೂ ಓದಿ