ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಭಿಷೇಕ್ ಮೃತದೇಹ ಪತ್ತೆಗಾಗಿ 'ಎಂಇಜಿ ಯೋಧರು'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಭಿಷೇಕ್ ಮೃತದೇಹ ಪತ್ತೆಗಾಗಿ 'ಎಂಇಜಿ ಯೋಧರು'
ಕಳೆದ ನಾಲ್ಕು ದಿನಗಳ ಹಿಂದೆ ಮೋರಿಯಲ್ಲಿ ಕೊಚ್ಚಿ ಹೋದ ಬಾಲಕ ಅಭಿಷೇಕ್ ಮೃತದೇಹ ಪತ್ತೆ ಮಾಡುವಲ್ಲಿ ವಿಫಲವಾಗಿರುವ ಬಿಬಿಎಂಪಿ ಈ ಜವಾಬ್ದಾರಿಯನ್ನು ಎಂಇಜಿ ಯೋಧರಿಗೆ ವಹಿಸಲು ತೀರ್ಮಾನಿಸಿದೆ.

ಭಾನುವಾರ ರಾತ್ರಿ ಸುರಿದ ಭಾರೀ ಮಳೆ ಸಂದರ್ಭದಲ್ಲಿ ಲಿಂಗರಾಜಪುರದ 5ವರ್ಷದ ಬಾಲಕ ಅಭಿಷೇಕ್ ತಾಯಿಯೊಂದಿಗೆ ಆಗಮಿಸುತ್ತಿದ್ದ ವೇಳೆ ಬಲವಂತವಾಗಿ ಕೈಬಿಡಿಸಿಕೊಂಡು ಓಡುತ್ತಿದ್ದಾಗ ಆಕಸ್ಮಿಕವಾಗಿ ಮೋರಿಗೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದ.

ಬಾಲಕನ ಮೃತದೇಹ ಪತ್ತೆ ಮಾಡಲು ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗದ ಕಾರಣ ಈ ಕೆಲಸವನ್ನು ಎಂಇಜಿ ಯೋಧರಿಗೆ ವಹಿಸಲು ಪಾಲಿಕೆ ತೀರ್ಮಾನಿಸಿದೆ. ಬಾಲಕ ಮೋರಿಗೆ ಬಿದ್ದ ಸ್ಥಳದಿಂದ, ಮೋರಿ ನೀರು ಯಾವ್ಯಾವ ಕೆರೆಗೆ ಹರಿದು ಹೋಗುತ್ತದೆ ಎಂಬುದನ್ನು ಪತ್ತೆ ಮಾಡಿ, ಅಲ್ಲೆಲ್ಲಾ ಶೋಧ ಕಾರ್ಯಾಚರಣೆ ನಡೆಸಿ, ಮೃತದೇಹ ಪತ್ತೆ ಮಾಡುವಂತೆ ಯೋಧರಿಗೆ ಸೂಚಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಆ ಪುಣ್ಯಾತ್ಮನಿಗೆ ಓದುವುದಕ್ಕೆ ಬರಲ್ಲ'!: ಹಾಲಪ್ಪ ಕಿಡಿ
ಹಣ-ಹೆಂಡ ಹಂಚಿಕೆ: ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿದ ಈಶ್ವರಪ್ಪ!
ಯಡಿಯೂರಪ್ಪನ ಪಾಪದ ಕೊಡ ತುಂಬಿದೆ: ಸಿದ್ದರಾಮಯ್ಯ
ಜನಾರ್ದನ ರೆಡ್ಡಿಗೆ ಹೈಕಮಾಂಡ್ ಬುಲಾವ್
4 ದಿನ ಕಳೆದರೂ ಪತ್ತೆಯಾಗದ ಅಭಿಷೇಕ್ ಶವ