ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ ಮಸೂದೆ ಎರಡು ಕರಡುಗಳಿಲ್ಲ: ಮೊಯ್ಲಿ ಸ್ಪಷ್ಟನೆ (Lokpal | Veerappa Moily | Hazare | NEW DELHI)
ಲೋಕಪಾಲ ಮಸೂದೆಯ ಎರಡು ಕರಡುಗಳನ್ನು ಕೇಂದ್ರ ಸಂಪುಟಕ್ಕೆ ಕಳುಹಿಸುವುದನ್ನು ಕೇಂದ್ರ ಸರಕಾರವು ಗುರುವಾರ ನಿರಾಕರಿಸಿದೆ. ಲೋಕಪಾಲ ಕರಡು ರಚನಾ ಸಮಿತಿಯಲ್ಲಿದ್ದ ಸರಕಾರದ ಪ್ರತಿನಿಧಿಗಳು ಹಾಗೂ ನಾಗರಿಕ ಸಮಾಜದ ನಡುವೆ ಭಿನ್ನಾಭಿಪ್ರಾಯ ಬಂದಿದ್ದು, ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಕೇಂದ್ರವು ತಡೆಯೊಡ್ಡುತ್ತಿದೆ ಎಂದು ನಾಗರಿಕ ಸಮಿತಿ ಆಪಾದಿಸಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಬಂದಿದೆ.

ಲೋಕಪಾಲ ಮಸೂದೆ ಜಂಟಿ ಕರಡು ರಚನಾ ಸಮಿತಿಯ ಸಂಚಾಲಕರೂ ಆಗಿರುವ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂನ್ 20ರಂದು ನಡೆಯುವ ಸಭೆಯಲ್ಲಿ ಸರಕಾರ ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳ ಪ್ರತಿನಿಧಿಗಳು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ವಿಫಲವಾದರೆ, ಅವರ ಪ್ರತ್ಯೇಕ ಅಭಿಪ್ರಾಯಗಳನ್ನು ಕೇಂದ್ರ ಸಂಪುಟಕ್ಕೆ ಕಳುಹಿಸಲಾಗುತ್ತದೆ ಎಂದರು.

ನಾಗರಿಕ ಸಮಿತಿ ಸದಸ್ಯರು ರಚಿಸಿದ ಹಾಗೂ ಸರಕಾರದ ಪ್ರತಿನಿಧಿಗಳು ರಚಿಸಿದ ಮತ್ತೊಂದು ಕರಡು ಮಸೂದೆಗಳನ್ನು ಕೇಂದ್ರ ಸಂಪುಟಕ್ಕೆ ಕಳುಹಿಸಲಾಗುತ್ತದೆ ಎಂದು ಕೇಂದ್ರ ಸಚಿವ, ಜಂಟಿ ಕರಡು ಸಮಿತಿ ಸದಸ್ಯ ಕಪಿಲ್ ಸಿಬಲ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಮೊಯ್ಲಿ, ಮಸೂದೆಗೆ ಎರಡು ಕರಡುಗಳಿರುವುದಿಲ್ಲ ಎಂದು ಹೇಳಿದ್ದಾರೆ.

ನಾಗರಿಕ ಸಮಾಜದ ಪ್ರತಿನಿಧಿಗಳು ತಮ್ಮ "ಬೇಡಿಕೆಗಳನ್ನು ಬದಲಿಸುತ್ತಿದ್ದಾರೆ" ಎಂದು ಆರೋಪಿಸಿದ ಮೊಯ್ಲಿ, ಇದೆಲ್ಲಾ ನಡೆಯುವುದಿಲ್ಲ, ಜಂಟಿ ಕರಡು ರಚನಾ ಸಮಿತಿಯ ನಿರ್ಧಾರಗಳಿಗೆ ಬದ್ಧರಾಗಿರಬೇಕಾಗುತ್ತದೆ ಎಂದು ಹೇಳಿದ್ದಾರೆ.

ಲೋಕಪಾಲ ಮಸೂದೆಯಲ್ಲಿ ಅಳವಡಿಸಲು ನಾಗರಿಕ ಸಮಿತಿ ಪ್ರಸ್ತಾಪಿಸಿದ್ದ 40ರಲ್ಲಿ 34 ಅಂಶಗಳಿಗೂ ಸರಕಾರ ಒಪ್ಪಿಗೆ ನೀಡಿದೆ ಎಂದು ತಿಳಿಸಿದ ಮೊಯ್ಲಿ. ಲೋಕಪಾಲ ವ್ಯಾಪ್ತಿಗೆ ಪ್ರಧಾನಿ ಅವರನ್ನು ಸೇರಿಸುವ ಕುರಿತ ವಿಷಯದ ಕುರಿತು ಅಂತಿಮ ನಿರ್ಣಯ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಇವನ್ನೂ ಓದಿ