ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಏನ್ ಕಥೆ ಹೇಳ್ತಿದೀರಾ?: ದಿಲ್ಲಿ ಪೊಲೀಸರಿಗೆ ಸುಪ್ರೀಂ ತಪರಾಕಿ (Cash-for-Vote, Callous, Probe, Supreme Court, J M Lyngdoh , UPA government , Trust vote)
PTI
2008ರಲ್ಲಿ ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಸಂಬಂಧಿಸಿ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡಿದ್ದರಿಂದ ಅಲ್ಪಮತಕ್ಕಿಳಿದ ಯುಪಿಎ-1 ಸರಕಾರದ ಉಳಿವಿಗಾಗಿ ನಡೆದಿದೆಯೆನ್ನಲಾದ 'ಓಟಿಗಾಗಿ ನೋಟು' ಪ್ರಕರಣದ ಬಗ್ಗೆ ನಿಧಾನಗತಿಯಲ್ಲಿ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ಕಾರ್ಯವೈಖರಿಯನ್ನು "ಏನು ಕಥೆ ಹೇಳ್ತಾ ಇದ್ದೀರಾ" ಎಂದು ತರಾಟೆಗೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯ, ಇಲ್ಲಿಯವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿಲ್ಲವೇಕೆ ಎಂದು ಖಾರವಾಗಿ ಪ್ರಶ್ನಿಸಿದೆ.

ದೆಹಲಿ ಪೊಲೀಸರು ನಡೆಸುತ್ತಿರುವ ತನಿಖೆ ನ್ಯಾಯಾಲಯಕ್ಕೆ ತೃಪ್ತಿ ತಂದಿಲ್ಲ. ಇಂತಹ ಗಂಭೀರ ಪ್ರಕರಣವನ್ನು ಪೊಲೀಸರು ಲಘುವಾಗಿ ತೆಗೆದುಕೊಂಡಿರುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಅಫ್ತಾಬ್ ಆಲಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಓಟಿಗಾಗಿ ನೋಟು ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ಪ್ರಗತಿ ಸಾಧಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದೆ.

ದೆಹಲಿ ಪೊಲೀಸರ ತನಿಖೆ ವೇಗವಾಗಿ ಸಾಗಿ ಅಂತಿಮ ಹಂತಕ್ಕೆ ತಲುಪಬೇಕಾಗಿತ್ತು. ಆದರೆ, ಸುಮಾರು ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸದಿರುವುದು ಕಳವಳ ಮೂಡಿಸಿದೆ ಎಂದು ಹೇಳಿದ್ದಾರೆ.

ಜುಲೈ 2008ರಲ್ಲಿ ಯುಪಿಎ ಸರಕಾರ ವಿಶ್ವಾಸಮತ ಪಡೆಯುವ ಸಂದರ್ಭದಲ್ಲಿ ನಡೆದ ಓಟಿಗಾಗಿ ನೋಟು ಪ್ರಕರಣದಲ್ಲಿ ಭಾಗಿಯಾದ ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸರಕಾರಕ್ಕೆ ನಿರ್ದೇಶನ ನೀಡುವಂತೆ ಮಾಜಿ ಚುನಾವಣಾ ಆಯುಕ್ತ ಜೆ.ಎಂ.ಲಿಂಗ್ಡೊ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, ದೆಹಲಿ ಪೊಲೀಸರು ಸಲ್ಲಿಸಿದ ವರದಿಯನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿತ್ತು. ಇದು ತನಿಖಾ ವರದಿಯಲ್ಲ. ಕೆಲವರ ಹೇಳಿಕೆಗಳನ್ನು ಆಧರಿಸಿ ನ್ಯಾಯಾಲಯಕ್ಕೆ ಕಥೆ ಹೇಳುತ್ತಿದ್ದೀರಿ. ಎರಡು ವರ್ಷಗಳ ಅವಧಿಯಲ್ಲಿ ಯಾರನ್ನು ಬಂಧಿಸಿ ವಿಚಾರಣೆ ನಡೆಸದಿರಲು ಕಾರಣವೇನು ಎಂದು ಕಟುವಾಗಿ ಪ್ರಶ್ನಿಸಿತು.

ಮುಂದಿನ ಎರಡು ವಾರಗಳೊಳಗಾಗಿ ನೂತನ ವರದಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆಸಲ್ಲಿಸುವಂತೆ ನ್ಯಾಯಪೀಠ ಆದೇಶಿಸಿತು.

ಯುಪಿಎ ಪರವಾಗಿ ವಿಶ್ವಾಸಮತ ಸಂದರ್ಭದಲ್ಲಿ ಮತಚಲಾಯಿಸಲು ಹಣ ನೀಡಲಾಗಿದೆ ಎಂದು ಆರೋಪಿಸಿದ ಮೂವರು ಬಿಜೆಪಿ ಸಂಸದರಾದ ಅಶೋಕ್ ಅರ್ಗಲ್, ಫಗ್ಗಾನ್ ಸಿಂಗ್ ಕುಲಸ್ತೆ ಮತ್ತು ಮಹಾವೀರ್ ಭಾಗೊರಾ ಹಣದ ಕಂತೆಗಳನ್ನು ಸಂಸತ್ತಿನಲ್ಲಿ ತೋರಿಸಿದಾಗ ದೇಶವೇ ಆಘಾತಗೊಂಡಿತ್ತು. ಆದರೆ, ಇಲ್ಲಿಯವರೆಗೆ ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಲಿಂಗ್ಡೊ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇವನ್ನೂ ಓದಿ