ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮತ್ತೆ ಮೂವರಿಗೆ ಎಚ್‌1ಎನ್‌1 ಸೋಂಕು ಶಂಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತೆ ಮೂವರಿಗೆ ಎಚ್‌1ಎನ್‌1 ಸೋಂಕು ಶಂಕೆ
ಜಾಗತಿಕವಾಗಿ ಭೀತಿ ಮೂಡಿಸುತ್ತಿರುವ ಹಂದಿಜ್ವರ ರಾಜಧಾನಿಗೂ ಹರಡಿದ್ದು, ಇದೀಗ ಸ್ವೀಡನ್ ದೇಶದ ಮಹಿಳೆ ಸೇರಿದಂತೆ ಮೂರು ಮಂದಿಗೆ ಎಚ್1ಎನ್1 ಸೋಂಕಿನ ಶಂಕೆ ಇದ್ದು, ಅವರನ್ನು ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾರತದ ಎಂಜಿನಿಯರ್, ಸ್ವೀಡನ್ ಮಹಿಳೆ ಮತ್ತು ಏರ್ ಫ್ರಾನ್ಸ್ ಸಂಸ್ಥೆಯ ಉದ್ಯೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ರಕ್ತವನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಈಗಾಗಲೇ ದಾಖಲಾಗಿರುವ ಒಟ್ಟು ಆರು ವ್ಯಕ್ತಿಗಳ ರಕ್ತವನ್ನು ರಾಷ್ಟ್ರೀಯ ವೈರಾಣುಗಳ ಸಂಸ್ಥೆಗೆ ಕಳುಹಿಸಲಾಗಿದ್ದು, ಈ ಪೈಕಿ ಇಬ್ಬರಿಗೆ ಸೋಂಕು ತಗುಲಿದೆ ಎಂದು ದೃಢಪಟ್ಟಿದೆ. ಇನ್ನೂ ನಾಲ್ವರ ರಕ್ತ ಪರೀಕ್ಷೆಯ ಬಗ್ಗೆ ಮಾಹಿತಿ ಬರಬೇಕಿದೆ ಎಂದು ಆರ್‌‌ಜಿಐಸಿಡಿ ಸಂಸ್ಥೆ ನಿರ್ದೇಶಕ ಡಾ. ಶಶಿಧರ್ ತಿಳಿಸಿದ್ದಾರೆ.

ಈ ಹಿಂದೆ ದಾಖಲಾದ ಎಚ್1ಎನ್1 ಸೋಂಕಿನಿಂದ ಬಳಲುತ್ತಿರುವ ತಾಯಿ ಮತ್ತು ಮಗಳು ಉತ್ತಮ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ತಾಯಿ ಸ್ವಲ್ಪ ಮಟ್ಟಿಗೆ ಗುಣಮುಖರಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದ್ಯುತ್ ಬಳಕೆದಾರರಿಗೆ 'ದರ ಏರಿಕೆ ಶಾಕ್'
ನಿಗಮ-ಮಂಡಳಿಯೂ ಪುನಾರಚನೆ: ಯಡಿಯೂರಪ್ಪ
ಸಚಿವ ಸಂಪುಟ ಸೇರ್ಪಡೆಗೆ ವಿ.ಸೋಮಣ್ಣ ಹಾದಿ ಸುಗಮ
ಬೆಂಗಳೂರಿಗರು ಬುದ್ಧಿವಂತರು ಅಂದ್ಕೊಂಡಿದ್ದೆ!: ಎಚ್‌ಡಿಕೆ
ಇಸ್ಕಾನ್‌ಗೆ ಅನುದಾನ ನೀಡ್ಬೇಡಿ: ಡಿ.ಕೆ.ಶಿವಕುಮಾರ್
ಆದೇಶ ಜಾರಿ ಮಾಡಿ: ಸರ್ಕಾರಕ್ಕೆ ಹೈಕೋರ್ಟ್