ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್‌ಗೆ ಮತ ನೀಡಬೇಡಿ: ರಾಮದೇವ್ ಬಹಿರಂಗ ಹೇಳಿಕೆ (yoga guru Ramdev | Congress | Corruption | Vote | State elections | General elections | UPA government)
PTI
ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಳಕ್ಕೆ ಕಾಂಗ್ರೆಸ್ ಪಕ್ಷ ಮೂಲಕಾರಣವಾಗಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದಂತೆ ಯೋಗ ಗುರು ಬಾಬಾ ರಾಮದೇವ್ ಕರೆ ನೀಡಿದ್ದಾರೆ.

ದೇಶದಲ್ಲಿನ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಪಕ್ಷ ಜವಾಬ್ದಾರಯಾಗಿದ್ದರಿಂದ, ಮತದಾರರಾದ ನೀವು ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲದಂತೆ ನೋಡಿಕೊಳ್ಳಬೇಕು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯುಪಿಎ ಸರಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ, ದೇಶದಲ್ಲಿನ ಬಡತನ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಬಾಬಾ ರಾಮದೇವ್ ಆರೋಪಿಸಿದ್ದಾರೆ.

ದೇಶದಲ್ಲಿ ಭ್ರಷ್ಟಾಚಾರ ನಡೆಸಿ ವಿದೇಶಿ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿಟ್ಟಿರುವ ಭಾರತೀಯರ ಕಪ್ಪು ಹಣವನ್ನು ಮರಳಿ ತರುವಂತೆ ಒತ್ತಾಯಿಸಿ ಶಾಂತಿಯುತ ನಿರಶನ ನಡೆಸುತ್ತಿರುವವರ ಮೇಲೆ ಪೊಲೀಸ್ ದೌರ್ಜನ್ಯವೆಸಗಲಾಯಿತು. ರಾಜ್‌ಬಾಲಾ ಎನ್ನುವ ಅಮಾಯಕ ಮಹಿಳೆ ಕೂಡಾ ಸಾವನ್ನಪ್ಪಬೇಕಾಯಿತು ಎಂದು ಸರಕಾರದ ವಿರುದ್ಧ ಕಿಡಿಕಾರಿದರು.

ವಿದೇಶಿ ಬ್ಯಾಂಕ್‌ಗಳಲ್ಲಿರುವ ಭಾರತೀಯರ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುವಂತೆ ಒತ್ತಾಯಿಸಿದ್ದರಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಪಕ್ಷ ನನ್ನ ಮೇಲೆ ಪೊಲೀಸ್ ದೌರ್ಜನ್ಯವೆಸಗಿ ಸರಕಾರ ಭ್ರಷ್ಟಾಚಾರದ ಪರವಾಗಿದೆ ಎನ್ನುವುದು ಸಾಬೀತುಪಡಿಸಿದೆ ಎಂದು ವ್ಯಂಗ್ಯವಾಡಿದರು.

ಭ್ರಷ್ಟಾಚಾರವನ್ನು ನಿಯಂತ್ರಿಸಿ ಎಂದು ಸರಕಾರಕ್ಕೆ ಸಲಹೆ ನೀಡುವಂತಹ ಸ್ಥಿತಿ ಎದುರಾಗಿರುವುದು ವಿಷಾದದ ಸಂಗತಿಯಾಗಿದೆ. ಭ್ರಷ್ಟಾಚಾರವನ್ನು ಬೆಂಬಲಿಸಿದ್ದಲ್ಲಿ ನನಗೆ ಸರಕಾರ ಘನತೆ ಗೌರವ ನೀಡುತ್ತಿತ್ತು ಎಂದು ಯೋಗ ಗುರು ಬಾಬಾ ರಾಮದೇವ್ ಚಟಾಕಿ ಹಾರಿಸಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಯೋಗ ಗುರು ಬಾಬಾ ರಾಮದೇವ್, ಕಾಂಗ್ರೆಸ್, ಭ್ರಷ್ಟಾಚಾರ, ಮತದಾನ, ವಿಧಾನಸಭೆ, ಲೋಕಸಭೆ, ಸಾರ್ವತ್ರಿಕ ಚುನಾವಣೆ, ಯುಪಿಎ ಸರಕಾರ