ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪೊಲೀಸರನ್ನು ಎಚ್ಚರಿಸಲು ಬಸ್ಸಲ್ಲಿ ನಕಲಿ ಬಾಂಬ್!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೊಲೀಸರನ್ನು ಎಚ್ಚರಿಸಲು ಬಸ್ಸಲ್ಲಿ ನಕಲಿ ಬಾಂಬ್!
ಬಿಎಂಟಿಸಿ ಬಸ್‌‌‌ನಲ್ಲಿ ನಕಲಿ ಟೈಮ್ ಬಾಂಬ್ ಕಂಡುಬಂದು ಆತಂಕ ಸೃಷ್ಟಿಸಿದ ಪ್ರಸಂಗ ನಡೆದಿದೆ.

ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿ ದೀಪಾಂಜಲಿ ನಗರದಲ್ಲಿರುವ ಬಿಎಂಟಿಸಿ ಡಿಪೋದಲ್ಲಿ ಬಸ್ಸಿನಲ್ಲಿ ಪಟಾಕಿ ಹಾಗೂ ಹಳೇ ಕೈಗಡಿಯಾರ ಸುತ್ತಿದ್ದ ನಕಲಿ ಟೈಂ ಬಾಂಬ್ ಪತ್ತೆಯಾಗಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ರಾತ್ರಿ ಪಾಳಿ ಮುಗಿಸಿ ಚಾಲಕ ಬಸ್ಸನ್ನು ದೀಪಾಂಜಲಿ ನಗರ ಡಿಪೋಗೆ ತಂದು ನಿಲ್ಲಿಸಿದ್ದರು. ಬೆಳಿಗ್ಗೆ ಬಸ್ಸನ್ನು ಸ್ಚಚ್ಚಗೊಳಿಸುತ್ತಿದ್ದಾಗ ಹಿಂಬದಿ ಆಸನದಲ್ಲಿ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ ಐದಾರು ಆನೆ ಪಟಾಕಿಗಳನ್ನು ವೈರ್‌ನಲ್ಲಿ ಸುತ್ತಿ ಹಳೇ ಕೈಗಡಿಯಾರ ಜೋಡಿಸಿ ಇಟ್ಟಿದ್ದರು.

ಕಸಗುಡಿಸುವಾತ ಟೈಂ ಬಾಂಬ್ ಎಂದು ಕೂಗುತ್ತಾ ಬಸ್ಸಿನಿಂದ ಹೊರಗೆ ಓಡಿಬಂದು ಕೂಗಿಕೊಂಡಾಗ ಡಿಪೋನಲ್ಲಿದ್ದ ಬಿಎಂಟಿಸಿ ಸಿಬ್ಬಂದಿ ಗಾಬರಿಯಿಂದ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರೀಶೀಲಿಸಿದಾಗ ಅದು ನಕಲಿ ಎಂದು ಗೊತ್ತಾಯಿತು.

ನಕಲಿ ಬಾಂಬ್ ಜೊತೆಗೆ ಪತ್ರವೊಂದು ದೊರೆತಿದ್ದು, ಬಾಂಬ್ ಇಟ್ಟು ಆತಂಕ ಸೃಷ್ಟಿಸುವುದು ನಮ್ಮ ಕೆಲಸವಲ್ಲ. ಪೊಲೀಸರು ಕೈಗೊಂಡಿರುವ ಭದ್ರತಾ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವುದೇ ಉದ್ದೇಶ. ಬಸ್ಸುಗಳಲ್ಲಿ ಭಯೋತ್ಪಾದಕರು ಬಾಂಬ್ ಇಟ್ಟರೆ ಅದನ್ನು ತಡೆಯಲು ಪೊಲೀಸರಿಂದ ಸಾಧ್ಯವೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಹೀಗೆ ಮಾಡಲಾಗಿದೆ ಎಂದು ಬರೆಯಲಾಗಿದೆ.

ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೂರು ತಿಂಗಳ ಹಿಂದೆ ವಿಜಯನಗರದಿಂದ ಮೆಜೆಸ್ಟಿಕ್‌ಗೆ ಬಂದ ಬಿಎಂಟಿಸಿ ಬಸ್ಸಲ್ಲಿ ನಾಡಬಾಂಬ್ ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಡಿಕೇರಿ: ವಿಚಾರಣಾಧೀನ ಕೈದಿ ಪರಾರಿ
ಪೋಲಿಯೋ: ಆತಂಕ ಹುಟ್ಟುಹಾಕಿದ ವದಂತಿ
ಚೆಲುವರಾಯ ಹೇಳಿಕೆಗೆ ತಿರುಗಿಬಿದ್ದ ರಾಜಣ್ಣ
ಗೌಡರ ವಿರುದ್ಧ ಮೊಕದ್ದಮೆ: ಯಡಿಯೂರಪ್ಪ
ಬಿಜೆಪಿ ಬೆಂಬಲಿಸುವಂತೆ ಎಲ್ಲೂ ಹೇಳಿಲ್ಲ: ಸಿದ್ದು
ಫೆಬ್ರವರಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ: ಸಿಎಂ