ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ತಮಿಳರು ಕರ್ನಾಟಕದ ಪೂರ್ವಿಕರಂತೆ!: ತಮಿಳು ಕಳಗಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಮಿಳರು ಕರ್ನಾಟಕದ ಪೂರ್ವಿಕರಂತೆ!: ತಮಿಳು ಕಳಗಂ
ರಾಜ್ಯದಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಕರವೇ ಸೇರಿದಂತೆ ಕನ್ನಡ ಪರ ಸಂಘಟನೆಗಳು ಈಗಾಗಲೇ ಸರ್ಕಾರಕ್ಕೆ ನಾಲ್ಕು ಷರತ್ತನ್ನು ವಿಧಿಸಿ ಅಂತಿಮ ಗಡುವು ಕೂಡ ನೀಡಿದೆ. ಇದೀಗ ಪ್ರತಿಮೆ ಸ್ಥಾಪನೆ ಕುರಿತಂತೆ ಉಳಗಂ ತಮಿಳು ಕಳಗಂ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಸಿ.ತೆನ್ನಿವನ್ನನ್ ಉದ್ಧಟತನದ ಹೇಳಿಕೆ ನೀಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಕರ್ನಾಟದಲ್ಲಿ ವಾಸವಾಗಿರುವ ತಮಿಳರು ಅಬ್ಬೇಪಾರಿಗಳಲ್ಲ ಅವರು ರಾಜ್ಯದ ಪೂರ್ವಿಕರು. ಅಲ್ಲದೇ ರಾಜ್ಯದ ಕೀರ್ತಿ ಹೆಚ್ಚಿಸಿದ ಕನ್ನಂಬಾಡಿ ಕಟ್ಟೆ, ವಿಧಾನಸೌಧ ನಿರ್ಮಿಸಿದ್ದು ತಮಿಳು ಕೈಗಳು. ಕೋಲಾರ ಚಿನ್ನದ ಗಣಿ, ಕೈಗಾರಿಕೆ ಕ್ಷೇತ್ರಗಳಲ್ಲಿ ರಾಜ್ಯದ ಏಳಿಗೆಗೆ ಕಾರಣರಾದವರು ತಮಿಳರು ಎಂದು ತೆನ್ನಿವನ್ನನ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಶೇ.30ರಷ್ಟು ಜನಸಂಖ್ಯೆ ಹೊಂದಿರುವ ತಮಿಳ ನಾಗರಿಕರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ನಡೆಸಿಕೊಳ್ಳಲಾಗುತ್ತಿದೆ. ವಿಧಾನಸಭೆ ಮತ್ತು ಬಿಬಿಎಂಪಿಗಳಲ್ಲಿ ನಮ್ಮ ಜನಪ್ರತಿನಿಧಿಗಳಿಲ್ಲದೆ ಇದ್ದಿದ್ದರಿಂದ ಧ್ವನಿಗೆ ಬೆಲೆ ಇಲ್ಲದಂತಾಗಿದೆ ಎಂದು ದೂರಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ಬದ್ಧ: ಆಚಾರ್ಯ
ಉಪಚುನಾವಣೆ; ಖರ್ಗೆ, ಕೃಷ್ಣಪ್ಪ ಪುತ್ರರಿಗೆ ಟಿಕೆಟ್
2 ವರ್ಷಗಳಲ್ಲಿ 947 ಮರಗಳಿಗೆ ಕೊಡಲಿ: ಯಡಿಯೂರಪ್ಪ
ಭ್ರಷ್ಟರ ವಿರುದ್ಧ ಮುಲಾಜಿಲ್ಲದೆ ಕ್ರಮ: ಯಡಿಯೂರಪ್ಪ
ಇಸ್ಕಾನ್ ಅವ್ಯವಹಾರ ತನಿಖೆಗೆ ಸದನ ಸಮಿತಿ
ಬುದ್ಧಿಗೆ ಗ್ರಹಣ; ಮೂಢನಂಬಿಕೆ ಸಹಿಸೋಲ್ಲ-ಸಿಎಂ