ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದುಬಾರಿ ಶುಲ್ಕ ಬೇಡ: ಸಿಎಂ ಸೂಚನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದುಬಾರಿ ಶುಲ್ಕ ಬೇಡ: ಸಿಎಂ ಸೂಚನೆ
ಬಿಎಂಐಸಿ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಶುಲ್ಕ ವಿನಾಯಿತಿ ನೀಡುವಂತೆ ನೈಸ್ ಸಂಸ್ಥೆಗೆ ಸೂಚಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಉಪಚುನಾವಣೆ ಪ್ರಚಾರಕ್ಕೆ ತೆರಳುವ ಮಾರ್ಗದಲ್ಲಿ ಮಾತನಾಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ದುಬಾರಿ ಶುಲ್ಕ ಕಡಿಮೆ ಮಾಡುವ ಕುರಿತು ನೈಸ್ ಸಂಸ್ಥೆ ಮುಖ್ಯಸ್ಥರೊಂದಿಗೆ ಲೋಕೋಪಯೋಗಿ ಸಚಿವರು ಚರ್ಚಿಸಲಿದ್ದು, ಒಂದೆರಡು ದಿನಗಳಲ್ಲಿ ಶುಲ್ಕ ಕಡಿಮೆಯಾಗಬಹುದು ಎಂದರು.

ಅಕ್ರಮ ಗಣಿಗಾರಿಕೆಗೆ ಸಂಬಂಧ ಲೋಕಾಯುಕ್ತರು ನೀಡಿರುವ ವರದಿಯನ್ನು ಪರೀಶೀಲಿಸಿ ಕ್ರಮಕೈಗೊಳ್ಳುವ ಕುರಿತು ಮೂರು ಮಂದಿ ಅಧಿಕಾರಿಗಳ ತಂಡ ರಚಿಸಲಾಗಿದೆ. ಈ ತಂಡ ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿರು.

"ರಾಜ್ಯದಲ್ಲಿ 20 ಸಾವಿರ ಕೋಟಿ ರೂ.ಗಳಷ್ಟು ಅಕ್ರಮ ಗಣಿಗಾರಿಕೆ ನಡೆದಿರುವುದು ಸಾಮಾನ್ಯ ವಿಷಯವಲ್ಲ. ಅದು ಈ ಅಧಿವೇಶನದಲ್ಲಿ ಚರ್ಚೆಯಾಗಲಿದ್ದು, ನಮ್ಮಲ್ಲಿ ಯಾವುದೇ ಮುಚ್ಚುಮರೆ ಇಲ್ಲ" ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕುಮಾರ್ ಅವಧಿ ಗಣಿ ಅಕ್ರಮ ತನಿಖೆಯಾಗಲಿ: ಧನಂಜಯಕುಮಾರ್
ಪೋಲಿಯೋ ಆವಾಂತರಕ್ಕೆ ಕಂಪನಿಗಳ ಲಾಭಿ ಕಾರಣ?
ಮರಳಿ 'ಕೈ' ಹಿಡಿಯುವತ್ತ ಬಂಗಾರಪ್ಪ ಚಿತ್ತ
ಪೋಲಿಯೋ ಲಸಿಕೆ ಸುರಕ್ಷಿತ: ಸಚಿವ ಶ್ರೀರಾಮುಲು
ಮದ್ದೂರಿನಲ್ಲಿ 5 ಸಾವಿರಕ್ಕೂ ಹೆಚ್ಚು ಸೀರೆ ವಶ
ಪೊಲೀಸ್ ಜೀಪುಗಳಲ್ಲೇ ಹಣ ಸಾಗಣೆ: ಕುಮಾರ್