ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೂಸ್ವಾಧೀನ: ಗುಜರಾತ್ ನೋಡಿ ಕಲೀರಿ ಎಂದ ಸುಪ್ರೀಂ ಕೋರ್ಟ್ (Gujarat | Narendra Modi | Land Aquisition Bill | Supreme Court)
117 ವರ್ಷಗಳಷ್ಟು ಹಳೆಯ ಭೂಸ್ವಾಧೀನ ಕಾಯ್ದೆಯೇ ದೊಡ್ಡ ಫ್ರಾಡ್. ಅದನ್ನು ರಚಿಸಿದವರೇ ಬಡವರ ಬಗೆಗೆ ಒಂದಿನಿತೂ ಯೋಚಿಸದ 'ಸಿಕ್' ಮೈಂಡೆಡ್ ವ್ಯಕ್ತಿಗಳು ಅಂತ ಕಿಡಿ ಕಾರಿರುವ ಸುಪ್ರೀಂ ಕೋರ್ಟು, ಎಲ್ಲರೂ ಸ್ವಲ್ಪವಾದ್ರೂ ನರೇಂದ್ರ ಮೋದಿ ಆಳ್ವಿಕೆಯ ಗುಜರಾತ್ ಸರಕಾರ ಅನುಸರಿಸುತ್ತಿರುವ ಭೂಸ್ವಾಧೀನ ಕಾಯ್ದೆಯಿಂದ ಕಲಿಯಿರಿ ಅಂತಲೂ ಸಲಹೆ ನೀಡಿದೆ.

ರೈತರು ಅಥವಾ ಬಡವರು ಒಕ್ಕಲೆಬ್ಬಿಸಿರುವ ಕುರಿತಾಗಿ ಗುಜರಾತ್‌ನಿಂದ ಇದುವರೆಗೆ ಯಾರು ಕೂಡ ನ್ಯಾಯಾಲಯದ ಮೆಟ್ಟಿಲೇರಿಲ್ಲ ಎಂಬುದನ್ನು ಎತ್ತಿ ತೋರಿಸಿದ ನ್ಯಾಯಾಲಯವು, ಈ ಭೂಸ್ವಾಧೀನ ಕಾಯ್ದೆಯೇ ದೊಡ್ಡ ವಂಚನೆ. ಜನ ಸಾಮಾನ್ಯನ ಬವಣೆಯ ಅರಿವಿಲ್ಲದವರೇ ಇದನ್ನು ರೂಪಿಸಿದ್ದಾರೆ. ಅದನ್ನು ರದ್ದು ಮಾಡಲು ಇದು ಸಕಾಲ ಎಂದು ಅಭಿಪ್ರಾಯಪಟ್ಟಿದೆ.

ಉತ್ತರ ಪ್ರದೇಶದಲ್ಲಿ ಚರ್ಮೋದ್ಯಮ ಸಂಕೀರ್ಣಕ್ಕಾಗಿ 82 ಎಕರೆ ಜಮೀನು ಕಳೆದುಕೊಂಡ ರೈತರ ಅರ್ಜಿಗಳನ್ನು ವಿಚಾರಿಸುತ್ತಿದ್ದ ಸಂದರ್ಭ ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎಚ್.ಎಲ್.ದತ್ತು ಅವರನ್ನೊಳಗೊಂಡ ನ್ಯಾಯಪೀಠವು ತನ್ನ ಅಭಿಪ್ರಾಯವನ್ನು ತಿಳಿಸಿದೆ.

ಈಗಾಗಲೇ ರೈತರಿಂದ ತೀವ್ರ ಪ್ರತಿಭಟನೆಗಳು ಅಲ್ಲಲ್ಲಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ 1894ರಲ್ಲಿ ರೂಪಿಸಲಾಗಿದ್ದ ಈ ಕಾಯ್ದೆಯನ್ನು ರದ್ದುಪಡಿಸಿ, ಹೊಸದಾದ ಭೂಮಸೂದೆಯನ್ನು ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ.

ಈ ಹಳೆಯ ಕಾಯ್ದೆಯ ಒಂದು ವಿಧಿಯನ್ನು ಎತ್ತಿಕೊಂಡು ರೈತರನ್ನು ಒಕ್ಕಲೆಬ್ಬಿಸುವ ರಾಜ್ಯಗಳಿಗೂ ಗುಜರಾತ್‌ಗೂ ಹೋಲಿಸಿರುವ ಈ ನ್ಯಾಯಪೀಠವು, "ಗುಜರಾತ್‌ನಿಂದ ಯಾವುದೇ ದೂರುಗಳು ಬರುತ್ತಿಲ್ಲ. ಅಭಿವೃದ್ಧಿ ಹೊಂದುತ್ತಿರುವ ಅಹಮದಾಬಾದ್‌ನತ್ತ ನೋಡಿ. ಅಲ್ಲೂ ಕೂಡ ಒಂದೇ ಒಂದು ದೂರುಗಳು ದಾಖಲಾಗಿಲ್ಲ. ಅಲ್ಲಿಯೂ ಕೂಡ ದೇಶದ ಬೇರೆಡೆಗಳಲ್ಲಿರುವಂತೆಯೇ ಒಂದೇ ಸ್ಥಾನಮಾನದ ಅಧಿಕಾರಿಗಳು ಇದ್ದಾರಲ್ಲವೇ" ಎಂದು ಕೇಳಿದೆ. ಬೇರೆ ರಾಜ್ಯದ ಅಧಿಕಾರಿಗಳು ಗುಜರಾತ್‌ನ ಅಧಿಕಾರಿಗಳಿಂದ ತರಬೇತಿ ಪಡೆಯಲಿ ಎಂದೂ ನ್ಯಾಯಪೀಠ ಸಲಹೆ ನೀಡಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಗುಜರಾತ್, ನರೇಂದ್ರ ಮೋದಿ, ಭೂ ಸ್ವಾಧೀನ ಕಾಯ್ದೆ, ಸುಪ್ರೀಂ ಕೋರ್ಟ್, ರೈತ, ಚಳವಳಿ