ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚೆಲುವರಾಯ ಹೇಳಿಕೆಗೆ ತಿರುಗಿಬಿದ್ದ ರಾಜಣ್ಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೆಲುವರಾಯ ಹೇಳಿಕೆಗೆ ತಿರುಗಿಬಿದ್ದ ರಾಜಣ್ಣ
ಮಧುಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಮಾಜಿ ಸಚಿವ ಚಲುವರಾಯಸ್ವಾಮಿ ಆರೋಪಕ್ಕೆ ಕಾಂಗ್ರೆಸ್ ಅಭ್ಯರ್ಥಿ ರಾಜಣ್ಣ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ , ಮಧುಗಿರಿ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ಅಭ್ಯರ್ಥಿ ರಾಜಣ್ಣ ಅವರಿಗೆ ಆಮಿಷ ಒಡ್ಡಿರುವ ಬಿಜೆಪಿ, ರಾಜಣ್ಣಗೆ ಕ್ಯಾಬಿನೆಟ್ ದರ್ಜೆಯ ಮಂತ್ರಿ ಪದವಿ ಕೊಡುವುದಾಗಿ ಹೇಳಿದೆ. ಇದರಿಂದ ಅಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮಾತ್ರ ಸ್ಪರ್ಧೆ ನಡಯುತ್ತಿದೆ ಎಂದು ಹೇಳಿದ್ದರು.

ರಾಜಣ್ಣ ಆಕ್ರೋಶ
ಮಂಡ್ಯದಲ್ಲಿ ಚಲುವರಾಯಸ್ವಾಮಿ ಹೇಳಿಕೆ ನೀಡುತ್ತಿದ್ದಂತೆ ರಾಜಣ್ಣ ಆಕ್ರೋಶಿತರಾಗಿದ್ದಾರೆ. ತಮ್ಮನ್ನು ಸಂಪರ್ಕಿಸಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಒರಟಾಗಿ ವರ್ತಿಸಿದ ರಾಜಣ್ಣ ಚಲುವರಾಯಸ್ವಾಮಿಯವರ ವಿರುದ್ಧ ಅವಾಚ್ಯ ಶಬ್ದ ಬಳಸಿ ನಿಂದಿಸಿದರು.

ನಾನು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆಂದು ಚಲುವರಾಯಸ್ವಾಮಿಗೆ ಹೇಳಿದವರು ಯಾರು ಎಂಬುದಾಗಿ ಏಕವಚನದಲ್ಲಿ ಪ್ರಶ್ನಿಸಿದ ಅವರು, ಇವರೇ ಸೋಲುವ ಭೀತಿಯಿಂದ ಮತದಾರರಿಗೆ ತಪ್ಪುಸಂದೇಶ ರವಾನಿಸುತ್ತಿದ್ದಾರೆ ಎಂದರಲ್ಲದೆ, ಇದರಿಂದ ಮತದಾರರು ಇಲ್ಲದ ಗೊಂದಲದಲ್ಲಿ ಸಿಲುಕಲಿದ್ದಾರೆ ಎಂದು ಕಿಡಿಕಾರಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗೌಡರ ವಿರುದ್ಧ ಮೊಕದ್ದಮೆ: ಯಡಿಯೂರಪ್ಪ
ಬಿಜೆಪಿ ಬೆಂಬಲಿಸುವಂತೆ ಎಲ್ಲೂ ಹೇಳಿಲ್ಲ: ಸಿದ್ದು
ಫೆಬ್ರವರಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ: ಸಿಎಂ
ಚನ್ನರಾಯಪಟ್ಟಣ: ಭೀಕರ ಅಪಘಾತಕ್ಕೆ 10 ಬಲಿ
ಗಣಿ ಲೂಟಿಕೋರರ ವಿರುದ್ಧ ಕ್ರಮಕ್ಕೆ ಸಮಿತಿ: ಸಿ.ಎಂ.
ಗಣಿಯಲ್ಲಿ ‘ಕೈ’ವಾಡ: ಧರಂ ಉತ್ತರ ಸೋಮವಾರ