ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಮಲೀಲಾ ಮೈದಾನದಿಂದ ಪರಾರಿಯಾಗದಿದ್ದಲ್ಲಿ ಹತ್ಯೆ: ಬಾಬಾ ರಾಮದೇವ್ (Ramlila ground | Yoga guru Ramdev | Rajbala | Swabhiman Yatra | Killed)
PTI
ಕಪ್ಪುಹಣ ಮರಳಿ ತರುವಂತೆ ಒತ್ತಾಯಿಸಿ ರಾಮಲೀಲಾ ಮೈದಾನದಲ್ಲಿ ಜೂನ್ 5 ರಂದು ತಾವು ನಡೆಸಿದ ನಿರಶನದ ಮಧ್ಯರಾತ್ರಿಯಲ್ಲಿ ಪೊಲೀಸರು ನಡೆಸಿದ ದೌರ್ಜನ್ಯದ ಸಂದರ್ಭದಲ್ಲಿ ಪರಾರಿಯಾಗದಿದ್ದಲ್ಲಿ ರಾಜ್‌ಬಾಲಾಗೆ ಆದ ಗತಿಯೇ ನನಗಾಗುತ್ತಿತ್ತು ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.

ಮಧ್ಯರಾತ್ರಿಯಲ್ಲಿ ಪೊಲೀಸರು ನಡೆಸಿದ ದಾಳಿ ಸಂದರ್ಭದಲ್ಲಿ ನಾನು ಪರಾರಿಯಾಗದಿದ್ದಲ್ಲಿ, ಇವತ್ತು ನಾನು ನಿಮ್ಮ ಜೊತೆ ಇರುತ್ತಿರಲಿಲ್ಲ. ಪೊಲೀಸರು ನನ್ನನ್ನು ಹತ್ಯೆ ಮಾಡುತ್ತಿದ್ದರು ಎಂದು ರಾಮದೇವ್ ಹೇಳಿದ್ದಾರೆ.

ಪ್ರಸ್ತುತ ಬಾಬಾ ರಾಮದೇವ್, ಉತ್ತರ ಪ್ರದೇಶದ ಪ್ರತಿಯೊಂದು ಜಿಲ್ಲೆಗಳಲ್ಲಿ ಸ್ವಾಭಿಮಾನ ಯಾತ್ರೆಯನ್ನು ನಡೆಸುತ್ತಿದ್ದಾರೆ.

ಕಳೆದ ಜೂನ್ 4 ರಂದು ಬಾಬಾ ರಾಮದೇವ್, ರಾಮಲೀಲಾ ಮೈದಾನದಲ್ಲಿ ಸಾವಿರಾರು ಬೆಂಬಲಿಗರೊಂದಿಗೆ ನಿರಶನದಲ್ಲಿ ಭಾಗಿಯಾಗಿದ್ದಾಗ, ಮಧ್ಯರಾತ್ರಿಯಲ್ಲಿ ಮಲಗಿದ್ದ ಮಹಿಳೆಯರು ಮಕ್ಕಳು ಎನ್ನದೆ ಪೊಲೀಸರು ಲಾಠಿಚಾರ್ಜ್ ಮಾಡಿ ದೌರ್ಜನ್ಯವೆಸಗಿದ್ದರು.

ಪೊಲೀಸರ ಲಾಠಿ ಚಾರ್ಜ್‌ನಿಂದಾಗಿ ಗಂಭೀರವಾಗಿ ಗಾಯಗೊಂಡ 51 ವರ್ಷ ವಯಸ್ಸಿನ ರಾಜ್‌ಬಾಲಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ರಾಮಲೀಲಾ ಮೈದಾನ, ಯೋಗ ಗುರು ಬಾಬಾ ರಾಮದೇವ್, ರಾಜ್ಬಾಲಾ, ಪೊಲೀಸ್ ದೌರ್ಜನ್ಯ, ಹತ್ಯೆ