ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ ಚರ್ಚೆ: ಸರಕಾರವೇ ಕಾನೂನು ಉಲ್ಲಂಘಿಸಿದೆ: ಲಾಲು ಪ್ರಸಾದ್ ಯಾದವ್ (Lalu Prasad Yadav | Lokpal Bill | Parliamentary Standing Committee | Anna hazare)
PTI
ಸಂಸತ್ತಿನಲ್ಲಿ ಭ್ರಷ್ಟಾಚಾರ ವಿರೋಧಿ ಶಾಸನದ ಹೊಣೆಯನ್ನು ಹೊತ್ತಿರುವ ಸಂಸದೀಯ ಸ್ಥಾಯಿ ಸಮಿತಿಯನ್ನು ನಿರ್ಲಕ್ಷಿಸಿ, ಲೋಕಸಭೆಯಲ್ಲಿ ಲೋಕಪಾಲ ಚರ್ಚೆ ನಡೆಯುತ್ತಿರುವುದು ಕಾನೂನುಬಾಹಿರವಾಗಿದೆ. ಸರಕಾರವೇ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ರಾಷ್ಟ್ರೀಯ ಜನತಾ ದಳದ ಅದ್ಯಕ್ಷ ಲಾಲು ಪ್ರಸಾದ್ ಯಾದವ್ ಗರ್ಜಿಸಿದ್ದಾರೆ.

ಸಂಸದೀಯ ಸ್ಥಾಯಿ ಸಮಿತಿಗೆ ಮಾಹಿತಿ ನೀಡದೆ, ನೇರವಾಗಿ ಲೋಕಪಾಲ ಮಸೂದೆಯನ್ನು ಸದನದಲ್ಲಿ ಚರ್ಚಿಸುವುದು ನೇರವಾಗಿ ಸಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದಂತಾಗಿದೆ ಎಂದು ಪ್ರಣಬ್ ಮುಖರ್ಜಿಯ ಭಾಷಣದ ನಂತರ ಲಾಲು ಕಿಡಿಕಾರಿದ್ದಾರೆ.

ಸಂಸದರಿಗೆ ಯಾವುದೇ ವಿಷಯದ ಬಗ್ಗೆ ಚರ್ಚೆ ಮಾಡಬೇಕಾದಲ್ಲಿ ಸಂಸದೀಯ ಸ್ಥಾಯಿ ಸಮಿತಿಗೆ ಮಾಹಿತಿ ನೀಡಬೇಕಾಗುತ್ತದೆ ಎಂದು ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾದ ಲಾಲು ಯಾದವ್ ಹೇಳಿದ್ದಾರೆ.

ಸಂಸದೀಯ ಸಮಿತಿಯನ್ನು ಬೈಪಾಸ್ ಮಾಡಿ, ಇಂದು ಲೋಕಸಭೆಯಲ್ಲಿ ಲೋಕಪಾಲ ಮಸೂದೆ ಚರ್ಚೆ ನಡೆಸಲಾಗುತ್ತದೆ ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

ಲಾಲೂ ಹೇಳಿಕೆಯ ನಂತರ, ವಿರೋಧ ಪಕ್ಷದ ನಾಯಕಿಯಾದ ಸುಷ್ಮಾ ಸ್ವರಾಜ್ ಲೋಕಪಾಲ ಮಸೂದೆಯ ಮೇಲಿನ ಚರ್ಚೆಯನ್ನು ಆರಂಭಿಸಿದರು.

ನಾಗರಿಕ ಸಮಿತಿ ಜನಲೋಕಪಾಲ ಮಸೂದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ, 12 ದಿನಕ್ಕೆ ಕಾಲಿರಿಸಿದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಲಾಲು ಪ್ರಸಾದ್ ಯಾದವ್, ಲೋಕಪಾಲ ಮಸೂದೆ, ಸಂಸದೀಯ ಸ್ಥಾಯಿ ಸಮಿತಿ, ಅಣ್ಣಾ ಹಜಾರೆ