ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಂಗೂರ್-ರೈತರಿಗೆ ಭೂಮಿ ವಾಪಸ್ ಕೊಡ್ಬೇಡಿ: ಸುಪ್ರೀಂ ತಡೆ (Mamata Banerjee | Supreme Court | Tata Motor | Singur land | West Bengal)
ಸಿಂಗೂರ್‌ನಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯ ನ್ಯಾನೋ ಸಣ್ಣ ಕಾರು ಯೋಜನೆಗೆ ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ಪಶ್ಚಿಮ ಬಂಗಾಳ ಸರ್ಕಾರ ರೈತರಿಗೆ ಮರಳಿಸದಂತೆ ಸುಪ್ರೀಂಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಈ ಮಧ್ಯಂತರ ಆದೇಶ ಕೆಲವು ಸಮಯದವರೆಗೆ ಜಾರಿಯಲ್ಲಿರುತ್ತದೆ. ಜಮೀನನ್ನು ಸ್ವಾಧೀನಪಡಿಸಿಕೊಂಡು ಅದರ ಮಾಲೀಕರಿಗೆ ಮರಳಿಸುವ ಕುರಿತ ಮುಖ್ಯವಾದ ವಿಷಯದ ಬಗ್ಗೆ ಕೋಲ್ಕತಾ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ನ್ಯಾಯಮೂರ್ತಿಗಳಾದ ಪಿ.ಸದಾಶಿವಂ ಮತ್ತು ಎ.ಕೆ.ಪಟ್ನಾಯಕ್ ಅವರನ್ನೊಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ರೈತರಿಗೆ ಮರಳಿಸದಂತೆ ಪಶ್ಚಿಮಬಂಗಾಳ ಸರಕಾರವನ್ನು ನಿರ್ಬಂಧಿಸುವಂತೆ ಕೋರಿ ಟಾಟಾ ಮೋಟಾರ್ಸ್ ಸಂಸ್ಥೆ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಪೀಠ, ಕೋಲ್ಕತಾ ಹೈಕೋರ್ಟ್ ಆದೇಶ ಪ್ರಕಟವಾಗುವವರೆಗೆ ರೈತರಿಗೆ ಜಮೀನು ಮರಳಿಸದಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ಸುಮಾರು ಒಂದು ಸಾವಿರ ಎಕರೆ ಜಮೀನನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ರೈತರಿಗೆ ವಾಪಸ್ ಮಾಡುವುದಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರಕಾರ ರೂಪಿಸಿರುವ ಹೊಸ ಕಾಯ್ದೆಯನ್ನು ಟಾಟಾ ಮೋಟಾರ್ಸ್ ಸಂಸ್ಥೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಪ್ರಕಟವಾದ ಕೆಲವೇ ಹೊತ್ತಿನಲ್ಲಿ ಪ್ರತಿಕ್ರಿಯಿಸಿರುವ ಮಮತಾ, ಸುಪ್ರೀಂಕೋರ್ಟ್ ಭೂ ಪ್ರದೇಶದ ಸರ್ವೆ ಮತ್ತು ಜಮೀನು ವಿತರಣೆಯ ಪ್ರಕ್ರಿಯೆಗೆ ತಡೆಯೊಡ್ಡಿಲ್ಲ ಎಂದು ಹೇಳಿದ್ದಾರೆ.
ಇವನ್ನೂ ಓದಿ