ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಚ್ಚರಿ ಮೂಡಿಸಿದ ರಾಜ್ಯಪಾಲ ಠಾಕೂರ್ ವರ್ಗಾವಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಚ್ಚರಿ ಮೂಡಿಸಿದ ರಾಜ್ಯಪಾಲ ಠಾಕೂರ್ ವರ್ಗಾವಣೆ
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನ ಮತ್ತು ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಸಾಕ್ಷಿಯಾಗಿದ್ದ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಎರಡು ವರ್ಷಗಳನ್ನು ಪೂರ್ಣಗೊಳಿಸುವ ಮೊದಲೇ ಸ್ಥಾನದಿಂದ ನಿರ್ಗಮಿಸುತ್ತಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಎಡೆ ಮಾಡಿಕೊಟ್ಟಿದೆ.

ಹಠಾತ್ ಬೆಳವಣಿಗೆಯ ಹಿಂದೆ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರ ಪಾತ್ರವೇ ಇರಬೇಕು ಎಂಬ ದಟ್ಟ ಅನುಮಾನ ಇದೀಗ ಬಿಜೆಪಿ ಪಾಳಯದಲ್ಲಿ ಮೂಡಿದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ ಸರ್ಕಾರದ ವೇಗವನ್ನು ನಿಯಂತ್ರಿಸಲು ಕ್ರಿಯಾಶೀಲ ರಾಜ್ಯಪಾಲರ ಅಗತ್ಯವಿದೆ ಎಂದು ಹೈಕಮಾಂಡ್‌‌ಗೆ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈ ನಡುವೆ 82 ವರ್ಷ ವಯಸ್ಸಿನ ಠಾಕೂರ್ ಅವರು ವೈಯಕ್ತಿಕ ಕಾರಣಗಳಿಂದ ಉತ್ತರ ಭಾರತದ ಯಾವುದಾದರೊಂದು ರಾಜ್ಯಕ್ಕೆ ವರ್ಗಾಯಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. ಇದಕ್ಕಾಗಿ ಜೂನ್ ತಿಂಗಳಲ್ಲಿ ಮೂರು ಬಾರಿ ದೆಹಲಿಗೆ ತೆರಳಿದ್ದರು.

ಇದೇ ವೇಳೆ ಠಾಕೂರ್ ನಿರ್ಗಮನದ ಬಗ್ಗೆ ಎರಡು ದಿನಗಳ ಮುಂಚೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ತಿಳಿದಿತ್ತು. ಈ ಬಗ್ಗೆ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಖುದ್ದು ದೂರವಾಣಿ ಮೂಲಕ ವಿಷಯ ತಿಳಿಸಿದ್ದರು ಎಂದು ತಿಳಿಸಿರುವ ಮುಖ್ಯಮಂತ್ರಿಗಳು, ನಮ್ಮ ಸರ್ಕಾರಕ್ಕೆ ತುಂಬು ಸಹಕಾರ ನೀಡಿದ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಳೆಗಾಗಿ 'ಅನಂತೇಶ್ವರ'ನ ಮೊರೆಹೊಕ್ಕ ಡಿಕೆಶಿ
ಗಣಿ ಸಮೀಕ್ಷೆ ಯಾವ ತನಿಖೆಗೂ ಸಿದ್ಧ: ಜನಾರ್ದನ ರೆಡ್ಡಿ
ಮಳೆ ಕೈ ಕೊಟ್ರೆ ವಿದ್ಯುತ್ ದರ ಏರಿಕೆ: ಈಶ್ವರಪ್ಪ
ಮೈಸೂರು: ಪೊಲೀಸ್ ಇನ್ಸ್‌ಪೆಕ್ಟರ್ ಮನೆಗೆ ಕನ್ನ!
ಭಗವಂತ ನಮ್ಮ ಕೈ ಬಿಡಲ್ಲ: ಯಡಿಯೂರಪ್ಪ
ದಿವಾಕರ ಬಾಬುವಿನದ್ದು ಕೊಲೆಗಡುಕ ಕುಟುಂಬ: ರೆಡ್ಡಿ