ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಾವೂದ್ ಪಾಕಿಸ್ತಾನದಲ್ಲಿರುವುದು ಭಾರತಕ್ಕೆ ಗೊತ್ತಿದೆ: ಚಿದಂಬರಂ (ISI | Dawood lives in Pakistan | Dawood Ibrahim | Chidambaram | Central Intelligence Agency)
PTI
ಭೂಗತ ದೊರೆ ದಾವುದ್ ಇಬ್ರಾಹಿಂ ದೇಶದಲ್ಲಿಯೇ ಇಲ್ಲ ಎಂದು ಪಾಕಿಸ್ತಾನ ನಿರಂತರವಾಗಿ ಹೇಳಿಕೆ ನೀಡುತ್ತಿರುವ ಮಧ್ಯೆಯೂ ದಾವುದ್ ಪಾಕ್‌ನಲ್ಲಿದ್ದಾನೆ ಎನ್ನುವ ಬಗ್ಗೆ ನಮ್ಮ ಬಳಿ ಖಚಿತ ಮಾಹಿತಿಗಳಿವೆ ಎಂದು ಕೇಂದ್ರ ಗೃಹ ಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ಹಕ್ಯಾನಿ ನೆಟ್‌ವರ್ಕ್ ಸೇರಿದಂತೆ ಗುಪ್ತಚರ ಸಂಸ್ಥೆ ಐಎಸ್‌‍ಐ ಉಗ್ರರಿಗೆ ನೆರವು ನೀಡುತ್ತಿದೆ ಎನ್ನುವ ಅಮೆರಿಕ ಹೇಳಿಕೆ ಕುರಿತಂತೆ ಭಾರತಕ್ಕೆ ಅಚ್ಚರಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ನಡೆಸಿದ ಸಂವಾದದಲ್ಲಿ ದಾವುದ್ ಕರಾಚಿಯಲ್ಲಿದ್ದಾನೆ ಎಂದು ಸಹೋದರ ಅನೀಸ್ ಇಬ್ರಾಹಿಂ ಮಾಹಿತಿ ನೀಡಿದ್ದಾನೆ. ಅನೀಸ್ ಹೇಳಿದ್ದಕ್ಕಿಂತ ಹೆಚ್ಚಿನ ಮಾಹಿತಿ ನಮ್ಮ ಬಳಿಯಿದೆ. ನನಗೆ ಅಲ್ಲಿಗೆ ತೆರಳಿ ದಾವೂದ್ ಮನೆಯನ್ನು ತೋರಿಸಲು ಯಾವ ಸರಕಾರವೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನದೊಂದಿಗೆ ನಡೆದ ಹಲವಾರು ಸಭೆಗಳಲ್ಲಿ ವಿಷಯ ಪ್ರಸ್ತಾಪಿಸಿದ್ದೇವೆ. ಪಾಕಿಸ್ತಾನದ ಗೃಹ ಸಚಿವರೊಂದಿಗೂ ದಾವುದ್ ಬಗ್ಗೆ ಪ್ರಶ್ನಿಸಿಲಾಗಿದೆ. ಆದರೆ, ದಾವೂದ್ ಪಾಕ್‌ನಲ್ಲಿ ಇಲ್ಲ ಎಂದು ನಿರಾಕರಿಸುತ್ತಲೇ ಇದೆ. ಮುಂಬರುವ ದಿನಗಳಲ್ಲಿ ಸತ್ಯಾಂಶ ಬಹಿರಂಗವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಸ್ಫೋಟದ ನಂತರ ದಾವುದ್ ಪಾಕಿಸ್ತಾನಕ್ಕೆ ಪರಾರಿಯಾಗಿ ಐಎಸ್‌ಐ ರಕ್ಷಣೆಯಲ್ಲಿದ್ದಾನೆ. ಜಾಗತಿಕ ಉಗ್ರಗಾಮಿ ಸಂಘಟನೆ ಅಲ್‌-ಕೈದಾದೊಂದಿಗಿನ ಸಂಬಂಧದಿಂದಾಗಿ ಅಮೆರಿಕ 2003ರಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಐಎಸ್ಐ, ಪಾಕಿಸ್ತಾನದಲ್ಲಿ ದಾವೂದ್, ದಾವೂದ್ ಇಬ್ರಾಹಿಂ, ಚಿದಂಬರಂ, ಸಿಐಎ