ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಲೋಕಾಯುಕ್ತರ ವಿರುದ್ಧ ಹೂಡಿದ ದೂರು ವಾಪಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಾಯುಕ್ತರ ವಿರುದ್ಧ ಹೂಡಿದ ದೂರು ವಾಪಸ್
ಮುಖ್ಯಮಂತ್ರಿ ಯಡಿಯೂರಪ್ಪ ಸಂಧಾನ ಸಫಲ
NRB
ಮೋರಿ ನೀರಿನಲ್ಲಿ ಕೊಚ್ಚಿಹೋದ ಬಾಲಕ ಅಭಿಷೇಕ್ ಪ್ರಕರಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ವಿರುದ್ಧ ಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ಅವರು ಹೂಡಿರುವ ಮಾನನಷ್ಟ ಮೊಕದ್ದಮೆಯನ್ನು ವಾಪಸ್ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.

ಬಾಲಕ ಅಭಿಷೇಕ್ ಪ್ರಕರಣದ ಕುರಿತಂತೆ ಖಾಸಗಿ ವಾಹಿನಿಯೊಂದು ನಡೆಸಿದ ಸಂದರ್ಶನದ ವೇಳೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರು ಬಿಬಿಎಂಪಿ ಆಯುಕ್ತ ಸುಬ್ರಹಣ್ಯರ ವಿರುದ್ಧ ಹರಿಹಾಯ್ದಿದ್ದರು. ನಂತರ ಆಯುಕ್ತರು ಶನಿವಾರ ನಗರ ನ್ಯಾಯಾಲಯದಲ್ಲಿ ಹೆಗ್ಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಇದೀಗ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ವಿರುದ್ಧ ಬಿಬಿಎಂಪಿ ಆಯುಕ್ತರು ಹೂಡಿರುವ ಮೊಕದ್ದಮೆಯನ್ನು ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಡೆಸಿದ ಸಂಧಾನ ಫಲಕಾರಿಯಾಗಿರುವ ಹಿನ್ನೆಲೆಯಲ್ಲಿ ಆಯುಕ್ತ ಸುಬ್ರಹಣ್ಯರು ಈ ನಿರ್ಧಾರ ಕೈಗೊಂಡಿದ್ದಾರೆ.

ಲೋಕಾಯುಕ್ತ ನ್ಯಾ.ಹೆಗ್ಡೆಯವರು ತನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ದೂರಿ ನಗರದ 5ನೇ ಎಸಿಎಂಎಂ ಕೋರ್ಟ್‌ನಲ್ಲಿ ಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ಅವರು ಶನಿವಾರ ಮಾನನಷ್ಟ ದಾವೆ ದಾಖಲಿಸಿದ್ದರು.

ಕಳೆದ ಭಾನುವಾರ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಲಿಂಗರಾಜಪುರದ ಬಾಲಕ ಅಭಿಷೇಕ್ ಮೋರಿ ನೀರಿನಲ್ಲಿ ಕೊಚ್ಚಿ ಹೋಗಿದ್ದ, ಈ ಸಂದರ್ಭದಲ್ಲಿ ಬಿಬಿಎಂಪಿ, ಅಗ್ನಿಶಾಮಕ ದಳ ಬಾಲಕನ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದರೂ ಕೂಡ ಈವರೆಗೂ ಬಾಲಕನ ಮೃತದೇಹ ಪತ್ತೆಯಾಗಿಲ್ಲವಾಗಿತ್ತು. ಮೃತ ಬಾಲಕನ ಕುಟುಂಬಕ್ಕೆ ಭೇಟಿ ನೀಡಿದ ನಂತರ ಲೋಕಾಯುಕ್ತ ಹೆಗ್ಡೆಯವರು ಆಯುಕ್ತರ ವಿರುದ್ಧ ಕಿಡಿಕಾರಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೇಟ್ಲಿ ಅಗತ್ಯವಿಲ್ಲ;ನಾನೇ ಬಗೆಹರಿಸುವೆ: ಯಡಿಯೂರಪ್ಪ
ರಾಜ್ಯದ ಅಭಿವೃದ್ಧಿಗೆ ನಾವು ಬದ್ಧ: ವೀರಪ್ಪ ಮೊಯ್ಲಿ
ಕನ್ನಡ ಧ್ವಜ ಹಾರಿಸಲು ಸರ್ಕಾರ ಅಡ್ಡಗಾಲು: ಕರವೇ ಕಿಡಿ
ಕೊನೆಗೂ ಸಿದ್ದರಾಮಯ್ಯಗೆ ಒಲಿದ 'ವಿಪಕ್ಷ ಗದ್ದುಗೆ'
ಅಸಮಾಧಾನ ಹೊರಹಾಕಿದ್ರೆ ಎಚ್ಚರ: ಡಿ.ವಿ.ಸದಾನಂದ ಗೌಡ
ಬಿಕ್ಕಟ್ಟನ್ನು ಜೇಟ್ಲಿ ಪರಿಹರಿಸುತ್ತಾರೆ: ಈಶ್ವರಪ್ಪ