ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಖಿಗೆ ಬಾಬಾ ರಾಮದೇವ್ ಮದ್ವೆಯಾಗೋ ಆಸೆಯಂತೆ! (Rakhi Sawant | Baba Ramdev | Rakhi marriage)
PTI
ವಿವಾದಾತ್ಮಕ ಬಾಲಿವುಡ್ ನಟಿ, ಐಟಂ ಗರ್ಲ್ ರಾಖಿ ಸಾವಂತ್, ಯೋಗ ಗುರು ಬಾಬಾ ರಾಮದೇವ್ ಅವರನ್ನು ವಿವಾಹವಾಗುವ ಇಚ್ಚೆ ವ್ಯಕ್ತಪಡಿಸಿರುವುದು ಇದೀಗ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.

ನಗರದಲ್ಲಿ ನಡೆದ ಚಿತ್ರವೊಂದರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ರಾಖಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಎಐಸಿಸಿ ಕಾರ್ಯದರ್ಶಿ ರಾಹುಲ್ ಗಾಂಧಿಯವರನ್ನೂ ಕೂಡಾ ತುಂಬಾ ಮೆಚ್ಚುವುದಾಗಿ ಹೇಳಿ, ಬಾಬಾ ರಾಮದೇವ್ ಅವರ ಯೋಗಾ ಕಾರ್ಯಕ್ರಮಗಳು ತಮ್ಮ ಮನಸ್ಸಿನಲ್ಲಿ ಆಳವಾಗಿ ಪ್ರಭಾವ ಬೀರಿವೆ ಎಂದು ನುಲಿದಿದ್ದಾರೆ.

ತಪ್ಪು ನಡತೆಗಳು ಹಾಗೂ ವಿವಾದಾತ್ಮಕ ಕಾರಣಗಳಿಗಾಗಿ ಖ್ಯಾತಿಯನ್ನು ಪಡೆದಿರುವ ರಾಖಿ ಸಾವಂತ್, ಸದಾ ಕಾಲ ಸುದ್ದಿಯಲ್ಲಿರುತ್ತಾರೆ. ಬಿಗ್ ಬಾಸ್ ಮತ್ತು ನಾಚ್ ಬಲಿಯೇ ಕಾರ್ಯಕ್ರಮಗಳ ಬಗ್ಗೆ ವಿರೋಧ ಹೇಳಿಕೆ ನೀಡಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೂಡಾ ವಿವಾದದ ಸುಳಿಗೆ ಸಿಲುಕಿದ್ದರು.

PTI
ರಾಖಿ ಸಾವಂತ್ ಪ್ರಚಾರದ ಹಸಿವು ಯಾವತ್ತು ಇಂಗುವುದಿಲ್ಲ. ಕೆಲ ದಿನಗಳ ಹಿಂದೆ ಅಭಿಷೇಕ್ ಅವಸ್ಥಿ ಅವರೊಂದಿಗೆ ರೋಮಾನ್ಸ್ ನಡೆಸಿ ಬಿಟ್ಟಿ ಪ್ರಚಾರ ಗಿಟ್ಟಿಸಿದ್ದರು. ನಂತರ 'ರಾಖಿ ಕಾ ಸ್ವಯಂವರ್' ಕಾರ್ಯಕ್ರಮದಲ್ಲಿ ಮಿಕಾ ಅವರ 'ಕಿಸ್' ಪುರಾಣಕ್ಕೆ ಟಿವಿ ಚಾನೆಲ್‌ಗಳು ಅಬ್ಬರದ ಪ್ರಚಾರ ನೀಡಿದ್ದವು.

ವಿವಾದಗಳ ರಾಣಿ, ರಾಖಿ ಸಾವಂತ್ ಅವರ ನಡೆ ಕೆಲವು ಬಾರಿ ಯಶಸ್ಸನ್ನು ತಂದುಕೊಟ್ಟಿದೆ. ಇಂತಹ ವಿವಾದಗಳಿಂದಾಗಿ ಕರಣ್ ಜೊಹರ್ ಅವರ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಕೂಡಾ ಪಡೆದಿದ್ದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ರಾಖಿ ಸಾವಂತ್, ಬಾಬಾ ರಾಮದೇವ್, ರಾಖಿ ವಿವಾಹ