ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಿಗ್ವಿಜಯ್ ಸಿಂಗ್ ಇಮೇಜಿಗೆ ಧಕ್ಕೆ: ವೆಬ್‌ಸೈಟ್‌ಗಳ ವಿರುದ್ಧ ಕ್ರಿಮಿನಲ್ ಕೇಸ್ (Digvijay Singh | Congress | Criminal case | Websites | Image | Hindutva terror | Batla House encounter)
PTI
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಅವಹೇಳನಕಾರಿ ವಿಷಯಗಳನ್ನು ಪ್ರಕಟಿಸಿ ಅವರ ವೆಬ್‌ಸೈಟ್‌ಗೆ ಸಂದೇಶ ರವಾನಿಸಿದ 22 ಮಂದಿಯ ವಿರುದ್ಧ ಹಾಗೂ ಎಂಟು ವೆಬ್‌ಸೈಟ್‌ಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.

ತಮ್ಮ ವೆಬ್‌ಸೈಟ್‌ಗೆ ಅಸಭ್ಯವಾಗಿ ಸಂದೇಶಗಳನ್ನು ರವಾನಿಸಿ, ತಮ್ಮ ಪ್ರತಿಷ್ಠೆಗೆ, ವರ್ಚಸ್ಸಿಗೆ ಧಕ್ಕೆ ತರುವುದಲ್ಲದೇ ತಮ್ಮ ಕುಟುಂಬದ, ಗೆಳೆಯರಿಗೆ ಮಾನಸಿಕ ನೋವು ತಂದಿರುವುದಕ್ಕೆ ಇಂತಹ ವೆಬ್‌ಸೈಟ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗದಲ್ಲಿ ಐಟಿ ಕಾಯ್ದೆ 66ರ ಅನ್ವಯ 22 ಮಂದಿಯ ಪ್ರಕರಣ ದಾಖಲಿಸಲಾಗಿದೆ. ದಿಗ್ವಿಜಯ್ ಸಿಂಗ್ ಪರ ವಕೀಲರಾದ ರೋಹಿತ್ ಕೊಚಾರ್ ಸುಮಾರು 44 ದಿನಗಳ ಕಾಲ ತನಿಖೆ ನಡೆಸಿದ ನಂತರ, 22 ಮಂದಿಯ ವಿರುದ್ಧ ಆರೋಪ ಹೊರಿಸಿದ್ದಾರೆ.

ತಮ್ಮ ವಿರುದ್ಧ ವೆಬ್‌ಸೈಟ್‌ನಲ್ಲಿ ಅವಹೇಳನಕಾರಿ ಲೇಖನಗಳನ್ನು ಪ್ರಕಟಿಸಿ ತಮಗೆ ಹಾಗೂ ಕಾಂಗ್ರೆಸ್ ಪಕ್ಷದ ಇಮೇಜಿಗೆ ಭಾರಿ ಧಕ್ಕೆ ತರುವ ಯತ್ನ ನಡೆದಿದೆ. ಹಿತೈಷಿಗಳಿಗೆ ಕೂಡಾ ತುಂಬಾ ನೋವಾಗಿದೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮಾತನಾಡಿ, 22 ಮಂದಿ ಮತ್ತು ಎಂಟು ವೆಬ್‌ಸೈಟ್‌‌ಗಳು ಸಂದೇಶಗಳು ಚಿತ್ರಗಳು ಮತ್ತು ಇತರ ಪಠ್ಯಗಳನ್ನು ರವಾನಿಸಿದ್ದಾರೆ. ತಮ್ಮ ವಿರುದ್ಧ ನಿರಂತರವಾಗಿ ತೇಜೋವಧೆಯಲ್ಲಿ ತೊಡಗಿ ಗಂಭೀರ ಅಪರಾಧ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

64 ವರ್ಷ ವಯಸ್ಸಿನ ದಿಗ್ವಿಜಯ್ ಸಿಂಗ್, ಹಿಂದು ಉಗ್ರವಾದಿತ್ವ, ಬಾಟ್ಲಾ ಹೌಸ್ ಎನ್‌ಕೌಂಟರ್, ಮಾವೋವಾದಿ, ಅಣ್ಣಾ ಹಜಾರೆಯವರ ವಿಷಯಗಳಲ್ಲಿ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ಸದಾ ಟೀಕೆಗೆ ಅಹ್ವಾನ ನೀಡುತ್ತಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ದಿಗ್ವಿಜಯ್ ಸಿಂಗ್, ಕಾಂಗ್ರೆಸ್, ಅಪರಾಧ ಪ್ರಕರಣ, ವೆಬ್ಸೈಟ್, ಇಮೇಜ್, ಹಿಂದು ಉಗ್ರವಾದ, ಬಾಟ್ಲಾ ಪ್ರಕರಣ