ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಅರೆಭಾರತೀಯ ಎಂದ ಕತ್ರಿನಾಗೆ ಬಿಜೆಪಿ ಗಾಳ (Katrina Kaif | BJP | Rahul Gandhi | Congress | "Half-Indian | Half-Asian)
PTI
ಕಾಂಗ್ರೆಸ್ ಪಕ್ಷದ ಯುವ ನಾಯಕ ಹಾಗೂ ಸೋನಿಯಾ ಪುತ್ರ ರಾಹುಲ್ ಗಾಂಧಿ 'ಅರ್ಧ ಭಾರತೀಯ' ಎಂದು ಹೇಳಿಕೆ ನೀಡಿ ಕೋಲಾಹಲ ಸೃಷ್ಟಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್‌ಗೆ ಬಿಜೆಪಿ ಕೈ ಬೀಸಿ ಕರೆಯುತ್ತಿದೆ.

ಉತ್ತರಪ್ರದೇಶದಲ್ಲಿ ಮುಂದಿನ ವರ್ಷದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣಾ ಪ್ರಚಾರ ಹಾಗೂ ಬಿಎಂಸಿ ಚುನಾವಣೆಗಳ ಪ್ರಚಾರಕ್ಕಾಗಿ ಕತ್ರಿನಾ ಕೈಫ್ ಅವರನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ

ಬಿಜೆಪಿ ನಗರಾಧ್ಯಕ್ಷ ರಾಜ್ ಕೆ.ಪುರೋಹಿತ್ ಮಾತನಾಡಿ, ಪಕ್ಷದ ಸಭೆಗಳು ಹಾಗೂ ಚುನಾವಣೆ ಪ್ರಚಾರಗಳಲ್ಲಿ ಬಾಲಿವುಡ್ ತಾರೆ ಕತ್ರಿನಾ ಕೈಫ್ ಭಾಗವಹಿಸುವಂತೆ ಮನವೊಲಿಸಲಾಗುವುದು ಎಂದು ಹೇಳಿದ್ದಾರೆ.

ಕತ್ರಿನಾ ಕೈಫ್ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಸಾರ್ವಜನಿಕವಾಗಿ ಬಹಿರಂಗ ಹೇಳಿಕೆ ನೀಡಿದ ಕತ್ರಿನಾಗೆ ಬಿಜೆಪಿ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಪುರೋಹಿತ್ ತಿಳಿಸಿದ್ದಾರೆ.

ಈಗಾಗಲೇ ಬಿಜೆಪಿಯಲ್ಲಿ ಶತೃಘ್ನ ಸಿನ್ಹಾ, ವಿನೋದ್ ಖನ್ನಾ, ಸ್ಮೃತಿ ಇರಾನಿ, ಹೇಮಾಮಾಲಿನಿ, ನವಜೋತ್ ಸಿಂಗ್ ಸಿದ್ಧುರಂತಹ ಸ್ಟಾರ್ ಪ್ರಚಾರಕರ್ತರಿದ್ದಾರೆ.

ಕಳೆದ ವಾರ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕತ್ರಿನಾ, ನಾನು ಅರ್ಧ ಏಷ್ಯನ್ ಆಗಿರುವುದಕ್ಕೆ ನನಗೆ ನಾಚಿಕೆಯಾಗುವುದಿಲ್ಲ. ಯಾಕೆಂದರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಪುತ್ರ ರಾಹುಲ್ ಗಾಂಧಿ ಕೂಡಾ ಅರ್ಧ ಭಾರತೀಯ, ಅರ್ಧ ಇಟಾಲಿಯನ್ ಎಂದು ಹೇಳಿಕೆ ನೀಡಿ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದರು.
ಇವನ್ನೂ ಓದಿ