ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕುಟುಂಬವನ್ನು ಯಾವತ್ತೂ ಭೇಟಿ ಮಾಡದ ಅಣ್ಣಾ ಹಜಾರೆ (Anna Hazare, Kutumbha Pramukh, Ralegan Siddhi, Family, Latest anna hazare news)
PTI
ಹಿರಿಯ ಗಾಂಧಿವಾದಿ, ಸಮಾಜ ಸುಧಾರಕ ಅಣ್ಣಾ ಹಜಾರೆಯವರನ್ನು ಗ್ರಾಮದ ಜನತೆ, ಕುಟುಂಬಗಳ ಮುಖ್ಯಸ್ಥರು ಎಂದು ಕರೆಯುತ್ತಾರೆ. ಆದರೆ, ವಿಶೇಷವೆಂದರೆ ಹಜಾರೆ ತಮ್ಮ ಕುಟುಂಬದೊಂದಿಗೆ ಇವತ್ತಿನವರೆಗೂ ಯಾವುದೇ ಸಂಪರ್ಕ ಹೊಂದಿಲ್ಲ.

ಅಣ್ಣಾ ಹಜಾರೆ ಕಳೆದ 40 ವರ್ಷಗಳ ಅವಧಿಯಲ್ಲಿ ಒಂದು ಬಾರಿಯೂ ಮನೆಗೆ ಬಂದಿಲ್ಲ ಎಂದು ಅಣ್ಣಾ ಹಜಾರೆಯವರ ಕಿರಿಯ ಸಹೋದರ ಮಾರುತಿ ಹಜಾರೆ ಕುಟುಂಬದ ಮೂಲಗಳು ತಿಳಿಸಿವೆ.

ಅಣ್ಣಾ ಹಜಾರೆ, ತಮ್ಮ ಕುಟುಂಬದ ಸದಸ್ಯರೊಂದಿಗೆ ಇಲ್ಲಿಯವರೆಗೆ ಊಟ ಮಾಡಿದ ಉದಾಹರಣೆಗಳಿಲ್ಲ. ದೇಶದ ಏಳಿಗೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ತಮ್ಮ ಮದುವೆಯಾದಾಗಿನಿಂದ ಇಲ್ಲಿಯವರೆಗೆ ಅವರು ಮನೆಗೆ ಬಂದಿಲ್ಲವೆಂದು ಅಣ್ಣಾ ಹಜಾರೆ ಕಿರಿಯ ಸಹೋದರನ ಪತ್ನಿ ಕೌಸಲ್ಯ ಹಜಾರೆ ತಿಳಿಸಿದ್ದಾರೆ.

ನಮ್ಮ ಮದುವೆ ಕಾರ್ಯಕ್ರಮದಲ್ಲಿ ಅವರು ಉಪಸ್ಥಿತರಿದ್ದರು. ಆದರೆ, ಯಾವತ್ತು ಮನೆಯ ಹೊಸ್ತಿಲು ತುಳಿಯಲಿಲ್ಲ. ದೇಶದ ಇತರ ಜನರಿಗೆ ಮಾದರಿಯಾದಂತೆ ನಮಗೂ ಕುಡಾ ಮಾದರಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಹಿಂದ್ ಸ್ವರಾಜ್ ಟ್ರಸ್ಟ್‌ ಸಂಚಾಲಿತ ವಾಟರ್‌ಶೆಡ್ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಅಡುಗೆ ಮನೆಯಿಂದ ತಯಾರಿಸಲಾದ ಊಟವನ್ನು ಮಾತ್ರ ಅವರು ಸೇವಿಸುತ್ತಾರೆ. ಮನೆಯಿಂದ ಕಳುಹಿಸಿದ ಊಟ, ಉಪಹಾರ ಸೇವಿಸುವುದಿಲ್ಲ ಎಂದು ಹೇಳಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ರಾಲೇಗಾನ್ ಸಿದ್ಧಿ, ಹಜಾರೆ ಕುಟುಂಬ, ಭ್ರಷ್ಟಾಚಾರ, ಅಣ್ಣಾ ಹಜಾರೆ ನಿರಶನ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ