ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆ.6 ನಂತರ ಸ್ವಿಸ್ ಬ್ಯಾಂಕ್‌ ರಹಸ್ಯ ಖಾತೆಗಳು ಬಹಿರಂಗ (Swiss to give account info | Swiss account | DTAA | India)
PTI
ಭಾರತ ಮತ್ತು ಸ್ವಿಟ್ಜರ್‌ಲೆಂಡ್ ಮಧ್ಯೆ ಪರಿಷ್ಕ್ರತ ದ್ವಿಗುಣ ತೆರಿಗೆ ನಿವಾರಣಾ ಒಪ್ಪಂದ ಅಕ್ಟೋಬರ್ 6 ರ ನಂತರ ಜಾರಿಗೆ ಬರುವ ನಿರೀಕ್ಷೆಗಳಿದ್ದು, ಭಾರತದ ತನಿಖಾಧಿಕಾರಿಗಳು ತೆರಿಗೆ ವಂಚಕರ ಹಾಗೂ ಹೂಡಿಕೆದಾರರ ಸ್ವಿಸ್ ಬ್ಯಾಂಕ್‌ನಲ್ಲಿರುವ ರಹಸ್ಯ ಖಾತೆಗಳ ವಿವರಗಳನ್ನು ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ತೆರಿಗೆ ವಂಚಿಸುವುದು ಸ್ವಿಟ್ಜರ್‌ಲೆಂಡ್‌ನಲ್ಲಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಉಭಯ ದೇಶಗಳ ನಡುವೆ ಏಪ್ರಿಲ್ 1 ರಂದು ಒಪ್ಪಂದವಾಗಿದೆ. ಸ್ವಿಸ್ ಸಂಸತ್ತು ಪರಿಷ್ಕ್ರತ ದ್ವಿಗುಣ ತೆರಿಗೆ ನಿವಾರಣಾ ಒಪ್ಪಂದಕ್ಕೆ ಜೂನ್ 17 ರಂದು ಅಂಗೀಕಾರ ನೀಡಿದ್ದು,ಸ್ವಿಸ್ ಕಾಯ್ದೆ ಪ್ರಕಾರ ಅಕ್ಟೋಬರ್ 6 ರಿಂದ ಜಾರಿಗೆ ಬರಲಿದೆ ಎಂದು ಭಾರತದಲ್ಲಿರುವ ಸ್ವಿಸ್ ರಾಯಭಾರಿ ಫಿಲಿಪ್ಪೆ ವೆಲ್ಟಿ ಮಾಹಿತಿ ನೀಡಿದ್ದಾರೆ.

ವೆಲ್ಟಿಯವರ ಪ್ರಕಾರ, ಈ ಪ್ರಕರಣದಲ್ಲಿ ರಾಷ್ಟ್ರೀಯ ಪ್ರಜಾಭಿಮತ ಅಗತ್ಯವಿಲ್ಲ. ಅಕ್ಟೋಬರ್ 7ರ ನಂತರ ಭಾರತೀಯ ಸರಕಾರ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಪರಿಷ್ಕ್ರತ ಒಪ್ಪಂದಕ್ಕೆ ಉಭಯ ದೇಶಗಳ ನಡುವೆ ಅಗಸ್ಟ್ 2010ರಲ್ಲಿ ಸಹಿ ಹಾಕಲಾಗಿತ್ತು. ಎಂದು ತಿಳಿಸಿದ್ದಾರೆ.

ಸ್ವಿಸ್ ರಾಷ್ಟ್ರೀಯ ಬ್ಯಾಂಕ್‌ನಲ್ಲಿ ಭಾರತೀಯರ ಒಟ್ಟು ಠೇವಣಿ 2.5 ಬಿಲಿಯನ್ ಡಾಲರ್‌ಗಳಾಗಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಭಾರತೀಯರು 500 ಮಿಲಿಯನ್ ಡಾಲರ್‌ಗಳಷ್ಟು ಹಣವನ್ನು ಹಿಂಪಡೆದಿದ್ದಾರೆ ಎಂದು ಸುದ್ಧಿ ಸಂಸ್ಥೆಯೊಂದು ಪ್ರಕಟಿಸಿದೆ.

ಸ್ವಿಸ್ ಬ್ಯಾಂಕ್‌ ಖಾತೆಗಳನ್ನು ಬಹಿರಂಗಪಡಿಸಲಾಗುವುದು ಎನ್ನುವ ಆತಂಕದ ಹಿನ್ನೆಲೆಯಲ್ಲಿ,ಬೃಹತ್ ಸಂಖ್ಯೆಯ ಭಾರತೀಯರು ಹಣವನ್ನು ದುಬೈ ಮತ್ತು ಸಿಂಗಾಪೂರ್ ದೇಶಗಳಲ್ಲಿರುವ ಬ್ಯಾಂಕ್‌ಗಳಿಗೆ ವರ್ಗಾಯಿಸಿದ್ದಾರೆ ಎಂದು ಭಾರತೀಯ ತನಿಖೆ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಸ್ವಿಸ್ ಬ್ಯಾಂಕ್, ರಹಸ್ಯ ಖಾತೆ, ಡಿಟಿಎಎ, ಭಾರತ