ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಭಯ ದೇಶಗಳ ಮೈತ್ರಿ ವೃದ್ಧಿಗೆ ಸೂಕ್ತ ಕ್ರಮ: ಕೃಷ್ಣ (SM Krishna | Hina Rabbani Khar I Indo-Pak talks)
PTI
ಕಾಶ್ಮಿರ ವಿಷಯಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಅಂಶಗಳನ್ನು ಪರಿಗಣಿಸಿ ಉಭಯ ದೇಶಗಳ ಮೈತ್ರಿ ವೃದ್ಧಿಗಾಗಿ ಹೆಚ್ಚುವರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎರಡು ದೇಶಗಳ ವಿದೇಶಾಂಗ ಸಚಿವರು ಘೋಷಿಸಿದ್ದಾರೆ.

ಉಭಯ ದೇಶಗಳ ವಿದೇಶಾಂಗ ಸಚಿವರಾದ ಎಸ್.ಎಂ.ಕೃಷ್ಣ ಮತ್ತು ಪಾಕಿಸ್ತಾನದ ಹಿನಾ ಪಬ್ಬಾನಿ ಖಾರ್ ತೃಪ್ತಿಕರ ಮಾತುಕತೆಯ ನಂತರ, ಜಮ್ಮು ಕಾಶ್ಮಿರದಿಂದ ಪಾಕಿಸ್ತಾನಕ್ಕೆ ತೆರಳುವ ಪ್ರವಾಸಿಗರಿಗೆ ಹಾಗೂ ಪಾಕಿಸ್ತಾನದಿಂದ ಜಮ್ಮು ಕಾಶ್ಮಿರಕ್ಕೆ ಆಗಮಿಸುವ ಪ್ರವಾಸಿಗರಿಗೆ ವೀಸಾ ನಿಯಮಗಳನ್ನು ಸಡಿಲಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಉಭಯ ಸಚಿವರು ಜಮ್ಮು ಕಾಶ್ಮಿರ, ಭಯೋತ್ಪಾದನೆ ನಿಗ್ರಹ, ಪಾಕ್‌ನಲ್ಲಿರುವ ಮುಂಬೈ ಸ್ಫೋಟದ ಉಗ್ರರ ವಿಷಯಗಳು ಸೇರಿದಂತೆ ಹಲವಾರು ಸಂಗತಿಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ವಿದೇಶಾಂಗ ಸಚಿವ ಕೃಷ್ಣ ಮಾತನಾಡಿ, ಪ್ರಸಕ್ತ ಸುತ್ತಿನ ಮಾತುಕತೆಗಳು ತೃಪ್ತಿ ತಂದಿವೆ. ನಮ್ಮ ನಿರೀಕ್ಷೆಯಂತೆ ಮುಂದಿನ ದಿನಗಳಲ್ಲಿ ಪಾಕಿಸ್ತಾನ ಕಾರ್ಯನಿರ್ವಹಿಸುವ ಸಾಧ್ಯತೆಗಳಿವೆ. ಉಭಯ ದೇಶಗಳ ಮಧ್ಯೆ ಮಾತುಕತೆ ಸೂಕ್ತ ದಾರಿಯಲ್ಲಿ ಸಾಗಿವೆ ಎಂದು ತಿಳಿಸಿದ್ದಾರೆ.

ಉಭಯ ದೇಶಗಳ ಮಧ್ಯೆ ಪರಸ್ಪರ ಸಹಕಾರ, ಬಾಂಧವ್ಯ ವೃದ್ಧಿಯಲ್ಲಿ ಹೊಸತೊಂದು ಇತಿಹಾಸ ಸೃಷ್ಟಿಸಲಿ ಎನ್ನುವುದು ನಮ್ಮ ಬಯಕೆ. ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರೊಂದಿಗೆ ಮಾತುಕತೆ ನಂತರ ಉಭಯ ದೇಶಗಳ ಗುರಿಯೂ ಒಂದೇ ಆಗಿದೆ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಖಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ದಶಕಗಳಿಂದ ನಮ್ಮ ಅನುಭವಕ್ಕೆ ಬಂದಿರುವುದಕ್ಕಿಂತ, ಮುಂದಿನ ಪೀಳಿಗೆಗಳಿಗೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಹೊಸ ವಾತಾವರಣ ಸೃಷ್ಟಿಯಾಗುವ ವಿಶ್ವಾಸವಿದೆ ಎಂದು ಪಾಕ್ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಎಸ್ಎಂಕೃಷ್ಣ, ಹಿನಾ ರಬ್ಬಾನಿ ಖಾರ್, ಇಂಡೋಪಾತ್ ಮಾತುಕತೆ