ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಡಾಕ್ಟರ್' ಅಂತ ಕರೀಬೇಡಿ-ಯಡಿಯೂರಪ್ಪ ಆಜ್ಞೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಡಾಕ್ಟರ್' ಅಂತ ಕರೀಬೇಡಿ-ಯಡಿಯೂರಪ್ಪ ಆಜ್ಞೆ
ಹಾರ-ತುರಾಯಿಯನ್ನು ಹಾಕಬೇಡಿ...
NRB
'ಇನ್ನು ಮುಂದೆ ನನ್ನನ್ನು ಯಾರೂ ಡಾಕ್ಟರ್ ಅಂತ ಕರೆಯಬೇಡಿ, ಹಾಗೆಯೇ ಹಾರ ತುರಾಯಿಯನ್ನು ಕೊರಳಿಗೆ ಹಾಕಬಾರದು ಅಂತ' ಶೀಘ್ರವೇ ಸರಕಾರಿ ಆಜ್ಞೆ ಹೊರಡಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ನಗರದ ಮಹಾದೇವಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಗೋಕರ್ಣಕ್ಕೆ ಹೋಗಿದ್ದೆ ಅಲ್ಲಿ ರಾಘವೇಶ್ವರಶ್ರೀಗಳು ಹಾಜರಿದ್ದರು, ಏನಾದರು ಮಹತ್ವದ ನಿರ್ಧಾರ ಕೈಗೊಳ್ಳಬೇಕೆಂದು ಪ್ರೇರಣೆಯಾಯಿತು. ಆ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು.

ಇನ್ನು ಮುಂದೆ ಯಾರೂ 'ಡಾಕ್ಟರ್ ಯಡಿಯೂರಪ್ಪ' ಅಂತ ಕರೆಯಬಾರದು, ಸಭೆ-ಸಮಾರಂಭಗಳಲ್ಲಿ ಹಾರ ತುರಾಯಿಯನ್ನು ಸ್ವೀಕರಿಸಬಾರದು ಎಂದು ನಿರ್ಧರಿಸಿದ್ದು ಅದಕ್ಕಾಗಿ ಸರಕಾರಿ ಆಜ್ಞೆಯನ್ನು ತಕ್ಷಣವೇ ಹೊರಡಿಸುವುದಾಗಿ ಹೇಳಿದ ಮುಖ್ಯಮಂತ್ರಿಗಳು, ತಾನು ಸಾಮಾನ್ಯ ರೈತನ ಮಗನಾಗಿಯೇ ಇರಲು ಬಯಸಿದ್ದೇನೆ ಎಂದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿಯೇ ಹಾರ-ತುರಾಯಿ ಸ್ವೀಕರಿಸಬಾರದು ಅಂತ ನಿರ್ಧರಿಸಿದ್ದೆ, ಆದರೆ ಸಹೋದ್ಯೋಗಿಗಳ ಒತ್ತಾಯಕ್ಕೆ ಮಣಿದು ನಿರ್ಧಾರವನ್ನು ಸಡಿಲಿಸಿದ್ದೆ. ಆದರೆ ಮಠ, ದೇವಸ್ಥಾನಗಳಲ್ಲಿ ಹಾರ ಹಾಕುವಾಗ ಬೇಡ ಎನ್ನಲು ಸಾಧ್ಯವಿಲ್ಲ. ಆದರೆ ಇನ್ನು ಮುಂದೆ ಸಭೆ, ಸಮಾರಂಭಗಳಲ್ಲಿ ಹಾರ-ತುರಾಯಿಗೆ ನಿಷೇಧ ಎಂದು ತಿಳಿಸಿದರು.

ನನಗಿಂತ ಅರ್ಹ ವ್ಯಕ್ತಿಗಳು ತುಂಬಾ ಮಂದಿ ಇದ್ದಾರೆ, ಅವರಿಗೆ ಡಾಕ್ಟರೇಟ್ ಬರಬೇಕು, ಆ ನಿಟ್ಟಿನಲ್ಲಿ ನನಗೆ ಡಾಕ್ಟರ್ ಎಂಬ ಹೊಗಳಿಕೆಯ ಅಗತ್ಯವಿಲ್ಲ ಅದನ್ನು ದಯವಿಟ್ಟು ಬಳಸಬೇಡಿ ಎಂದು ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕುರ್ಚಿ ಬಿಡಲು ಖರ್ಗೆ ನಕಾರ:ಇಕ್ಕಟ್ಟಿನಲ್ಲಿ ಕಾಂಗ್ರೆಸ್
ಮಠ-ಮಠಾಧೀಶರ ವಿರುದ್ಧ ಗೌಡರ ಆಕ್ರೋಶ
ಪಬ್ ದಾಳಿ-ಮೇಯರ್ ವಿರುದ್ಧವೇ ಕೇಸು: ಬೊಂಡಾಲ
ಮೊಯ್ಲಿಗೆ ವಿಳಾಸವೇ ಇಲ್ಲ: ಯಡಿಯೂರಪ್ಪ ವ್ಯಂಗ್ಯ
ವರ್ಗಾವಣೆಯಲ್ಲಿ ಸಿಎಂ ಹಾಗೂ ಮಕ್ಕಳ ಕೈವಾಡವಿಲ್ಲ: ರವಿ
ಯಾರಿಗೂ ಅನ್ಯಾಯ ಮಾಡಿಲ್ಲ: ಯಡಿಯೂರಪ್ಪ