ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ: ಸ್ಥಾಯಿ ಸಮಿತಿಯಿಂದ ಮನೀಷ್ ತಿವಾರಿ, ಲಾಲು ಪ್ರಸಾದ್, ಅಮರ್ ಸಿಂಗ್ ಔಟ್? (Jan Lokpal Bill | Standing Committe | Parliamentary Panel | Kannada News)
ಲೋಕಪಾಲ ಮಸೂದೆಯೋ, ಜನಲೋಕಪಾಲ ಮಸೂದೆಯೋ ಎಂಬ ತಿಕ್ಕಾಟವಾದ ಬಳಿಕ ಅಣ್ಣಾ ಹಜಾರೆ ಹೋರಾಟಕ್ಕೆ ಕೊನೆಗೂ ಮಣಿದಿರುವ ಕೇಂದ್ರ ಸರಕಾರವು, ಇದೀಗ ಲೋಕಪಾಲ ಮಸೂದೆಯ ಪರಿಶೀಲನೆಗೆಂದು ರೂಪಿಸಲಾಗಿದ್ದ ಸಂಸದೀಯ ಸ್ಥಾಯಿ ಸಮಿತಿಯನ್ನು ಪುನಾರಚಿಸಲಾಗುತ್ತಿದ್ದು, ಸಮಿತಿಯಿಂದ ಭ್ರಷ್ಟಾಚಾರ ಆರೋಪವಿರುವ ಅಮರ್ ಸಿಂಗ್ ಹಾಗೂ ಲಾಲು ಪ್ರಸಾದ್ ಯಾದವ್ ಹಾಗೂ ಅಣ್ಣಾ ಹಜಾರೆಯನ್ನು ಕಾಲಿನಿಂದ ತಲೆಯವರೆಗೆ ಭ್ರಷ್ಟ ಎಂದು ಬಣ್ಣಿಸಿದ ಕಾಂಗ್ರೆಸ್‌ನ ಮನೀಷ್ ತಿವಾರಿ ಅವರಿಗೆ ಖೋ ನೀಡುವ ಸಾಧ್ಯತೆಗಳಿವೆ.

ಮೂಲಗಳ ಪ್ರಕಾರ, ನಾಗರಿಕ ಸಮಾಜದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ, ಬುಧವಾರವೇ ಸ್ಥಾಯಿ ಸಮಿತಿಯನ್ನು ಪುನಾರಚಿಸಲಾಗುತ್ತಿದ್ದು, ಆರ್‌ಜೆಡಿ ಮುಖ್ಯಸ್ಥ ಲಾಲು, ಎಸ್ಪಿ ಮಾಜಿ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಮತ್ತು ಕಾಂಗ್ರೆಸ್ ವಕ್ತಾರ ತಿವಾರಿ ಸ್ಥಾನ ಕಳೆದುಕೊಳ್ಳಲಿದ್ದಾರೆ.

ಲೋಕಪಾಲ ಅಂದೋಲನದ ಸಂದರ್ಭ ಅಮರ್ ಸಿಂಗ್ ಮತ್ತು ಲಾಲು ಅವರು ಅಣ್ಣಾ ಹಜಾರೆ ತಂಡದ ವಾಗ್ದಾಳಿಗೆ ಗುರಿಯಾಗಿದ್ದರು. ಅಣ್ಣಾ ಆಂದೋಲನವನ್ನೂ ಲಾಲು ಅವರು ಲೋಕಸಭೆಯಲ್ಲಿ ಬಲವಾಗಿ ಟೀಕಿಸಿದ್ದರು.

ಮನೀಷ್ ತಿವಾರಿಯಂತೂ, ಅಣ್ಣಾ ಅವರನ್ನು ಕಾಲಿನಿಂದ ತಲೆಯವರೆಗೆ ಭ್ರಷ್ಟ ಎನ್ನುತ್ತಾ ಪಕ್ಷದಿಂದಲೇ ಛೀಮಾರಿ ಹಾಕಿಸಿಕೊಂಡ ಬಳಿಕ, ಈ ಹೇಳಿಕೆಗೆ 'ವಿಷಾದ' ವ್ಯಕ್ತಪಡಿಸಿದ್ದರು.

ಆದರೆ, ವಕೀಲರೂ ಆಗಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅವರು ಸಮಿತಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಈ ಸಮಿತಿಯಲ್ಲಿ ಸದ್ಯಕ್ಕೆ 26 ಸದಸ್ಯರಿದ್ದು ಒಟ್ಟು 31 ಸದಸ್ಯರಿರಬೇಕು. ಐದು ಸ್ಥಾನ ಖಾಲಿ ಇದೆ.

ಸಮಿತಿಯ ಸದಸ್ಯರ ಪಟ್ಟಿಗೆ ವೆಬ್‌ದುನಿಯಾ ನೋಡುತ್ತಾ ಇರಿ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜನ ಲೋಕಪಾಲ ಮಸೂದೆ, ಸ್ಥಾಯಿ ಸಮಿತಿ, ಸಂಸದೀಯ ಸಮಿತಿ, ಕನ್ನಡ ಸುದ್ದಿ, ಲಾಲು ಪ್ರಸಾದ್ ಯಾದವ್, ಮನೀಷ್ ತಿವಾರಿ, ಅಮರ್ ಸಿಂಗ್, ಕರ್ನಾಟಕ ಸುದ್ದಿ, ಬೆಂಗಳೂರು