ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಟನೆಗೆ ಗುಡ್‌ಬೈ, ಚಿರುಗೆ ಮುಖ್ಯಮಂತ್ರಿಯಾಗೋ ಆಸೆಯಂತೆ! (Chiranjeevi | wants | CM | Real life)
WD
ಕಾಂಗ್ರೆಸ್‌ ಹೈಕಮಾಂಡ್‌ ನೀಡಿರುವ ಭರವಸೆಯಿಂದ ಪ್ರೇರಿತರಾಗಿರುವ ಪ್ರಜಾರಾಜ್ಯಂ ಪಕ್ಷದ ಮುಖಂಡ ಚಿರಂಜೀವಿ, ಆಂ‌ಧ್ರಪ್ರದೇಶದ ಜನತೆ ನಾನು ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದಾರೆ ಎಂದು ಹೇಳುವ ಮೂಲಕ ಬೆಳ್ಳಿತೆರೆಯ ಮೇಲಿನ ನಟನೆಗಿಂತ ನಿಜಜೀವನದಲ್ಲಿ ಸಿಎಂ ಗಾದಿ ಅಲಂಕರಿಸುವ ಕನಸು ಕಾಣತೊಡಗಿದ್ದಾರೆ.

ಇನ್ನು ಮುಂದೆ ತಾನು ಯಾವುದೇ ಚಿತ್ರದಲ್ಲೂ ನಟಿಸುವುದಿಲ್ಲ ಎಂದು ಘೋಷಿಸಿರುವ ಖ್ಯಾತ ನಟ ಚಿರಂಜೀವಿ, ರಾಜಕೀಯ ಚಟುವಟಿಕೆಗಳಿಗೇ ಹೆಚ್ಚಿನ ಸಮಯ ಮೀಸಲಿಡಬೇಕಿರುವುದರಿಂದ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಚಿರಂಜೀವಿ ಅವರ ಪ್ರಜಾರಾಜ್ಯಂ ಪಕ್ಷವು ಕಾಂಗ್ರೆಸ್‌ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದೊಂದಿಗೆ ವಿಲೀನಗೊಳ್ಳುವ ಅಂತಿಮ ಹಂತದಲ್ಲಿರುವ ಸಂದರ್ಭದಲ್ಲಿ ಟಿವಿ ಚಾನಲ್‌ ಒಂದರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಿರಂಜೀವಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.

ನೀವು ಚಲನಚಿತ್ರಗಳಲ್ಲಿ ಮುಖ್ಯಮಂತ್ರಿ ಪಾತ್ರದ ಆಫರ್ ಬಂದಲ್ಲಿ ಮತ್ತೆ ಚಿತ್ರರಂಗಕ್ಕೆ ಮರಳುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚಲನ ಚಿತ್ರದಲ್ಲೇಕೆ? ನನ್ನ ಅಭಿಮಾನಿಗಳು ನನ್ನ ಬೆಳ್ಳಿತೆರೆಯ ಮೇಲಿನ ಮುಖ್ಯಮಂತ್ರಿಗಿಂತ, ನಿಜಜೀವನದ ಮುಖ್ಯಮಂತ್ರಿಯನ್ನಾಗಿ ನೋಡಲು ಇಷ್ಟಪಡುತ್ತಿದ್ದಾರೆ ಎಂದು ಹೇಳಿದರು.

ನಟನೆಯಿಂದ ರಾಜಕಾರಣಿಯಾಗಿ ಮಾರ್ಪಟ್ಟಿರುವ ಚಿತ್ರನಟ ಚಿರಂಜೀವಿ, ತಾವು ಇನ್ನುಮುಂದೆ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ 'ನನ್ನ ಮಗ ರಾಮ್‌ ಚರಣ್‌ ತೇಜ್‌ ನನ್ನ ಸ್ಥಾನವನ್ನು ತುಂಬಲಿದ್ದಾನೆ' ಎಂದು ಹೇಳಿದ್ದಾರೆ.

ಚಿರಂಜೀವಿಯವರು ದಿಢೀರನೆ ತಾವು ರಾಜಕೀಯದಲ್ಲಿ ಮುಂದುವರಿಯುವ ಕುರಿತು ದೃಢ ನಿರ್ಧಾರ ತೆಗೆದುಕೊಂಡಿರುವುದನ್ನು ಗಮನಿಸಿದರೆ 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ನಿಧನದಿಂದ ಉಂಟಾಗಿದ್ದ ರಾಜಕೀಯ ಅಸ್ಥಿರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಭರವಸೆ ನೀಡಿರಬಹುದು ಎನ್ನುವ ವರದಿಗಳು ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ.

ರಾಜ್ಯದಲ್ಲಿ 2014ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದಾಗಿ ತಮ್ಮ ಮುಖಂಡ ಚಿರಂಜೀವಿ ಹೇಳಿದ್ದಾರೆ ಎಂದು ಪ್ರಜಾರಾಜ್ಯ ಪಕ್ಷದ ಮೂಲಗಳು ತಿಳಿಸಿವೆ. ಆದರೆ ಇದನ್ನು ಕಾಂಗ್ರೆಸ್‌ ಈವರೆಗೂ ಖಚಿತಪಡಿಸಿಲ್ಲ.

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿ ಕಿರಣ್‌ ಕುಮಾರ್‌ ರೆಡ್ಡಿ ಅವರನ್ನು ಅಧಿಕಾರದಿಂದ ಕೆಳಗಿಸಲು ವೇದಿಗೆ ಸಿದ್ಧವಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾದ ಅವರ ಸಂಪುಟದ ಸಚಿವರು ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಧ್ಯಕ್ಷ ಬೂಟ್ಸಾ ಸತ್ಯನಾರಾಯಣ ಅವರಿಂದ ಮುಖ್ಯಮಂತ್ರಿ ರೆಡ್ಡಿ ಅವರ ಕುರ್ಚಿಗೆ ಸಂಚಕಾರ ಬರಬಹುದೆಂಬ ಬೆದರಿಕೆಯಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಕಿರಣ್‌ ಕುಮಾರ್‌ ರೆಡ್ಡಿ ಅವರ ಬೆಂಬಲಿಗರು, ಕಾಂಗ್ರೆಸ್‌ ಹೈಕಮಾಂಡ್‌ ಭೇಟಿ ಮಾಡಲು ತೆರಳಿರುವ ಮುಖ್ಯಮಂತ್ರಿ ರೆಡ್ಡಿ ಅವರು ಚಿರಂಜೀವಿ ಅವರ ಹೇಳಿಕೆ ಕುರಿತು ಪ್ರಸ್ತಾಪಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇವನ್ನೂ ಓದಿ