ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುಪಿಎ ಮೂರ್ಖರ ಸರಕಾರ, ಚಿದು ಸುಳ್ಳುಗಾರ: ಅಣ್ಣಾ ಹಜಾರೆ (Anna Hazare | Central Government | P Chidambaram | Lokpal issue | Latest Politics News in Kannada | India News | Latest India News | Politics)
Anna hazare
PTI
ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಮತ್ತು ಕೇಂದ್ರ ಸರಕಾರದ ಮಧ್ಯೆದ ಸಮರ ಅಂತ್ಯಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ. ಬದಲಾಗಿ ಕೆಟ್ಟ ಪರಿಸ್ಥಿತಿಯತ್ತ ಸಾಗುತ್ತಿದೆ.

ಸರಕಾರದ ಆರೋಪಗಳಿಂದ ಬೇಸತ್ತ ಅಣ್ಣಾ ಹಜಾರೆ, ಯುಪಿಎ ಸರಕಾರ ಮೂರ್ಖರ ಸರಕಾರ ಮತ್ತು ಗೃಹ ಸಚಿವ ಚಿದಂಬರಂ ಒಬ್ಬ ಮಹಾನ್ ಸುಳ್ಳುಗಾರ.ಹೀಗಾದಲ್ಲಿ ದೇಶದ ಭವಿಷ್ಯದ ಗತಿಯೇನು? ಎಂದು ಕಿಡಿಕಾರಿದ್ದಾರೆ.

ಅಣ್ಣಾ ತಂಡದ ಸದಸ್ಯರಾದ ಅರವಿಂದ್ ಕೇಜ್ರಿವಾಲ್, ಪ್ರಶಾತ್ ಭೂಷಣ್ ಮತ್ತು ಕಿರಣ್ ಬೇಡಿ ವಿರುದ್ಧ ಸುಳ್ಳು ಆಪಾದನೆಗಳನ್ನು ಸೃಷ್ಟಿಸಲಾಗುತ್ತಿದೆ. ಕೇಜ್ರಿವಾಲ್‌ಗೆ 9 ಲಕ್ಷ ರೂಪಾಯಿ ಪಾವತಿಸುವಂತೆ ಐಟಿ ಇಲಾಖೆ ನೋಟಿಸ್ ಜಾರಿ ಮಾಡಿದೆ. ಶಾಂತಿ ಭೂಷಣ್ ಅವರಿಗೆ ಸಿಡಿ ವಿವಾದದಲ್ಲಿ ಸಿಲುಕಿಸಲಾಗುತ್ತಿದೆ. ಕಿರಣ್ ಬೇಡಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಪ್ರಯತ್ನಿಸುತ್ತಿರುವ ಸರಕಾರದ ರಾಜಕೀಯ ಸೇಡಿನ ಕೃತ್ಯಗಳಿಂದಾಗಿ ಅಣ್ಣಾ ಹಜಾರೆ ಬೇಸರಗೊಂಡಿದ್ದಾರೆ.

ಸಶಕ್ತ ಲೋಕಪಾಲ ಮಸೂದೆ ಜಾರಿಗಾಗಿ ಒತ್ತಾಯಿಸಿ ರಾಮಲೀಲಾ ಮೈದಾನದಲ್ಲಿ 13 ದಿನಗಳ ನಿರಶನ ಕೈಗೊಂಡುರಾಲೆಗಣ ಗ್ರಾಮದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ, ಸಶಕ್ತ ಲೋಕಪಾಲ ಮಸೂದೆ ಕುರಿತಂತೆ ಕೇಂದ್ರ ಸರಕಾರ ದೇಶವನ್ನು ವಂಚಿಸುತ್ತಿದೆ. ಕೇಂದ್ರದ ಗೃಹಸಚಿವ ಪಿ.ಚಿದಂಬರಂ ಒಬ್ಬ ಮಹಾನ್ ಸುಳ್ಳುಗಾರ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಲೋಕಪಾಲ ಮಸೂದೆ ಕುರಿತಂತೆ ಆರಂಭದ ದಿನದಿಂದಲೂ ಸರಕಾರ ನಮ್ಮನ್ನು ವಂಚಿಸುತ್ತಿದೆ ಎಂದು 74 ವರ್ಷ ವಯಸ್ಸಿನ ಅಣ್ಣಾ ಹಜಾರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಗೃಹ ಸಚಿವ ಪಿ.ಚಿದಂಬರಂ ಸುಳ್ಳುಗಾರನಾಗಿದ್ದು, ಸತ್ಯವನ್ನು ಯಾವತ್ತು ಮಾತನಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಸಶಕ್ತ ಲೋಕಪಾಲ ಮಸೂದೆ ಜಾರಿಗಾಗಿ ಹೋರಾಟ ಮುಂದುವರಿಸಲು ಜೈಲಿಗೆ ಹೋಗಲು ಸಿದ್ಧವಾಗಿದ್ದೇನೆ. ದೇಶಕ್ಕಾಗಿ ಹೋರಾಡಿ ಜೈಲಿಗೆ ಹೋದಲ್ಲಿ ಭಾರತ ಮಾತೆಯ ಆಶೀರ್ವಾದ ಪಡೆದಂತೆ ಎಂದು ಹೇಳಿದ್ದಾರೆ.

ಕಳೆದ 15 ವರ್ಷಗಳಿಂದ ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಭ್ರಷ್ಟಾಚಾರದ ವಿರುದ್ಧದ ಸಣ್ಣ ಹೋರಾಟ ಮುಂಬರುವ ದಿನಗಳಲ್ಲಿ ಗ್ರಾಮ ಗ್ರಾಮಗಳಿಗೆ ವ್ಯಾಪಿಸಲಿದೆ. ಕೇಂದ್ರ ಸರಕಾರ ಭ್ರಷ್ಟಾಚಾರದ ವಿರುದ್ಧ ನಿಲುವು ಬದಲಿಸದಿದ್ದಲ್ಲಿ ತಕ್ಕ ಪಾಠ ಕಲಿಯಲಿದೆ ಎಂದು ತಿಳಿಸಿದ್ದಾರೆ.

ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನೀಡಲು ನಾವು ತ್ಯಾಗ ಮಾಡಬೇಕಾದ ಅಗತ್ಯವಿದೆ. ಕೇವಲ ನಾನು ಅಣ್ಣಾ ಎಂದು ಹೇಳಿದರೆ ಸಾಲದು. ಗುಣ, ತ್ಯಾಗ, ನಡೆ, ನುಡಿಗಳಲ್ಲಿ ಬದಲಾವಣೆ ತರಬೇಕಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ಚಿಕ್ಕ ಬದಲಾವಣೆಯಾದರೂ ಸಹ ತಾವು ಸಂತೋಷಪಡುವುದಾಗಿ ಹಜಾರೆ ಹೇಳಿದ್ದಾರೆ.

ದೇಶದ ಯುವಶಕ್ತಿ ರಾಷ್ಟ್ರದ ಶಕ್ತಿಯಾಗಿದೆ. ಯುವಕರು ಯಾವತ್ತು ಜಾಗೃತರಾಗುತ್ತಾರೋ ಅಂದೇ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರೆಯಲಿದೆ ಎಂದು ಅಣ್ಣಾ ಹಜಾರೆ ಅಭಿಪ್ರಾಯಪಟ್ಟಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಕೇಂದ್ರ ಸರಕಾರ, ಪಿಚಿದಂಬರಂ, ಲೋಕಪಾಲ ಮಸೂದೆ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ