ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪೋಲಿಯೋ: ಆತಂಕ ಹುಟ್ಟುಹಾಕಿದ ವದಂತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೋಲಿಯೋ: ಆತಂಕ ಹುಟ್ಟುಹಾಕಿದ ವದಂತಿ
ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಕೊಂಡಿರುವ ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹರಡಿದ್ದರಿಂದ ಬೆಂಗಳೂರಿನ ಜನತೆ ತಲ್ಲಣಗೊಂಡ ಘಟನೆ ಭಾನುವಾರ ರಾತ್ರಿ ನಡಿದಿದೆ.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಲ್ಸ್ ಪೋಲಿಯೋ ಯೋಜನಾಧಿಕಾರಿ ಡಾ. ಮೋಹನ್ ರಾಜ್, "ತಮಿಳುನಾಡಿನ ಕೊಯಮತ್ತೂರಿನಲ್ಲಿ ತಲೆ ಒಳಗೆ ನೀರು ಸಂಗ್ರಹ ರೋಗಹೊಂದಿದ್ದ ಮಗು ಸಾವನ್ನಪ್ಪಿದೆ. ಪಲ್ಸ್ ಪೋಲಿಯೋ ಹನಿ ಹಾಕಿಸಿದ್ದರಿಂದ ಆ ಮಗು ಸಾವನ್ನಪ್ಪಿದೆ ಎಂಬ ವದಂತಿ ಸರಿಯಲ್ಲ, ಪಲ್ಸ್ ಪೋಲಿಯೋ ಹಾಕಿಸಿದ್ದಕ್ಕೂ, ಆ ಮಗುವಿನ ಸಾವಿಗೂ ಯಾವುದೇ ಸಂಬಂಧವಿಲ್ಲ" ಎಂದು ತಿಳಿಸಿದ್ದಾರೆ.

ಆ ರೋಗದಿಂದಾಗಿಯೇ ಮಗು ಸಾವನ್ನಪ್ಪಿದೆಯೇ ಹೊರತು ಪಲ್ಸ್ ಪೋಲಿಯೋ ಹನಿ ಹಾಕಿಸಿದ್ದರಿಂದಲ್ಲ. ಈ ಕುರಿತು ಹಬ್ಬಿದ ಗಾಳಿ ಸುದ್ದಿಯೇ ಇಷ್ಟು ಆತಂಕಕ್ಕೆ ಕಾರಣವಾಗಿದೆ, ಗಾಳಿಸುದ್ದಿಗಳಿಗೆ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಆಸ್ಪತ್ರೆಗಳಲ್ಲಿ ಧಾವಂತ
ಭಾನುವಾರ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಹನಿ ಹಾಕಿಸಿದ್ದ ಪೋಷಕರು ಈ ಸುದ್ದಿಯಿಂದಾಗಿ ಗಾಬರಿಗೊಂಡರು. ಪೋಲಿಯೋ ಹನಿ ಹಾಕಿಸಿದ್ದರಿಂದ ಮಕ್ಕಳು ಸಾವನ್ನಪ್ಪುತ್ತಿವೆ ಎಂದು ಕೆಲವು ಟೀವಿ ವಾಹಿನಿಗಳು ಬ್ರೇಕಿಂಗ್ ನ್ಯೂಸ್ ಬಿತ್ತರ ಮಾಡಿದ್ದರಿಂದ ಮತ್ತಷ್ಟು ಆತಂಕಕ್ಕೆ ಒಳಗಾದ ಪೋಷಕರು ಮಲಗಿದ್ದ ಮಕ್ಕಳನ್ನು ಎಬ್ಬಿಸಿ ರಾತ್ರೋರಾತ್ರಿ ಆಸ್ಪತ್ರೆಗಳಿಗೆ ದಾಂಗುಡಿಯಿಟ್ಟರು.

ಜನಜಂಗುಳಿಯಿಂದ ತುಂಬಿದ ಬೆಂಗಳೂರಿನ ಜೈನ್ ಆಸ್ಪತ್ರೆ, ಶಿಫಾ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಮಲ್ಲಿಗೆ ಆಸ್ಪತ್ರೆಗಳಲ್ಲಿ ಜನಜಂಗುಳಿ ನಿಯಂತ್ರಿಸಲು ಕಷ್ಟಪಡಬೇಕಾಯಿತು. ಮಧ್ಯರಾತ್ರಿಯಲ್ಲೂ ಟ್ಯಾನರಿ ರಸ್ತೆ, ಹೊಸೂರು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆದವು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೆಲುವರಾಯ ಹೇಳಿಕೆಗೆ ತಿರುಗಿಬಿದ್ದ ರಾಜಣ್ಣ
ಗೌಡರ ವಿರುದ್ಧ ಮೊಕದ್ದಮೆ: ಯಡಿಯೂರಪ್ಪ
ಬಿಜೆಪಿ ಬೆಂಬಲಿಸುವಂತೆ ಎಲ್ಲೂ ಹೇಳಿಲ್ಲ: ಸಿದ್ದು
ಫೆಬ್ರವರಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ: ಸಿಎಂ
ಚನ್ನರಾಯಪಟ್ಟಣ: ಭೀಕರ ಅಪಘಾತಕ್ಕೆ 10 ಬಲಿ
ಗಣಿ ಲೂಟಿಕೋರರ ವಿರುದ್ಧ ಕ್ರಮಕ್ಕೆ ಸಮಿತಿ: ಸಿ.ಎಂ.