ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನೆರೆ ಸಂತ್ರಸ್ತರಿಗೆ ಸಹಾಯಹಸ್ತ ವಿಸ್ತರಿಸಿದ ಸಿದ್ದಗಂಗಾ ಶ್ರೀ (Flood | Victims | Siddaganda | Relief)
Feedback Print Bookmark and Share
 
'ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು' ಎಂಬ ನುಡಿ ಕನ್ನಡದಲ್ಲಿ ಚಾಲ್ತಿಯಲ್ಲಿದೆ. ಆದರೆ, 'ನೆರೆ ಬಂದ ಕಾಲಕ್ಕೆ ಮಿಡಿದು ದಾನವ ಮಾಡು' ಎಂಬ ಮತ್ತೊಂದು ನುಡಿಯನ್ನು ಅದರೊಂದಿಗೆ ಸೇರಿಸಬೇಕಾದ ಒಂದಷ್ಟು ನಿದರ್ಶನಗಳು ಅಲ್ಲಲ್ಲಿ ಕಾಣಬರುತ್ತಿವೆ.

ಇದಕ್ಕೆ ಜೀವಂತ ನಿದರ್ಶನವಾಗಿ ನಿಂತವರು ತುಮಕೂರಿನ ಸಿದ್ದಗಂಗಾ ಮಠದ ಮಠಾಧೀಶರಾದ ಡಾ. ಶ್ರೀ ಶಿವಕುಮಾರ ಸ್ವಾಮಿಗಳು. ಇತ್ತೀಚೆಗಷ್ಟೇ ಉತ್ತರ ಕರ್ನಾಟಕದ ನೆರೆಪೀಡಿತ ಪ್ರದೇಶಗಳಿಗೆ ಒಂದೂವರೆ ಲಕ್ಷ ರೊಟ್ಟಿಗಳನ್ನು ಮಾಡಿಸಿ ಕಳಿಸಿದ್ದ ಶ್ರೀಗಳು ಈಗ ಮತ್ತೊಂದು ಹೆಜ್ಜೆಯನ್ನು ಮುಂದಿರಿಸುವ ಮೂಲಕ ಹೃದಯವಂತಿಕೆಯನ್ನು ಮೆರೆದಿದ್ದಾರೆ ಹಾಗೂ ನೊಂದವರ ಸೇವೆಯಲ್ಲಿಯೇ ಶಿವನನ್ನು ಕಾಣುವ ಶರಣರ ಕಾಯಕಶೈಲಿಗೆ ಸಾಕ್ಷಿಯಾಗಿದ್ದಾರೆ.

ನೆರೆ ಸಂತ್ರಸ್ತರ ವಸತಿ ನಿರ್ಮಾಣಕ್ಕೆ 25 ಲಕ್ಷ ರೂ, ಪರಿಹಾರ ನಿಧಿಗೆ 10 ಲಕ್ಷ ರೂ. ಹಾಗೂ ಮಠದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ ಆ ಪ್ರದೇಶಗಳಿಗೆ ಸೇರಿದ ಮಕ್ಕಳಿಗೆ ಮುಂದಿನ ಮೂರು ವರ್ಷಗಳ ಕಾಲ ಮಠದ ವತಿಯಿಂದ ಉಚಿತ ಶಿಕ್ಷಣ ನೀಡಲು ಶ್ರೀಗಳು ನಿರ್ಧರಿಸಿದ್ದಾರೆಂದು ಸುದ್ದಿಮೂಲಗಳು ತಿಳಿಸಿವೆ.

ಈಗಾಗಲೇ ಸಂತ್ರಸ್ತರಿಗೆ ಮಠದ ವತಿಯಿಂದ ನಾಲ್ಕು ಲಾರಿ ಲೋಡುಗಳಷ್ಟು ಅಕ್ಕಿಯನ್ನು ಕಳುಹಿಸಿಕೊಡಲಾಗಿದ್ದು, ಸದರಿ ಪ್ರದೇಶಗಳಿಗೆ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮಿಯವರು ಭೇಟಿ ನೀಡಲಿದ್ದಾರೆ ಹಾಗೂ ಭಕ್ತರು ಮಠಕ್ಕೆ ನೀಡಿರುವ 27 ಲಕ್ಷ ರೂ.ಗಳಷ್ಟು ಹಣವನ್ನು ಸಂತ್ರಸ್ತರಿಗೆ ಹಂಚಲಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ