ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಹಜಾರೆ ತಂಡದ ಪ್ರಶಾಂತ್ ಭೂಷಣ್‌‌ಗೂ ಹಕ್ಕುಚ್ಯುತಿ ನೋಟಿಸ್ (Team Anna | Prashant Bhushan | Breach of privilege | Privilege notice | Latest Politics News in Kannada | Bangalore News | India News | Latest India)
PTI
ಸಂಸದರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ, ಅಣ್ಣಾ ತಂಡದ ಸದಸ್ಯ ಪ್ರಶಾತ್ ಭೂಷಣ್ ಅವರಿಗೆ ಹಕ್ಕುಚ್ಯುತಿ ನೋಟಿಸ್ ಜಾರಿ ಮಾಡಲಾಗಿದೆ. ಕಿರಣ್ ಬೇಡಿ ಹಕ್ಕುಚ್ಯುತಿ ನೋಟಿಸ್ ಪಡೆದವರಲ್ಲಿ ಮೊದಲಿಗರಾಗಿದ್ದಾರೆ.

ಹಕ್ಕುಚ್ಯುತಿ ನೋಟಿಸ್ ಸ್ವೀಕರಿಸಿ ಮಾತನಾಡಿದ ಪ್ರಶಾಂತ್ ಭೂಷಣ್, ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಸತ್ಯದ ಪರ ಮಾತನಾಡಿದಲ್ಲಿ ಹಕ್ಕು ಚ್ಯುತಿಯಾಗಲಾರದು. ಸಂಸದರ ವಿರುದ್ಧ ಅಸಭ್ಯವಾಗಿ ಹೇಳಿಕೆ ನೀಡಿದ್ದೇನೆ ಎಂದು ಸರಕಾರ ಆರೋಪಿಸಿರುವುದು ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಜನತೆಯ ಹಿತಾಸಕ್ತಿಗೆ ಮಾತನಾಡಿದಲ್ಲಿ ಹಕ್ಕುಚ್ಯುತಿಯಾಗುತ್ತದೆ ಎಂದು ಸರಕಾರ ಭಾವಿಸಿದಲ್ಲಿ, ಸಂಸತ್ತಿನಲ್ಲಿರುವ ಸಂಸದರ ನಡುವಳಿಕೆಗಳನ್ನು ಕೂಡಾ ಪರಿಶೀಲಿಸಲಿ ಎಂದು ಕಿಡಿಕಾರಿದ್ದಾರೆ.

ಸಂಸದರನ್ನು ಟೀಕಿಸಿದ ಆರೋಪ ಎದುರಿಸುತ್ತಿರುವ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಅಣ್ಣಾ ತಂಡದ ಸದಸ್ಯೆಯಾದ ಕಿರಣ್ ಬೇಡಿ ಕೂಡಾ, ಹಕ್ಕುಚ್ಯುತಿ ನೋಟಿಸ್ ಪಡೆದಿದ್ದಾರೆ.

ರಾಜಕಾರಣಿಗಳ ವಿರುದ್ಧ ನೀಡಿದ ಹೇಳಿಕೆಗಳಿಗೆ ಕ್ಷಮೆಕೋರುವುದಿಲ್ಲ. ಆದರೆ, ಸಮಿತಿಯ ಮುಂದೆ ಹಾಜರಾದಲ್ಲಿ ಸಂಸತ್ತಿನಲ್ಲಿ ಸಂಸದರ ನಡುವಳಿಕೆಯನ್ನು ಎತ್ತಿ ತೋರಿಸುತ್ತೇನೆ ಎಂದು ಕಿಡಿಕಾರಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ ಕಿರಣ್ ಬೇಡಿ, ಪ್ರಶಾಂತ್ ಭೂಷಣ್, ಹಕ್ಕುಚ್ಯುತಿ ನೋಟಿಸ್, ಭ್ರಷ್ಟಾಚಾರ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ