ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ: ಚಿದು ಬೆಂಬಲಿಸುವಂತೆ ಸೋನಿಯಾ ಗಾಂಧಿ ಫರ್ಮಾನು (Sonia Gandhi | Pranab Mukherjee | P. Chidambaram | 2G scam | Congress | BJP | AIADMK)
2ಜಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗುತ್ತಿರುವ ಕೇಂದ್ರದ ಗೃಹಸಚಿವ ಪಿ.ಚಿದಂಬರಂ ಮತತ್ು ವಿತ್ತಸಚಿವ ಪ್ರಣಬ್ ಮಧ್ಯೆ ತಿಕ್ಕಾಟ ಆರಂಭವಾಗಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ, ಚಿದಂಬರಂ ಅವರನ್ನು ಬೆಂಬಲಿಸುವಂತೆ ಪಕ್ಷದ ನಾಯಕರಿಗೆ ಸೋನಿಯಾ ಗಾಂಧಿ ಫರ್ಮಾನು ಹೊರಡಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಮೆರಿಕದಿಂದ ಯಶಸ್ವಿ ಚಿಕಿತ್ಸೆಗೊಳಗಾಗಿ ನವದೆಹಲಿಗೆ ಮರಳಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಸರಕಾರದ ಇಬ್ಬರು ಹಿರಿಯ ಸಚಿವರ ಮಧ್ಯೆ ಬಿಕ್ಕಟ್ಟು ಎದುರಾಗಿದ್ದರಿಂದ ಮದ್ಯಪ್ರವೇಶ ಮಾಡಿದ್ದಾರೆ.

ಕಳೆದ 2008ರಲ್ಲಿ ಅಂದಿನ ವಿತ್ತಸಚಿವರಾಗಿದ್ದ ಪಿ.ಚಿದಂಬರಂ, 2ಜಿ ಲೈಸೆನ್ಸ್‌ಗಳನ್ನು ಹರಾಜು ಮಾಡಬಹುದಿತ್ತು ಎಂದು ಪ್ರಣಬ್ ಮುಖರ್ಜಿ ನೇತೃತ್ವದ ವಿತ್ತಸಚಿವಾಲಯ ಪ್ರಧಾನಿ ಕಾರ್ಯಾಲಯಕ್ಕೆ ಬರೆದ ಪತ್ರ ಮಾಹಿತಿ ಹಕ್ಕು ಕಾಯ್ದೆಯನ್ವಯ ಬಹಿರಂಗವಾಗಿ ವಿವಾದಕ್ಕೆ ಕಾರಣವಾಗಿದೆ.

ಪ್ರಣಬ್ ಮತ್ತು ಚಿದಂಬರಂ ವಿವಾದ ವಿಪಕ್ಷಗಳಿಗೆ ಬ್ರಹ್ಮಾಸ್ತ್ರ ದೊರೆತಂತಾಗಿದ್ದು, ಚಿದಂಬರಂ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿವೆ. ಉಭಯ ಸಚಿವರ ಮಧ್ಯೆ ಭಿನ್ನಾಭಿಪ್ರಾಯಗಳು ಉಲ್ಬಣಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸೇರಿದಂತೆ ಪಕ್ಷದ ವಕ್ತಾರರವರೆಗೂ ಚಿದಂಬರಂ ಮತ್ತು ಕೇಂದ್ರ ಸರಕಾರವನ್ನು ಬೆಂಬಲಿಸುವಂತೆ ಸೋನಿಯಾ ಗಾಂಧಿ ಆದೇಶಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅನಾಮಧೇಯ ಮೂಲಗಳು ತಿಳಿಸಿವೆ.

ಇದೊಂದು ಸ್ಫೋಟಕ ಸಂಗತಿಯಾಗಿದೆ ಎಂದು ಸೋನಿಯಾಗೆ ಮಾಹಿತಿಯಿದೆ. 2ಜಿ ಹಗರಣದಲ್ಲಿ ಈಗಾಗಲೇ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಮತ್ತು ದಯಾನಿಧಿ ಮಾರನ್ ನಿರ್ಗಮಿಸಿದ್ದಾರೆ. ಇಂದು ಚಿದಂಬರಂ ನಾಳೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೂಡಾ ಆತಂಕಕ್ಕೆ ಸಿಲುಕುವ ಸಾಧ್ಯತೆಗಳಿಂದಾಗಿ ಸೋನಿಯಾ ಮಧ್ಯಪ್ರವೇಶಿಸಿದ್ದಾರೆ ಎನ್ನಲಾಗಿದೆ.

ಕಾರ್ಪೋರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಚಿದಂಬರಂ ಯಾವುದೇ ತಪ್ಪೆಸಗಿಲ್ಲ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಿದೇಶದಿಂದ ಮರಳುವವರೆಗೆ ಯಾವುದೇ ಹೇಳಿಕೆ ನೀಡದಂತೆ ಪ್ರಧಾನಿಯವರು ಆದೇಶಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಕೇಂದ್ರದ ಗೃಹ ಸಚಿವ ಪಿ.ಚಿದಂಬರಂ ಕೂಡಲೇ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳು ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿವೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಸೋನಿಯಾ ಗಾಂಧಿ, ಪ್ರಣಬ್ ಮುಖರ್ಜಿ, ಪಿಚಿದಂಬರಂ, 2ಜಿ ಹಗರಣ, ಕಾಂಗ್ರೆಸ್, ಬಿಜೆಪಿ, ಎಐಎಡಿಎಂಕೆ