ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರವಾಹ ಸಂತ್ರಸ್ಥರಿಗೆ ಮನೆ: ಇನ್ಫೋಸಿಸ್, ವಿಪ್ರೋ ನೆರವು (Infosys | Biocon | Yeddyurappa | Wipro)
Feedback Print Bookmark and Share
 
ಭಾರತದ ಮಾಹಿತಿ ತಂತ್ರಜ್ಞಾನ ಕಂಪೆನಿ ಇನ್ಫೋಸಿಸ್ ಟೆಕ್ನಾಲಜೀಸ್ ಮತ್ತು ಬಯೋಟೆಕ್ ಕಂಪನಿ ಬಯೋಕಾನ್ ಉತ್ತರ ಕರ್ನಾಟಕದ ಪ್ರವಾಹಪೀಡಿತ ಜನರಿಗೆ 60 ಕೋಟಿ ರೂ. ವೆಚ್ಚದಲ್ಲಿ 6000 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿವೆ.

ಮುಖ್ಯಮಂತ್ರಿ ಯಡಿಯ‌ೂರಪ್ಪ ಅವರು ಶುಕ್ರವಾರ ಬೆಳಿಗ್ಗೆ ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮ‌ೂರ್ತಿ ಮತ್ತು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರನ್ನು ಭೇಟಿ ಮಾಡಿದ್ದಾಗ, ಪ್ರವಾಹದಿಂದ ನಿರ್ವಸಿತರಾದ ಜನರ ಪುನರ್ವಸತಿಗೆ ಪೂರ್ಣ ಬೆಂಬಲ ನೀಡುವುದಾಗಿ ಸರ್ಕಾರಕ್ಕೆ ಅವರು ಭರವಸೆ ನೀಡಿದ್ದಾರೆ. ಇನ್ಫೋಸಿಸ್ ಕಂಪೆನಿಯು ಮನೆಯೊಂದಕ್ಕೆ ತಲಾ ಒಂದು ಲಕ್ಷ ರೂ.ನಂತೆ 30 ಕೋಟಿ ರೂ. ವೆಚ್ಚದಲ್ಲಿ 30,000 ಮನೆಗಳ ಪುನರ್ನಿರ್ಮಾಣ ಮಾಡಲಿದ್ದು, ಬಯೋಕಾನ್ ಇದೇ ವೆಚ್ಚದಲ್ಲಿ ಇನ್ನೂ 3000 ಮನೆಗಳನ್ನು ನಿರ್ಮಿಸಿಕೊಡಲಿದೆ.

ಗ್ಲೋಬಲ್ ಸಾಫ್ಟ್‌ವೇರ್ ಕಂಪೆನಿ ವಿಪ್ರೊ ಕೂಡ ಮನೆಗಳನ್ನು ಪುನರ್ನಿಮಿಸಿಕೊಡುವ ಭರವಸೆ ನೀಡಿದ್ದು, ಈ ಕುರಿತು ಒಂದೆರಡು ದಿನಗಳಲ್ಲಿ ತನ್ನ ಬದ್ಧತೆಯನ್ನು ತಿಳಿಸಲಿದೆ.ತಾವು ಭೇಟಿ ಮಾಡಿದ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ನಿರ್ವಸಿತ ಜನರಿಗೆ ಆಶ್ರಯ ಒದಗಿಸುವ ಭರವಸೆ ನೀಡಿದ್ದಾರೆಂದು ಯಡಿಯ‌ೂರಪ್ಪ ತಿಳಿಸಿದರು.

ಇದೇ ರೀತಿ, ಅನೇಕ ಐಟಿ, ಬಯೊಟೆಕ್ ಮತ್ತು ಇತರೆ ಕ್ಷೇತ್ರಗಳ ಕಂಪೆನಿಗಳು ಪುನರ್ವಸತಿ ಕ್ರಮಗಳಲ್ಲಿ ಸರ್ಕಾರಕ್ಕೆ ಸಹಾಯಹಸ್ತ ನೀಡಲು ಮುಂದೆ ಬಂದಿವೆ. ಕುರ್ಲಾನ್ ಹಾಸಿಗೆಗಳನ್ನು ತಯಾರಿಸುವ ನಗರಮ‌ೂಲದ ಸೆಂಚುರಿ ಗ್ರೂಪ್‌ನ ಸತೀಶ್ ಪೈ ಮತ್ತು ದಯಾನಂದ ಪೈ ಅವರು 20 ಕೋಟಿ ರೂ.ವೆಚ್ಚದಲ್ಲಿ 2000 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅಳಿಯ ವಿ.ಜಿ.ಸಿದ್ಧಾರ್ಥ ಅವರ ಎಬಿಸಿ ಟ್ರೇಡಿಂಗ್ ಸಂಸ್ಥೆ 10 ಕೋಟಿ ರೂ. ವೆಚ್ಚದಲ್ಲಿ 1000 ಮನೆಗಳನ್ನು ನಿರ್ಮಿಸಿಕೊಡಲು ಬದ್ಧವಾಗಿದೆ. ಕರ್ನಾಟಕ ಹಾನಿ ನಿರ್ವಹಣೆ ಪ್ರಾಧಿಕಾರದ ಪ್ರಕಾರ, ಪ್ರವಾಹದಿಂದ ಸುಮಾರು 358.755 ಮನೆಗಳು ಕುಸಿದುಬಿದ್ದಿವೆ ಅಥವಾ ಕೊಚ್ಚಿಕೊಂಡು ಹೋಗಿವೆ.
ಸಂಬಂಧಿತ ಮಾಹಿತಿ ಹುಡುಕಿ