ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಸ್ಪತ್ರೆಯಿಂದ ಅಣ್ಣಾ ಹಜಾರೆ ಬಿಡುಗಡೆ: ತವರಿನಲ್ಲಿ ಭರ್ಜರಿ ಸ್ವಾಗತ (Anna hazare, Lokpal bill, Corruption, Anna hazare fast, Anna hazare latest news,)
PTI
ಭ್ರಷ್ಟಾಚಾರ ನಿರ್ಮೂಲನೆಗಾಗಿ ಸಶಕ್ತ ಲೋಕಪಾಲ ಮಸೂದೆಗಾಗಿ ಒತ್ತಾಯಿಸಿ 12 ದಿನಗಳ ಉಪವಾಸ ಸತ್ಯಾಗ್ರಹದ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಗಾಂಧಿವಾದಿ ಅಣ್ಣಾ ಹಜಾರೆ, ಬುಧವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾದರು.

ತಮ್ಮ ಸ್ವಗ್ರಾಮಕ್ಕೆ ತೆರಳುವ ಸಲುವಾಗಿ ಖಾಸಗಿ ವಿಮಾನದಲ್ಲಿ ಪುಣೆಗೆ ಪ್ರಯಾಣ ಬೆಳೆಸಿದರು. ಪುಣೆಯಿಂದ ರಾಲೇಗಾನ್ ಸಿದ್ಧಿ ಗ್ರಾಮಕ್ಕೆ ಆಗಮಿಸಿದ ಅಣ್ಣಾ ಹಜಾರೆಯವರಿಗೆ ಸಂಭ್ರಮದ ಸ್ವಾಗತ ದೊರೆಯಿತು. ಅಣ್ಣಾ ಅವರ ಆರೋಗ್ಯ ಈಗ ಸಹಜವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಇಲ್ಲಿನ ಮೆದಾಂತ ಮೆಡಿಸಿಟಿ ಆಸ್ಪತ್ರೆಗೆ ಭಾನುವಾರ ಅವರನ್ನು ದಾಖಲು ಮಾಡಲಾಗಿತ್ತು. 74 ವರ್ಷದ ಹಜಾರೆ ಅವರು ಉಪವಾಸದ ನಂತರ ಇದೇ ಮೊದಲ ಬಾರಿಗೆ ಆಹಾರ ಸೇವಿಸಿದರು.

ರಾಲೇಗಾನ್ ಸಿದ್ಧಿಯಲ್ಲಿ ನಡೆಯುವ ಗಣೇಶ ಚತುರ್ಥಿ ಆಚರಣೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಅಣ್ಣಾ ಹಜಾರೆ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಾರೆ ಎನ್ನುವ ಮಾಹಿತಿ ಪಡೆದ ಮಾಧ್ಯಮದವರು ಆಸ್ಪತ್ರೆ ಮುಂಭಾಗದಲ್ಲಿ ಅವರಿಗಾಗಿ ಕಾಯ್ದಿದ್ದರು. ಆದರೆ ಹಜಾರೆ ಅವರನ್ನು ಆಸ್ಪತ್ರೆಯ ಹಿಂಬಾಗಿಲಿನ ಮೂಲಕ ಕಳುಹಿಸಿಕೊಡಲಾಯಿತು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಭ್ರಷ್ಟಾಚಾರ, ಲೋಕಪಾಲ ಮಸೂದೆ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ