ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಾಂತ್ವನ ಹೇಳ್ಲಿಕ್ಕೂ ಬಿಬಿಎಂಪಿಗೆ ಏನು ತೊಂದ್ರೆ: ಲೋಕಾಯುಕ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಂತ್ವನ ಹೇಳ್ಲಿಕ್ಕೂ ಬಿಬಿಎಂಪಿಗೆ ಏನು ತೊಂದ್ರೆ: ಲೋಕಾಯುಕ್ತ
NRB
'ಯಾರು ಎಷ್ಟೇ ದೊಡ್ಡ ಹುದ್ದೆಯಲ್ಲಿ ಇರಲಿ ಮಾನವೀಯತೆಯಿಂದ ಕೆಲಸ ಮಾಡಬೇಕು. ಅಭಿಷೇಕ್‌ನನ್ನು ಕಳೆದುಕೊಂಡ ಕುಟುಂಬಕ್ಕೆ ಮಾನವೀಯತೆಯಿಂದ ಎರಡು ಸಾಂತ್ವನದ ಮಾತು ಹೇಳುವುದಕ್ಕೆ ಏನು ತೊಂದರೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ ರೀತಿ ಇದು.

ಭಾನುವಾರ ರಾತ್ರಿ ಬಂದ ಭಾರೀ ಮಳೆಯಿಂದಾಗಿ ಲಿಂಗರಾಜಪುರದ ಮೋರಿ ನೀರಿನಲ್ಲಿ ಕೊಚ್ಚಿ ಹೋದ ಅಭಿಷೇಕ್ ಮನೆಗೆ ಗುರುವಾರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ದೊಡ್ಡ ಸ್ಥಾನದಲ್ಲಿ ಕುಳಿತಿದ್ದೇವೆ ಎಂದು ಮಾನವೀಯತೆ ಮರೆಯುವುದು ತಪ್ಪು, ಮಾತನಾಡುವುದು ಸರಿ ಇಲ್ಲ ಎಂದ ಮೇಲೆ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವುದಕ್ಕೆ ಏನು ಕಷ್ಟ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ನಾನು ಲೋಕಾಯುಕ್ತನಾಗಿ ಇಲ್ಲಿಗೆ ಬಂದಿಲ್ಲ, ಸಾಮಾನ್ಯ ಪ್ರಜೆಯಾಗಿ ಸಾಂತ್ವನ ಹೇಳಲು ಬಂದಿದ್ದೇನೆ ಎಂದ ಹೆಗ್ಡೆ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗದಿದ್ದ ಮೇಲೆ ಬಿಬಿಎಂಪಿ ಎಂದು ಯಾಕೆ ಮಾಡಬೇಕು?ಎಂದು ಖಾರವಾಗಿ ಪ್ರಶ್ನಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿದ್ದರಾಮಯ್ಯ ನಾಯಕ ಪಟ್ಟ ಹಾದಿ ಸುಗಮ
ಈಶ್ವರಪ್ಪ ಸಚಿವರಾಗಿ ಮುಂದುವರಿಯಲು ಯೋಗ್ಯರಲ್ಲ: ಆರ್.ವಿ.
ಭಿನ್ನಮತ: ರೆಡ್ಡಿ ಬೆಂಬಲಿಗರಿಂದ ರಹಸ್ಯ ಚರ್ಚೆ
ಬೆಂಗಳೂರಿನಲ್ಲಿ ಅಸ್ಸಾಂನ 3 ಉಗ್ರರ ಸೆರೆ
ಸರ್ಕಾರಿ ಕಾಲೇಜು-ಎಲ್ಲರಿಗೂ ಪ್ರವೇಶ: ಲಿಂಬಾವಳಿ
ರಜಪೂತರ ಹೆಸರಲ್ಲಿ ಈತ ವಂಚಿಸಿದ್ದು 1,800ಕೋಟಿ !