ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ: ಡಿಎಂಕೆ ತೋಳ ಹಳ್ಳಕ್ಕೆ ಬಿತ್ತು (Supreme Court | Jayalalithaa | DMK | Dayanidhi Maran | Airce l 2G scam)
PTI
2ಜಿ ತರಂಗಗುಚ್ಚ ಹಗರಣದಲ್ಲಿ ಕೇಂದ್ರದ ಜವಳಿ ಖಾತೆ ಸಚಿವ ದಯಾನಿಧಿ ಮಾರನ್ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎಂದು ಸಿಬಿಐ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

2006ರ ಅವಧಿಯಲ್ಲಿ ಚೆನ್ನೈ ಮೂಲದ ಏರ್‌ಸೆಲ್ ಟೆಲಿಕಾಂ ಕಂಪೆನಿಯನ್ನು ಮಲೇಷಿಯಾದ ಮ್ಯಾಕ್ಸಿಸ್ ಟೆಲಿಕಾಂ ಕಂಪೆನಿಗೆ ಮಾರಾಟ ಮಾಡುವಂತೆ ಸಂಚಾಲಕರ ಮೇಲೆ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಒತ್ತಡ ಹೇರಿರುವುದು ಕಂಡುಬಂದಿದೆ ಎಂದು ಸಿಬಿಐ ಆರೋಪಿಸಿದೆ.

ಕಳೆದ 2001-08ರ ವರೆಗಿನ ಅವಧಿಯಲ್ಲಿ ನಡೆದ 2ಜಿ ತರಂಗಗುಚ್ಚ ಹಗರಣಕ್ಕೆ ಸಂಬಂಧಿಸಿದ ಅವ್ಯವಹಾರಗಳ ತನಿಖೆ ಮುಂದಿನ ಮೂರು ತಿಂಗಳೊಳಗಾಗಿ ಮುಕ್ತಾಯಗೊಳಿಸಲಾಗುವುದು ಎಂದು ಸಿಬಿಐ, ಅಪೆಕ್ಸ್ ನ್ಯಾಯಾಲಯಕ್ಕೆ ಹೇಳಿಕೆ ನೀಡಿದೆ.

ಏತನ್ಮದ್ಯೆ, ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ 2ಜಿ ಹಗರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಸ್ವಇಚ್ಚೆಯಿಂದ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಪ್ರದಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಕೇಂದ್ರದ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಒತ್ತಾಯಿಸಿದ್ದಾರೆ.

ಡಿಎಂಕೆ ಪಕ್ಷದ ಮಾಜಿ ಟೆಲಿಕಾಂ ಸಚಿವ ಎ.ರಾಜಾ,ಸಂಸದೆ ಕನಿಮೋಳಿ, 2ಜಿ ಹಗರಣದಲ್ಲಿ ಸಿಲುಕಿದ ನಂತರ ಕಂಗಾಲಾಗಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಇಕ್ಕಟ್ಟಿಗೆ ಸಿಲುಕಿತ್ತು. 2ಜಿ ಹಗರಣದಲ್ಲಿ ಭಾಗಿಯಾದ ಮಾರನ್ ಅವರನ್ನು ಕೂಡಾ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ವಿರೋಧ ಪಕ್ಷಗಳು ಕೋಲಾಹಲ ಸೃಷ್ಟಿಸಿದ್ದವು. ಆದರೆ, ಮಾರನ್ ವಜಾಗೊಳಿಸಿದಲ್ಲಿ ಮೈತ್ರಿಗೆ ಧಕ್ಕೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಯುಪಿಎ ಸರಕಾರ ಕಾದು ನೋಡುವ ತಂತ್ರ ಅನುಸರಿಸಿತ್ತು. ಇದೀಗ, ಸಿಬಿಐ ವರದಿ ಸಲ್ಲಿಕೆಯಿಂದಾಗಿ ಸಂಪುಟದಿಂದ ವಜಾಗೊಳಿಸುವ ಸಾಝ್ಯತೆಗಳಿವೆ ಎನ್ನಲಾಗಿದೆ.

2ಜಿ ತರಂಗಗುಚ್ಚ ಹಗರಣದಲ್ಲಿ ಯಾವು ಯಾವುದೇ ತಪ್ಪು ಮಾಡಿಲ್ಲ. ವಿರೋಧ ಪಕ್ಷಗಳ ಆರೋಪಗಳಲ್ಲಿ ಸತ್ಯಾಂಶಗಳಿಲ್ಲ ಎಂದು ಸಚಿವ ದಯಾನಿಧಿ ಮಾರನ್ ಕೆಲವು ದಿನಗಳಿಂದ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾ ಬಂದಿದ್ದರು.
ಇವನ್ನೂ ಓದಿ