ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಧ್ರ: ಡಿಜಿಪಿ ಕಚೇರಿಯಲ್ಲಿ 1 ಲಕ್ಷ ಜೊತೆ 'ಶೂ'ಗಳು ಪತ್ತೆ (DGP office | Andhra | 1lakh pairs of shoes | Probe)
ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ 1 ಲಕ್ಷ ಜೊತೆ 'ಶೂ' ಗಳ ಹೇರಳ ಸಂಗ್ರಹವಿರುವುದು ಪತ್ತೆಯಾಗಿದ್ದು, 'ಶೂ' ಖರೀದಿಯಲ್ಲಿ ಅವ್ಯವಹಾರವಾಗಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಪ್ರೊವಿಸನ್ಸ್ ಆಂಡ್ ಲಾಜಿಸ್ಟಿಕ್ಸ್ ವಿಂಗ್ ಹಿರಿಯ ಅಧಿಕಾರಿ ಉಮೇಶ್ ಕುಮಾರ್ 'ಶೂ' ಗಳನ್ನು ಖರೀದಿಸಿದ್ದು, ತೃಪ್ತಿಕರವಾದ ಗುಣಮಟ್ಟವನ್ನು ಹೊಂದಿವೆಯೇ ಅಥವಾ ಹೆಚ್ಚಿನ ದರ ನೀಡಿ ಖರೀದಿಸಲಾಗಿದೆಯೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಜಿಪಿ ದಿನೇಶ್ ರೆಡ್ಡಿ ತಿಳಿಸಿದ್ದಾರೆ.

ಕಳೆದ 2008ರಿಂದ 2011ರವರೆಗೆ 'ಶೂ' ಖರೀದಿಯ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಲಾಗುತ್ತಿದೆ ಎನ್ನುವ ವರದಿಗಳನ್ನು ಡಿಜಿಪಿ ಕಚೇರಿಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಏತನ್ಮಧ್ಯೆ, ಒಂದು ವೇಳೆ ಪೊಲೀಸ್ ಮಹಾನಿರ್ದೇಶಕ ಬಯಸಿದಲ್ಲಿ, ಸರಕಾರದ ಹಿತಾಸಕ್ತಿ ಪರವಾಗಿ ಸಮಿತಿ ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಡಿಜಿಪಿ ಕಚೇರಿ, ಆಂಧ್ರಪ್ರದೇಶ, 1 ಲಕ್ಷ ಜೊತೆ ಶೂ, ತನಿಖೆ