ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಯಡಿಯೂರಪ್ಪನ ಪಾಪದ ಕೊಡ ತುಂಬಿದೆ: ಸಿದ್ದರಾಮಯ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಡಿಯೂರಪ್ಪನ ಪಾಪದ ಕೊಡ ತುಂಬಿದೆ: ಸಿದ್ದರಾಮಯ್ಯ
NRB
ಸುಳ್ಳಿನ ಸರದಾರನಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರ ಪಾಪದ ಕೊಡ ತುಂಬಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಸಿದ್ದರಾಮಯ್ಯ, ರಾಜ್ಯದಲ್ಲಿನ ಆಡಳಿತಾರೂಢ ಬಿಜೆಪಿ ಸರ್ಕಾರ ಶೀಘ್ರವೇ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಣ - ಹೆಂಡ ಹಂಚಿ ಗೆಲುವು ಸಾಧಿಸಿದೆ ಎಂದು ಪಕ್ಷದ ಸಚಿವರಾದ ಈಶ್ವರಪ್ಪನವರೇ ಸ್ವತಃ ಹೇಳಿರುವುದು ಈ ಹಿಂದೆ ಕಾಂಗ್ರೆಸ್ ಮಾಡಿದ ಆರೋಪವನ್ನು ಪುಷ್ಟೀಕರಿಸುತ್ತದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವುದು ಸೂಕ್ತ ಎಂದು ಹೇಳಿದರು.

ಮುಖ್ಯಮಂತ್ರಿ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನದ ಗೌರವ ಕಾಪಾಡಲಿ. ಬಿಜೆಪಿ ನಡೆಸಿದ ಆಪರೇಷನ್ ಕಮಲವೇ ಈಗ ಆ ಪಕ್ಷಕ್ಕೆ ಮುಳುವಾಗಿದೆ. ಪಕ್ಷದಲ್ಲಿ ಉಲ್ಬಣಗೊಂಡಿರುವ ಆಂತರಿಕ ವಿದ್ಯಮಾನಗಳು ಇದಕ್ಕೆ ಸಾಕ್ಷಿ. ಇದರ ಪರಿಣಾಮ ಏನೆಂದರೆ, ಯಡಿಯೂರಪ್ಪನವರು ಅಧಿಕಾರದ ಗದ್ದುಗೆಯನ್ನು ಕಳೆದುಕೊಳ್ಳುವುದು ನಿಶ್ಚಿತ ಎಂದರು.

ಯಡಿಯೂರಪ್ಪನವರೇ ನಮ್ಮ ಪ್ರಶ್ನಾತೀತ ನಾಯಕರು ಎಂದೆನ್ನುತ್ತಿದ್ದ ಬಿಜೆಪಿ ಪ್ರಮುಖ ಮುಖಂಡರೇ ಇದೀಗ ಸಿಎಂ ವಿರುದ್ಧ ತಿರುಗಿ ಬಿದ್ದಿದ್ದಾರೆ. ಭಿನ್ನಮತ ಶಮನಕ್ಕಾಗಿ ಬಿಜೆಪಿ ಹರಸಾಹಸ ಪಡುತ್ತಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜನಾರ್ದನ ರೆಡ್ಡಿಗೆ ಹೈಕಮಾಂಡ್ ಬುಲಾವ್
4 ದಿನ ಕಳೆದರೂ ಪತ್ತೆಯಾಗದ ಅಭಿಷೇಕ್ ಶವ
ಕರುಣಾಕರ ರೆಡ್ಡಿಯನ್ನು ಡಿಸಿಎಂ ಮಾಡಿ: ಗಣಿಧಣಿಗಳ ಪಟ್ಟು
ಬಾಡೂಟದಲ್ಲಿ ಬಿಬಿಎಂಪಿ ಕೈವಾಡವಿಲ್ಲ: ನೌಕರರ ಸಂಘ
ನನ್ನ ಹೇಳಿಕೆಯನ್ನೇ ತಿರುಚಲಾಗಿದೆ: ಕೆ.ಎಸ್.ಈಶ್ವರಪ್ಪ
ಬಳ್ಳಾರಿ ಗಣಿಧಣಿಗಳಿಗೆ ಆಂಧ್ರ ಸಿಎಂ ಕುಮ್ಮಕ್ಕು?