ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 197 ಕ್ಷೇತ್ರಗಳ ಭಾವಚಿತ್ರ ಸಹಿತ ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಉಳಿದ 27 ಕ್ಷೇತ್ರಗಳ ಪಟ್ಟಿಯನ್ನು ಫೆ.10 ರಂದು ಪ್ರಕಟಿಸಲಿದೆ.
ನಕಲಿ ಮತದಾನ ತಡೆಯಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾವಚಿತ್ರ ಸಹಿತ ಮತದಾರರ ಪಟ್ಟಿಯನ್ನು ಬಳಸಲಾಗುವುದು. ಈಗ ಪ್ರಕಟಗೊಂಡಿರುವ 197 ಕ್ಷೇತ್ರಗಳಲ್ಲಿ 3.45 ಕೋಟಿ ಮತದಾರರಿದ್ದಾರೆ. ಆ ಪೈಕಿ 1.75 ಕೋಟಿ ಪುರುಷರು ಮತ್ತು 1.70 ಕೋಟಿ ಮಹಿಳೆಯರು ಇದ್ದಾರೆ.
ಮತದಾರರ ಪಟ್ಟಿಯಲ್ಲಿ ಯಾವುದಾದರೂ ದೋಷ ಕಂಡು ಬಂದಲ್ಲಿ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಎಂ.ಎನ್.ವಿದ್ಯಾಶಂಕರ್ ತಿಳಿಸಿದ್ದಾರೆ.
|