ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಮಸೂದೆ ಜಾರಿಗೆ ತರದಿದ್ದರೆ ಬೆತ್ತಲೆ ನೃತ್ಯ! (Salina Wali Khan | Naked dance | Anna Hazare | Model | Jan Lokpal Bill | Government)
PTI
ಭ್ರಷ್ಟಾಚಾರಕ್ಕೆನಾನು ಕೂಡಾ ಬಲಿಪಶುವಾಗಿದ್ದೇನೆ. ಒಂದು ವೇಳೆ, ಸರಕಾರ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರ ಜನಲೋಕಪಾಲ ಮಸೂದೆಯನ್ನು ಜಾರಿಗೊಳಿಸದಿದ್ದಲ್ಲಿ ಬೆತ್ತಲೆಯಾಗಿ ನೃತ್ಯ ಮಾಡುವುದಾಗಿ ಮಾಡೆಲ್ ಸಲಿನಾ ವಲಿ ಖಾನ್ ಹೇಳಿಕೆ ನೀಡಿ ಯುವಕರ ಮನಸ್ಸಿನಲ್ಲಿ ಕಿಚ್ಚು ಹಚ್ಚಿದ್ದಾರೆ.

ಭಾರತದ ಕ್ರಿಕೆಟ್ ತಂಡ ಒಂದು ವೇಳೆ ವಿಶ್ವಕಪ್ ಗೆದ್ದಲ್ಲಿ ಬೆತ್ತಲೆಯಾಗುವುದಾಗಿ ಘೋಷಿಸಿದ್ದ ಮಾಡೆಲ್ ಪೂನಂ ಪಾಂಡೆ, ನಂತರ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ತುಂಬಾ ನಿರೀಕ್ಷೆಯಿಂದ ಕಾದಿದ್ದ ಯುವಕರ ಮನಗಳಿಗೆ ತಣ್ಣೀರು ಎರಚಿದ್ದರು.

ಅಣ್ಣಾ ಹಜಾರೆಗೆ ಬೆಂಬಲ ತೋರಲು ಅಭಿಮಾನಿಗಳು ತಮ್ಮದೇ ಆದ ರೀತಿಯನ್ನು ಅನುಸರಿಸುತ್ತಿದ್ದಾರೆ.

ದೆಹಲಿ ಮೂಲದ ನಟಿ ಹಾಗೂ ಮಾಡೆಲ್, ಸಲಿನಾ ವಲಿ ಕೂಡಾ ಅಣ್ಣಾ ಹಜಾರೆಗೆ ಬೆಂಬಲ ಸೂಚಿಸಿದ್ದಾರೆ. ಒಂದು ವೇಳೆ ಸರಕಾರ ಅಣ್ಣಾ ಹಜಾರೆಯವರ ಜನಲೋಕಪಾಲ ಮಸೂದೆಯನ್ನು ಜಾರಿಗೊಳಿಸದಿದ್ದಲ್ಲಿ ಬೆತ್ತಲೆಯಾಗಿ ನೃತ್ಯ ಮಾಡುವುದಾಗಿ ಸರಕಾರಕ್ಕೆ ಹಸಿ ಬಿಸಿ ಮುಟ್ಟಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಲಿನಾ, ತಾವು ಕೂಡಾ ಭ್ರಷ್ಟಾಚಾರಕ್ಕೆ ಬಲಿಪಶುವಾಗಿದ್ದರಿಂದ, ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದಾರೆ.

ಪ್ರಚಾರಕ್ಕಾಗಿ ಅಲ್ಲ

ಇತರ ಮಾಡೆಲ್‌ಗಳು ವಿವಾದಾತ್ಮಕ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸುವ ಮಾಡೆಲ್‌ಗಳಂತೆ ನಾನಲ್ಲ. ಪ್ರಚಾರಕ್ಕಾಗಿ ನಾನು ಹೇಳಿಕೆ ನೀಡಿಲ್ಲ. ಭ್ರಷ್ಟಾಚಾರದಿಂದ ಸಾಮಾನ್ಯ ಜನತೆ ಮುಕ್ತವಾಗಲಿ ಎನ್ನುವುದನ್ನು ಬಯಸುತ್ತಿದ್ದೆನೆಯೇ ಹೊರತು ದೇಶಾದ್ಯಂತ ಖ್ಯಾತಿ ಪಡೆಯಲು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿ ಪೊಲೀಸರಿಗೆ, ನಾನು ಮಾಡೆಲ್ ಒಬ್ಬಳ ವಿರುದ್ಧ ದೂರು ಸಲ್ಲಿಸಿದ್ದೆ. ಆದರೆ, ಅವಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟ ಪೊಲೀಸರು, ಅನಧಿಕೃತವಾಗಿ ನನಗೆ ಫೋನ್ ಮಾಡಿ ಅಶ್ಲೀಲ ವಿಡಿಯೋ ತೆಗೆದಿದ್ದೀರಿ ಎಂದು ಬೆದರಿಸುತ್ತಿದ್ದರು ಎಂದು ಸಲಿನಾ ಕಿಡಿಕಾರಿದ್ದಾರೆ.

ಅಣ್ಣಾ ಹಜಾರೆ ಮುಗ್ದರು. ಸ್ವಹಿತಾಸಕ್ತಿಯನ್ನು ದೂರವಿಟ್ಟು ಸಾಮಾನ್ಯ ಜನತೆಗಾಗಿ ಹಗಲಿರಳು ದುಡಿಯುತ್ತಿದ್ದಾರೆ. ಜನಲೋಕಪಾಲ ಮಸೂದೆ ಜಾರಿಗಾಗಿ, ಜಂತರ್ ಮಂತರ್‌ನಲ್ಲಿ ಅಣ್ಣಾ ಪ್ರತಿಭಟನೆ ನಡೆಸಿದಾಗಿನಿಂದ ಅವರ ಬೆಂಬಲಿಗರಾಗಿರುವುದಾಗಿ ಸಲಿನಾ ನುಲಿದಿದ್ದಾಳೆ.

ಭ್ರಷ್ಟಾಚಾರದಿಂದ ಪ್ರತಿಯೊಬ್ಬರು ಸಂಕಷ್ಟದಲ್ಲಿ

ದೇಶದಲ್ಲಿ ಪ್ರತಿಯೊಬ್ಬರು ಭ್ರಷ್ಟಾಚಾರದಿಂದ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಒಂದು ಸಣ್ಣ ಕೆಲಸಕ್ಕೂ ರಾಜಕಾರಣಿಗಳನ್ನು ಅವಲಂಬಿಸಬೇಕಾಗಿದೆ. ಪ್ರತಿಯೊಂದು ಸರಕಾರಿ ಕಚೇರಿಯಲ್ಲಿ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅಣ್ಣಾ ಹಜಾರೆ ಪ್ರಾಮಾಣಿಕರಾಗಿರುವುದರಿಂದ ಪ್ರತಿಯೊಬ್ಬರು ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಮಾಡೆಲ್ ಸಲಿನಾ ವಲಿ ಖಾನ್ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಸಲಿನಾ ವಲಿ ಖಾನ್, ಬೆತ್ತಲೆ ನೃತ್ಯ, ಅಣ್ಣಾ ಹಜಾರೆ, ಮಾಡೆಲ್, ಜನಲೋಕಪಾಲ ಮಸೂದೆ, ಸರಕಾರ