ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ರಾವಣಲೀಲಾ' ನಂತ್ರ ಮತ್ತೆ ಡೆಲ್ಲಿಗೆ ಕಾಲಿಟ್ಟ ಬಾಬಾ ರಾಮದೇವ್ (yoga guru Baba Ramdev | Delhi | Ramlila Maidan | black money | fast)
PR
ವಿದೇಶಿ ಬ್ಯಾಂಕ್‌ಗಳಲ್ಲಿ ಇರುವ ರಾಜಕಾರಣಿಗಳ, ಉದ್ಯಮಿಗಳ ಕಪ್ಪುಹಣವನ್ನು ದೇಶಕ್ಕೆ ವಾಪಸ್ ತರಬೇಕೆಂದು ಆಮರಣಾಂತ ಉಪವಾಸ ಕೈಗೊಂಡು ಯೋಗಗುರು ಬಾಬಾ ರಾಮದೇವ್ ಮತ್ತು ಬೆಂಬಲಿಗರು ರಾಮಲೀಲಾ ಮೈದಾನದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ರಾತ್ರೋರಾತ್ರಿ ಪೊಲೀಸರು ದಾಳಿ ನಡೆಸಿ ಬಲವಂತದಿಂದ ಬಾಬಾ ಅವರ ಪ್ರತಿಭಟನೆ ಹತ್ತಿಕ್ಕಿದ್ದರು. ಇದೀಗ ಎಲ್ಲಾ ಜಟಾಪಟಿಯ ನಂತರ ರಾಮದೇವ್ ಭಾನುವಾರ ಮತ್ತೆ ನವದೆಹಲಿಗೆ ಕಾಲಿಟ್ಟಿದ್ದಾರೆ.

ಜೂನ್ 4ರಂದು ರಾಮಲೀಲಾ ಮೈದಾನದಿಂದ ಬಾಬಾ ಅವರನ್ನು ಬಲವಂತವಾಗಿ ಕರೆದೊಯ್ದು ಹರಿದ್ವಾರದಲ್ಲಿ ಬಿಡಲಾಗಿತ್ತು. ಅಲ್ಲದೇ ಸುಮಾರು 15 ದಿನಗಳ ಕಾಲ ಬಾಬಾ ರಾಜಧಾನಿ ಪ್ರವೇಶಿಸದಿಂತೆ ನಿರ್ಬಂಧ ಹೇರಿ ನಿಷೇಧಾಜ್ಞೆಯನ್ನು ಕೂಡ ಪೊಲೀಸರು ಜಾರಿಗೊಳಿಸಿದ್ದರು. ನಿಷೇಧಾಜ್ಞೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಬಾಬಾ ಅವರು ನವದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ ಬಾಲಾ ಅವರನ್ನು ಭೇಟಿಯಾಗಲು ಆಗಮಿಸಿದ್ದಾರೆ.

ಯೋಗ ಗುರು ಬಾಬಾ ರಾಮದೇವ್ ಕಪ್ಪುಹಣ ವಾಪಸಾತಿಗೆ ಆಗ್ರಹಿಸಿ ಆಮರಣಾಂತ ಉಪವಾಸ ಪ್ರತಿಭಟನೆಗೆ ಬೆಂಬಲ ನೀಡಿ ಸತ್ಯಾಗ್ರಹ ನಡೆಸುತ್ತಿದ್ದವರ ಮೇಲೆ ಖಾಕಿಪಡೆ ನಡೆಸಿದ ದೌರ್ಜನ್ಯದ ಸಂದರ್ಭದಲ್ಲಿ ರಾಜ್ ಬಾಲಾ ಸೇರಿದಂತೆ ಸಾವಿರಾರು ಮಂದಿ ಗಾಯಗೊಂಡಿದ್ದರು.

ಒಟ್ಟಾರೆ 51ರ ಹರೆಯದ ರಾಜ್ ಬಾಲಾ ಸ್ಥಿತಿ ಚಿಂತಾಜನಕವಾಗಿದ್ದು, ದೆಹಲಿಯ ಜಿ.ಬಿ.ಪಂತ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಬಾಬಾ ಆಗಮನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅವರ ಚಲನವಲನಗಳ ಮೇಲೆ ವಿಶೇಷ ನಿಗಾ ವಹಿಸಿದೆಯೆಂದು ಮೂಲವೊಂದು ತಿಳಿಸಿದೆ.

ಯೋಗ ಗುರು ಅವರು ರಾಜಧಾನಿಗೆ ಆಗಮಿಸುತ್ತಿರುವುದು ತಮ್ಮ ಬೆಂಬಲಿಗರನ್ನು ಕಾಣಲು ಎಂದು ಹೇಳಲಾಗುತ್ತಿದೆ. ಆದರೆ ಬಾಬಾ ಈ ಭೇಟಿ ಕೇಂದ್ರ ಸರಕಾರಕ್ಕೆ ನೀಡುತ್ತಿರುವ ಪರೋಕ್ಷ ತಿರುಗೇಟಾಗಿದೆ ಎಂದು ಮೂಲವೊಂದು ಹೇಳಿದೆ.
ಇವನ್ನೂ ಓದಿ