ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಮ್ಮ ಮಂತ್ರಿಗಳಿಗೆ ದರ ಏರಿಕೆ ತಟ್ಟುವುದಿಲ್ಲ ಯಾಕೆ ಗೊತ್ತಾ? (Union council | Union Cabinet | Praful Patel | Jagathrakshakan | Election Commission of India | Congress | Association for Democratic Reforms)
PTI
ದೇಶದಲ್ಲಿ ಹಣದುಬ್ಬರ ಮತ್ತು ಅಗತ್ಯ ವಸ್ತುಗಳು ಪೆಟ್ರೋಲ್, ಅಡುಗೆ ಅನಿಲ, ಬಡ್ಡಿ ದರಗಳ ಏರಿಕೆಯಿಂದ ಕಂಗಾಲಾಗಿ ಜನಸಾಮಾನ್ಯರು ತತ್ತರಿಸಿದ್ದಾರೆ. ಆದರೆ,ಜನಸಾಮಾನ್ಯರು ಆಯ್ಕೆ ಮಾಡಿದ ಸಂಸದರು ಕೇವಲ ಎರಡು ವರ್ಷಗಳಲ್ಲಿ ತಮ್ಮ ಆಸ್ತಿಯಲ್ಲಿ ಸರಾಸರಿ 3 ಕೋಟಿ ರೂಪಾಯಿಗಳಿಂದ 10.3 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿಕೊಂಡಿದ್ದು ಕನಿಷ್ಠ ಶೇ.77ರಷ್ಟು ಸಚಿವರು ಕೋಟ್ಯಾಧಿಪತಿಗಳಾಗಿರುವುದಾಗಿ ಘೋಷಿಸಿದ್ದಾರೆ.

ಭಾರಿ ಕೈಗಾರಿಕೋದ್ಯಮ ಸಚಿವ ಪ್ರಫುಲ್ ಪಟೇಲ್ 122 ಕೋಟಿ ರೂಪಾಯಿಗಳೊಂದಿಗೆ ಶ್ರೀಮಂತ ಸಚಿವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೇಂದ್ರದ ರಾಜ್ಯ ಖಾತೆ ಸಚಿವ ಡಿಎಂಕೆ ಪಕ್ಷದ ಬಿ.ಎಸ್.ಜಗದ್ರಕ್ಷಕ 70 ಕೋಟಿ ರೂಪಾಯಿಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ನಗರಾಭಿವೃದ್ಧಿ ಸಚಿವ ಕಮಲ್‌ನಾಥ್ 41 ಕೋಟಿ ರೂಪಾಯಿಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಅಸೋಸಿಯೇಶನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ಎಡಿಆರ್‌) ನಡೆಸಿದ ಸಮೀಕ್ಷೆಯಲ್ಲಿ ಡಿಎಂಕೆ ಪಕ್ಷದ ಜಗದ್ರಕ್ಷಕ 2009ರಲ್ಲಿ 5.9 ಕೋಟಿ ರೂಪಾಯಿಗಳ ಆದಾಯವನ್ನು ತೋರಿಸಿದ್ದರು. ಆದರೆ, ಇದೀಗ ಕೇವಲ ಎರಡು ವರ್ಷಗಳಲ್ಲಿ 64.5 ಕೋಟಿ ರೂಪಾಯಿಗಳ ಹೆಚ್ಚಳ ಆದಾಯವನ್ನು ಪ್ರಕಟಿಸಿದ್ದಾರೆ.

ಪ್ರಫುಲ್ ಪಟೇಲ್, ಕಳೆದ 2009ರಲ್ಲಿ 79.8 ಕೋಟಿ ರೂಪಾಯಿಗಳ ನಿವ್ವಳ ಆಸ್ತಿಯನ್ನು ಪ್ರಕಟಿಸಿದ್ದರು. ಇದೀಗ 122 ಕೋಟಿ ರೂಪಾಯಿಗಳ ಆಸ್ತಿಯ ವಾರಸುದಾರರಾಗಿದ್ದಾರೆ.

ಕಮಲ್‌ನಾಥ್, 2009ರಲ್ಲಿ 14 ಕೋಟಿ ರೂಪಾಯಿಗಳ ಆಸ್ತಿಗೆ ಒಡೆಯರಾಗಿದ್ದರು. ಇದೀಗ 2011ರಲ್ಲಿ 46 ಕೋಟಿ ರೂಪಾಯಿಗಳ ಆದಾಯವನ್ನು ಬಹಿರಂಗಪಡಿಸಿದ್ದಾರೆ.

ಆದರೆ, ಕೇಂದ್ರದ 15 ಮಂದಿ ಸಚಿವರಾದ ಆಗಾಥಾ ಸಂಗ್ಮಾ, ಪ್ರತೀಕ್ ಪಿ.ಪಾಟೀಲ್.ವೀರಭದ್ರ ಸಿಂಗ್, ಆರ್‌ಪಿಎನ್ ಸಿಂಗ್. ಡಿ.ನೆಪೋಲೀಯನ್, ವಿನ್ಸೆಂಟ್ ಪಾಲಾ, ಜಿತಿನ್ ಪ್ರಸಾದ್, ಎಂ.ವೀರಪ್ಪ ಮೊಯ್ಲಿ, ಪಿ.ಚಿದಂಬರಂ. ಎಸ್.ಜೈಪಾಲ್ ರೆಡ್ಡಿ, ಫಾರೂಕ್ ಅಬ್ದುಲ್ಲಾ, ಪ್ರಣೀತ್ ಕೌರ್, ಜೈರಾಮ್ ರಮೇಶ್, ಎಸ್‌.ಎಂ.ಕೃಷ್ಣ ಮತ್ತು ಜಿಕೆ ವಾಸನ್ ಮಾತ್ರ 2009ಕ್ಕೆ ಹೋಲಿಸಿದಲ್ಲಿ, ಇದೀಗ 2011ರಲ್ಲಿ ಸಂಪತ್ತಿನಲ್ಲಿ ಇಳಿಕೆಯಾಗಿದೆ ಎಂದು ಆಸ್ತಿ ವಿವರದಲ್ಲಿ ಬಹಿರಂಗಪಡಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕೇಂದ್ರ ಸಚಿವರು, ಸಚಿವ ಸಂಪುಟ, ಪ್ರಫುಲ್ ಪಟೇಲ್, ಜಗತ್ಕೃಷ್ಣನ್, ಚುನಾವಣಾ ಆಯೋಗ, ಕಾಂಗ್ರೆಸ್, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ