ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಣ-ಹೆಂಡ ಹಂಚಿಕೆ: ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣ-ಹೆಂಡ ಹಂಚಿಕೆ: ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
ಬಿಜೆಪಿ ಹಣ, ಹೆಂಡ ಹಂಚಿದೆ ಎಂಬ ಪ್ರಕರಣವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದೂರಿನ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸುವಂತೆ ಕೆಪಿಸಿಸಿ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ ಶಿವಕುಮಾರ್, ನೇತೃತ್ವದಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಭೇಟಿ ಮಾಡಿ ಹಣ, ಹೆಂಡ ಹಂಚಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 19 ಸ್ಥಾನ ಗಳಿಸಿದೆ. ಇದನ್ನು ತಮ್ಮ ಪಕ್ಷದ ನಾಯಕರೇ ಒಪ್ಪಿಕೊಂಡಿದ್ದಾರೆ. 19 ಮಂದಿ ಬಿಜೆಪಿ ಸಂಸದರ ಆಯ್ಕೆ ಕಾನೂನು ಬದ್ಧವಲ್ಲ ಇದು ಕಾನೂನು ಬಾಹಿರವಾಗಿದೆ ಎಂದು ಘೋಷಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ರಾಜ್ಯಪಾಲರಿಗೆ ಒತ್ತಾಯಿಸಿದ್ದಾರೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸಾಕಷ್ಟು ಅಕ್ರಮಗಳನ್ನು ನಡೆಸಿತು. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರ ಮನೆ ಮೇಲೆ ದಾಳಿ ನಡೆಸಿದಾಗ ಹಣ, ಹೆಂಡ ಪತ್ತೆಯಾಗಿತ್ತು. ಕಾಂಗ್ರೆಸ್ ಪಕ್ಷ ಹಲವಾರು ಪ್ರಕರಣಗಳ ದೂರುಗಳನ್ನು ದಾಖಲು ಮಾಡಿತ್ತು. ಆದರೆ ಇಷ್ಟೆಲ್ಲಾ ಆದರೂ ಚುನಾವಣೆ ಆಯೋಗ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.

ಇದರ ಜೊತೆಗೆ ಸರ್ಕಾರಿ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದೆ. ಹಣ, ಹೆಂಡವನ್ನು ಬಿಜೆಪಿ ಪಕ್ಷ ಹಂಚಿಕೆ ಮಾಡಿದೆ ಎಂದು ಬಿಜೆಪಿ ಸಚಿವ ಈಶ್ವರಪ್ಪನವರೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್‌‌ನ ಎಲ್ಲ ಆರೋಪಗಳು ಸತ್ಯ ಎಂಬುದು ಸಾಬೀತಾಗಿದೆ. ಇಷ್ಟಾದರೂ ಚುನಾವಣಾ ಆಯೋಗ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ. ಈಗಲಾದರು ಬಿಜೆಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಸಲ್ಲಿಸಲಾದ ಮನವಿ ಪತ್ರದಲ್ಲಿ ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿದ ಈಶ್ವರಪ್ಪ!
ಯಡಿಯೂರಪ್ಪನ ಪಾಪದ ಕೊಡ ತುಂಬಿದೆ: ಸಿದ್ದರಾಮಯ್ಯ
ಜನಾರ್ದನ ರೆಡ್ಡಿಗೆ ಹೈಕಮಾಂಡ್ ಬುಲಾವ್
4 ದಿನ ಕಳೆದರೂ ಪತ್ತೆಯಾಗದ ಅಭಿಷೇಕ್ ಶವ
ಕರುಣಾಕರ ರೆಡ್ಡಿಯನ್ನು ಡಿಸಿಎಂ ಮಾಡಿ: ಗಣಿಧಣಿಗಳ ಪಟ್ಟು
ಬಾಡೂಟದಲ್ಲಿ ಬಿಬಿಎಂಪಿ ಕೈವಾಡವಿಲ್ಲ: ನೌಕರರ ಸಂಘ